
ಕಳೆದ 24 ಗಂಟೆ ಅವಧಿಯಲ್ಲಿ 18 ವಿಮಾನಗಳು ಭಾರತಕ್ಕೆ ಬಂದಿವೆ: ವಿದೇಶಾಂಗ ಇಲಾಖೆಯ ವಕ್ತಾರ
ನವದೆಹಲಿ: ಕಳೆದ 24 ಗಂಟೆ ಅವಧಿಯಲ್ಲಿ 18 ವಿಮಾನ ಭಾರತಕ್ಕೆ ಬಂದಿದೆ. 18 ವಿಮಾನಗಳಲ್ಲಿ 4 ಸಾವಿರ ವಿದ್ಯಾರ್ಥಿಗಳು ಭಾರ ತಕ್ಕೆ ಬಂದಿದ್ದಾರೆ. ಇದುವರೆಗೆ 48 ವಿಮಾನಗಳಲ್ಲಿ 10 ಸಾವಿರ ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ. ಮುಂದಿನ 24 ಗಂಟೆಯಲ್ಲಿ 16 ವಿಮಾನಗಳಲ್ಲಿ ವಿದ್ಯಾರ್ಥಿಗಳ ಏರ್ಲಿಫ್ಟ್ ಮಾಡಲಾಗಿದೆ. ಉಕ್ರೇನ್ನಲ್ಲಿರುವ ಭಾರತದ ವಿದ್ಯಾರ್ಥಿಗಳ ಸುರಕ್ಷಿತ ತೆರವಿಗೆ ಮಾನವೀಯ ಕಾರಿಡಾರ್ ರಚನೆಯಾಗಿಲ್ಲ. ತಳಮಟ್ಟದಲ್ಲಿ ಮಾನವೀಯ ಕಾರಿಡಾರ್ ರಚನೆಯಾಗಿಲ್ಲ. ಖಾರ್ಕೀವ್ನಲ್ಲಿ 300, ಸುಮಿ ನಗರದಲ್ಲಿ 700 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಗುಂಡಿನ ದಾಳಿಗೊಳಗಾದ ಭಾರತದ ಹರ್ಜೋತ್ ಸಿಂಗ್ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಗುಚಿ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.