Home Cinema ‘ಲಾ’ ಸಿನಿಮಾದ ವಿಶೇಷತೆಗಳೇನು ಗೊತ್ತಾ..? ಪುನೀತ್ ನಿರ್ಮಾಣದ ‘ಲಾ’ ಟ್ರೈಲರ್ ಔಟ್

‘ಲಾ’ ಸಿನಿಮಾದ ವಿಶೇಷತೆಗಳೇನು ಗೊತ್ತಾ..? ಪುನೀತ್ ನಿರ್ಮಾಣದ ‘ಲಾ’ ಟ್ರೈಲರ್ ಔಟ್

346
0
SHARE

ಬೆಂಗಳೂರು. ಕೊರೊನಾ ಹಿನ್ನಲೆಯಲ್ಲಿ ಕನ್ನಡ ಪ್ರೇಕ್ಷಕನ ಅಭಿರುಚಿಗಳು ಬದಲಾಗಿಹೋಗಿದೆ. ಓಟಿಟಿಯ ಬೆಳವಣಿಗೆಗೂ ಆಡಿಯನ್ಸ್ ನಿಧಾನವಾಗಿ ಹೊಂದಿಕೆಯಾಗಿದ್ದಾರೆ. ಈ ವಿದ್ಯಾಮಾನಗಳ ಮಧ್ಯೆಯೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಾಣದ ಲಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬದಲಾದ ಪ್ರೇಕ್ಷಕನ ಟೇಸ್ಟ್‌ಗೆ ಈ ಲಾ ಟ್ರೈಲರ್ ಹೊಸ ರುಚಿ ಹತ್ತಿಸ್ತಿದೆ.

ಲಾ. ಓಟಿಟಿಯಲ್ಲಿ ರಿಲೀಸ್ ಆಗ್ತಿರೋ ಅಪ್ಪಟ ಕನ್ನಡದ ಸಿನಿಮಾ. ಇತ್ತೀಚೆಗೆ ತಮ್ಮ ಕೈಗೆಟುಕುವ ಓಟಿಟಿಯನ್ನ ನೆಚ್ಚಿಕೊಂಡಿದ್ದ ಪ್ರೇಕ್ಷಕರಿಗೆ ಇದೊಂದು ಸಿಹಿಸುದ್ಧಿಯೇ. ಲಾ ಸಿನಿಮಾ ನೇರವಾಗಿ ಓಟಿಟಿಯಲ್ಲಿ ಇದೇ ಜುಲೈ.17ಕ್ಕೆ ರಿಲೀಸ್ ಆಗ್ತಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಲಾ ಮೂಲಕ ಸ್ಯಾಂಡಲ್‌ವುಡ್ ಬಾಗಿಲು ತಟ್ಟುತ್ತಿದ್ದಾರೆ. ಕಥೆ ಕೇಳಿ ಥ್ರಿಲ್ ಆಗಿದ್ದ ರಾಗಿಣಿ ಸಿನಿಮಾರಂಗಕ್ಕೆ ಇಂತಹ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಮೂಲಕ ತಮ್ಮ ಸಿನಿಪುಟವನ್ನ ತೆರೆಯೋಕೆ ಫುಲ್ ಜೋಷ್‌ನಲ್ಲಿದ್ದಾರೆ.

ಜುಲೈ.17ಕ್ಕೆ ರಿಲೀಸ್ ಆಗ್ತಿರೋ ಲಾ ತನ್ನ ಸ್ಟೋರಿಲೈನ್ ಹಾಗೂ ವಿಭಿನ್ನವಾದ ಸ್ಟಾರ್‌ಕಾಸ್ಟ್ ಮೂಲಕವೇ ಗಮನ ಸೆಳೆದಿದೆ. ವೆಬ್ ಸೀರಿಸ್‌ನಲ್ಲಿ ಅಭಿನಯಿಸಿದ ಅನುಭವವಿರೋ ರಾಗಿಣಿ ಪ್ರಜ್ವಲ್‌ಗೆ ಲಾ ನಿಜಕ್ಕೂ ಚಾಲೆಂಜಿಂಗ್ ಸಿನಿಮಾವಂತೆ. ಮಾಮೂಲಿ ಮರಸುತ್ತೋ ರೋಮ್ಯಾಂಟಿಕ್ ಪಾತ್ರಗಳಿಂತ ಈ ರೀತಿಯ ಪ್ರಯೋಗತ್ಮಕ ಕ್ಯಾರೆಕ್ಟರ್‌ನಿಂದ ಸಿನಿಮಾರಂಗಕ್ಕೆ ಕಾಲಿಡ್ತಿರೋ ಖುಷಿಯು ರಾಗಿಣಿ ಪಾಲಾಗಿದೆ. ಮಹಿಳಾ ಪ್ರಧಾನ ಸಿನಿಮಾಗಳು ಮಾಯಾವಾಗ್ತಿರೋ ಪ್ರಸ್ತುತ ಸಮಯದಲ್ಲಿ ಲಾ ಒಂದು ಹೆಣ್ಣಿಗಾಗುವ ಅನ್ಯಾಯಗಳನ್ನ ಇಂಚುಇಂಚಾಗಿ ತೆರೆದಿಡುವ ಪ್ರಾಮೀಸ್ ಮಾಡ್ತಿದೆ.

ಚಿತ್ರದ ಜರ್ಬದಸ್ತ್ ಸ್ಟಾರ್‌ಕಾಸ್ಟ್ ಲಾ ಸಿನಿಮಾದ ಮೈಲೇಜ್ ಎನ್ನಬಹುದೇನೊ. ಮುಖ್ಯಮಂತ್ರಿ ಚಂದ್ರು, ಸುಧರಾಣಿ, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಅವಿನಾಶ್, ಮಂಡ್ಯರಮೇಶ್, ಕೃಷ್ಣ ಹೆಬ್ಬಾಳೆ ಸೇರಿದಂತೆ ಘಟನುಘಟಿಗಳ ದಂಡೇ ಇದೆ. ಒಂದು ನ್ಯಾಯಕ್ಕಾಗಿ ಹೋರಾಡುವ ಕಾನೂನು ವಿದ್ಯಾರ್ಥಿನಿಯ ಜೀವನದಲ್ಲಿ ಏನೆಲ್ಲ ಘಟನೆಗಳು ನಡೆಯುತ್ವೆ ಎಂಬುದೇ ‘ಲಾ’ ಸಿನಿಮಾದ ಮೈನ್ ಸ್ಟೋರಿಲೈನ್. ಟ್ರೈಲರ್ ನೋಡ್ತಿದ್ರೆ ಇದು ಪಕ್ಕಾ ಕ್ರೈಮ್ ಥ್ರಿಲ್ಲರ್ ಎನ್ನುವ ಸತ್ಯವಂತೂ ಈಗ ಬಹಿರಂಗವಾಗಿಬಿಟ್ಟಿದೆ.

ಲಾ ಸಿನಿಮಾಗೆ ರಘುಸಮರ್ಥ ಆಕ್ಷನ್-ಕಟ್ ಹೇಳಿದ್ದಾರೆ. ರಘು ಕೆಲಸ ಟ್ರೈಲರ್‌ನಲ್ಲೇ ಪ್ರೂವ್ ಆಗ್ತಿದೆ. ಒಂದಷ್ಟು ಕುತೂಹಲಕಾರಿ ಅಂಶಗಳನ್ನ ಪ್ರೇಕ್ಷಕನ ಮನಸ್ಸಿನಲ್ಲಿ ಬಿತ್ತೋಕೆ ರಘುಸಮರ್ಥ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಯಂಗ್ ಸೆನ್ಸೆಷನ್ ವಾಸುಕಿ ವೈಭವ್ ಲಾ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಡೈರೆಕ್ಟ್ ಟು ಸರ್ವಿಸ್‌ನಲ್ಲಿ ‘ಲಾ’ ಸಿನಿಮಾ ಧೂಳೆಬ್ಬಿಸೋಕೆ ರೆಡಿಯಾಗಿದ್ದು, ಭಾರತ ಮಾತ್ರವಲ್ಲದೇ ಸುಮಾರು 200 ದೇಶಗಳ ವ್ಯಾಪ್ತಿಯಲ್ಲಿ ಕನ್ನಡ ಸಿನಿಮಾವೊಂದರ ಕಂಪು ಪಸರಿಸಲಿದೆ.

ಒಟ್ಟಿನಲ್ಲಿ ವಿವಿಧ ಕಾರಣಗಳಿಂದ ಈ ಲಾ ಎಂಬ ಪ್ರಯತ್ನ ಸಿನಿಮಾಮಂದಿಯ ಗಮನ ಸೆಳೆದಿದೆ. ಕಂಟೆಂಟ್ ಈಸ್ ದಿ ಕಿಂಗ್ ಎಂಬ ನಿರ್ಧಾರಕ್ಕೆ ಬಂದಿರೋ ಪುನೀತ್ ರಾಜ್‌ಕುಮಾರ್ ಕೂಡ ಲಾ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಇದು ಪಿ.ಆರ್.ಕೆ ನಿರ್ಮಾಣ ಸಂಸ್ಥೆಗೆ ಮೂರನೇ ಸಿನಿಮಾ. ಪ್ರೇಕ್ಷಕನ ಬದಲಾದ ಸಿನಿದೃಷ್ಟಿಕೋನಕ್ಕೆ ಅನುಗುಣವಾಗಿಯೇ ನಾವು ಕಂಟೆಂಟ್ ಕೊಟ್ಟರೇ ಚೆನ್ನಾಗಿರುತ್ತೆ ಎಂಬ ಅಪ್ಪು ಡಿಸಿಶನ್ ‘ಲಾ’ ಸಿನಿಮಾ ಮೂಲಕ ಮತ್ತೊಮ್ಮೆ ಸಾಬೀತಾಗಲಿದೆ. ಓಟಿಟಿ ಮೆಚ್ಚಿಕೊಂಡ, ಅಪ್ಪಿಕೊಂಡ ಪ್ರೇಕ್ಷಕರಿಗೆ ಲಾ ಖಂಡಿತ ಒಂದು ಫ್ರೆಶ್ ಮನರಂಜನೆಯ ಕಿಕ್ ಕೊಡುತ್ತೆ ಎನ್ನುವ ಅಂಶವನ್ನ ಟ್ರೈಲರ್ ನೋಡಿದ ಪ್ರೇಕ್ಷಕ ಹೇಳಿದ್ದಾನೆ. ಜುಲೈ.17ಕ್ಕೆ ಲಾ ಹೇಗಿದೆ ಎನ್ನುವುದರ ಫುಲ್‌ಮೀಲ್ಸ್ ಸಿಗಲಿದೆ. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಈ ಲಾ ಸಿನಿಮಾಗೆ ಸಿಗೋ ಪ್ರತಿಕ್ರಿಯೆಗಳ ಬಗ್ಗೆಯೇ ಎಲ್ಲರ ಕಾತುರ ಹೆಚ್ಚಾಗಿದೆ.

 

LEAVE A REPLY

Please enter your comment!
Please enter your name here