Home Cinema ಲಾʼ ಮೂಲಕ ಸ್ಯಾಂಡಲ್‌ವುಡ್‌ಗೆ ರಾಗಿಣಿ ಚಂದ್ರನ್ ಎಂಟ್ರಿ: ಕುತೂಹಲಕಾರಿ ಮಾಹಿತಿಗಳನ್ನ ಹಂಚಿಕೊಂಡ ನಟಿ

ಲಾʼ ಮೂಲಕ ಸ್ಯಾಂಡಲ್‌ವುಡ್‌ಗೆ ರಾಗಿಣಿ ಚಂದ್ರನ್ ಎಂಟ್ರಿ: ಕುತೂಹಲಕಾರಿ ಮಾಹಿತಿಗಳನ್ನ ಹಂಚಿಕೊಂಡ ನಟಿ

268
0
SHARE

ಕನ್ನಡದ ʻಲಾʼ ಸಿನಿಮಾ ಬಿಡುಗಡೆಯ ಬಗ್ಗೆ ಚಿತ್ರದ ನಾಯಕಿ ಬಹಳ ಉತ್ಸುಕರಾಗಿದ್ದಾರೆ. ಇದೇ ಜುಲೈ 17 ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗ್ತಿರುವ ಹಿನ್ನೆಲೆಯಲ್ಲಿ ನಟಿ ರಾಗಿಣಿ ಚಂದ್ರನ್‌ ʻಲಾʼ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ.ʻಲಾʼ ಸಿನಿಮಾ ಕ್ರೈಂ ಥ್ರಿಲ್ಲರ್‌ ಕಥೆಯನ್ನ ಹೊಂದಿದ್ದು, ಇಲ್ಲಿ ನ್ಯಾಯಕ್ಕಾಗಿ ಹೋರಾಡುವ ನಂದಿನಿ ಪಾತ್ರದ ಸುತ್ತ ಕಥೆ ಇದ್ದು, ಆಸಕ್ತಿಕರ ನಿರೂಪಣೆ ಈ ಚಿತ್ರದ ಪ್ಲಸ್‌ ಪಾಯಿಂಟ್‌ ಎನ್ನುತ್ತಾರೆ ರಾಗಿಣಿ ಚಂದ್ರನ್‌.


ʻಲಾʼ ಚಿತ್ರದಲ್ಲಿ ಅಭಿನಯಿಸಲು ಸಿಕ್ಕ ಅವಕಾಶದ ಬಗ್ಗೆ ಮಾತನಾಡುತ್ತಾ, ತಾವು ಈ ಸಿನಿಮಾದಲ್ಲಿ ಅಭಿನಯಿಸಲು ಈ ಚಿತ್ರಕಥೆಯೇ ಕಾರಣ. ನಿರ್ದೇಶಕ ರಘು ಸಮರ್ಥ್‌ ಚಿತ್ರದ ಬಗ್ಗೆ ಹೇಳಿದಾಗ ಸ್ಕ್ರಿಪ್ಟ್‌ ಇಷ್ಟವಾಗಿದ್ದರಿಂದ ಈ ಚಿತ್ರದಲ್ಲಿ ಅಭಿನಯಿಸಿದ್ದಾಗಿ ತಿಳಿಸಿದ್ದಾರೆ.
ರೊಮ್ಯಾಂಟಿಕ್‌ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುವುದು ನನಗೆ ಇಷ್ಟವಿರಲಿಲ್ಲ. ಚಾಲೆಂಜಿಂಗ್‌ ಪಾತ್ರ ಹಾಗೂ ಉತ್ತಮ ಚಿತ್ರಕಥೆ ಹೊಂದಿರುವ ʻಲಾʼ ಚಿತ್ರದಲ್ಲಿ ಅಭಿನಯಿಸಿರುವುದು ತಮಗೆ ಸಂತಸದ ವಿಚಾರ ಎನ್ನುತ್ತಾರೆ ರಾಗಿಣಿ ಚಂದ್ರನ್‌.


ʻಲಾʼ ಚಿತ್ರಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ಎಂ.ಗೋವಿಂದ ನಿರ್ಮಾಪಕರಾಗಿದ್ದು, ರಘು ಸಮರ್ಥ್‌ ನಿರ್ದೇಶಕರು. ರಾಗಿಣಿ ಚಂದ್ರನ್‌ ಪ್ರಮುಖ ಪಾತ್ರದಲ್ಲಿರೋ ಈ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರ, ಅಚ್ಯುತ್‌ ಕುಮಾರ್‌, ಸುಧಾರಾಣಿ ಅಭಿನಯಿಸಿದ್ದಾರೆ.
ಸ್ಯಾಂಡಲ್‌ವುಡ್‌ನಿಂದ ಡಿಜಿಟಲ್‌ನಲ್ಲಿ ಬಿಡುಗಡೆಯಾಗ್ತಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ʻಲಾʼ ಪುನೀತ್‌ ರಾಜ್‌ ಕುಮಾರ್‌ ರವರ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ರೂಪುಗೊಂಡಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಇದೇ ಜೂನ್‌ 17 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ 200 ದೇಶಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here