Home Cinema ಬೆಳ್ಳಿತೆರೆಯ ಮೇಲೆ ಧಗಧಗಿಸುತ್ತಾ ಲೇಕ್ ಮ್ಯಾನ್ ಬದುಕಿನ ಕಥೆ..? ಮೋದಿ ಮೆಚ್ಚಿದ ಕಾಮೇಗೌಡರ ಹಿಂದೆ ಗಾಂಧಿನಗರದ...

ಬೆಳ್ಳಿತೆರೆಯ ಮೇಲೆ ಧಗಧಗಿಸುತ್ತಾ ಲೇಕ್ ಮ್ಯಾನ್ ಬದುಕಿನ ಕಥೆ..? ಮೋದಿ ಮೆಚ್ಚಿದ ಕಾಮೇಗೌಡರ ಹಿಂದೆ ಗಾಂಧಿನಗರದ ಸಂತೆ..!

247
0
SHARE

ಬೆಂಗಳೂರು. ವಯಸ್ಸು 83, ಆದರೂ ಪರಿಸರ ಸಂರಕ್ಷಣೆಯ ವಿಷಯಕ್ಕೆ ಬಂದ್ರೆ 23ರ ನವತರುಣ. ಕಾಮೇಗೌಡರ ಗತ್ತು ಅಂತದ್ದು. ಈಗ ಕಾಮೇಗೌಡರ ಖ್ಯಾತಿ ರಾಷ್ಟ್ರೀಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಯಾವಾಗ ಪ್ರಧಾನಿ ನರೇಂದ್ರಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಕಾಮೇಗೌಡರನ್ನ ಹಾಡಿಹೊಗಳಿದರೋ ಆಗಿಂನಿಂದಲೇ ಕಾಮೇಗೌಡರು ಫುಲ್ ಫೇಮಸ್ ಆಗಿಬಿಟ್ಟಿದ್ದಾರೆ. ಕಾಮೇಗೌಡರು ತಮ್ಮ ಜೀವನವನ್ನೇ ಪರಿಸರಕೋಸ್ಕರ ಮುಡಿಪಾಗಿಟ್ಟವರು. ತಮ್ಮ ಸ್ವಂತ ದುಡ್ಡಿನಲ್ಲೇ ಕೆರೆಗಳನ್ನ ನಿರ್ಮಿಸಿ ಗಮನ ಸೆಳೆದವರು. ಇಂತಹ ರಿಯಲ್ ಹೀರೊ ಈಗ ದೇಶದಾದ್ಯಂತ ಟಾಕ್ ಆಗ್ತಿದಾರೆ. ಅದು ತಮ್ಮ ಪರಿಸರ ಕಳಕಳಿಯಿಂದಲೇ.

ಇರೋದ್ರಲ್ಲೇ ಸುಖವಾಗಿರಬೇಕು ಎನ್ನುವ ಆಲೋಚನೆ ಹೊಂದಿರೋ ಕಾಮೇಗೌಡರು ಪರಿಸರಕ್ಕೆ ತಮ್ಮದೇ ಆದ ಕೊಡುಗೆಗಳನ್ನ ನೀಡಿದ್ದಾರೆ. ತಮ್ಮ ಸುತ್ತಮುತ್ತಲಿನ ಪರಿಸರ ಬೆಳವಣಿಗೆಗೆ ತಮ್ಮ ಕೈಲಾದ ಸೇವೆ ಮಾಡಿದ್ದಾರೆ. ಒಂದು ಚಿಕ್ಕಮನೆ, ವ್ಯವಸಾಯ ಹಾಗೂ ಒಂದಷ್ಟು ಕುರಿಗಳು ಕಾಮೇಗೌಡರ ಸಿರಿಸಂಪತ್ತು. ಇದನ್ನೇ ಬಳಸಿಕೊಂಡು ಇದುವರೆಗೆ 16 ಕೆರೆಗಳನ್ನ ನಿರ್ಮಿಸಿ ಜನರ ಮನಸ್ಸುಗಳನ್ನ ಕದ್ದಿದ್ದಾರೆ. ಅಲ್ಲದೇ, ವನ್ಯಜೀವಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಿಕೊಟ್ಟಿದ್ದಾರೆ ಈ ನಿಜವಾದ ನಾಯಕ.

ಕಾಮೇಗೌಡರರದ್ದು ಬಹಳ ದೊಡ್ಡ ಕೈ. ಜಲಸಂರಕ್ಷಣೆ ಹಾಗೂ ಪ್ರಾಣಿಪ್ರೀತಿಯೇ ಇವರ ಕಾಯಕ. ಇವರ ಸೇವೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗಿರೋದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಚಾರವೇ. ತಾನು ಕುರಿ ಕಾಯುತ್ತಿದ್ದ ಕುಂದೂರು ಬೆಟ್ಟ ಸದಾ ಹಸಿರಾಗಿರಬೇಕು ಎನ್ನುವ ಉದ್ದೇಶದಿಂದಲೇ ತಮ್ಮ ದುಡ್ಡಿನಿಂದಲೇ 2 ಸಾವಿರಕ್ಕೂ ಅಧಿಕ ಸಸಿಗಳನ್ನ ನೆಟ್ಟು ಬೆಳೆಸುತ್ತಿದ್ದಾರೆ. ಅಂತಹ ಆಲದಮರದ ವ್ಯಕ್ತಿತ್ವ ಈ ಕಾಮೇಗೌಡರದ್ದು.

ಈಗ ಈ ರಿಯಲ್ ಹೀರೊ ಬದುಕಿನ ಚಿತ್ರಣ ಡಾಕ್ಯುಮೆಂಟರಿ ಆಗುತ್ತಿದೆ. ಈ ಸಾಕ್ಷ್ಯಚಿತ್ರದ ಹೆಸರೇ ದಿ ಗುಡ್ ಶೆಫರ್ಡ್. ಇದನ್ನ ತಯಾರಿಸುವ ಕೆಲಸಕ್ಕೆ ಕೈ ಹಾಕಿರೋದು ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ದಯಾಳ್ ಪದ್ಮನಾಭನ್. ಕನ್ನಡದಲ್ಲಿ ತಮ್ಮ ಸಿನಿಮಾ ಕ್ರಾಫ್ಟ್ ಮೂಲಕವೇ ಹೆಸರುವಾಸಿಯಾಗಿರೋ ದಯಾಳ್ ಈ ಮಹತ್ವದ ಪ್ರಾಜೆಕ್ಟ್‌ ಗೆ ಕೈ ಹಾಕಿದ್ದಾರೆ. ಸಾಕ್ಷ್ಯಚಿತ್ರ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಮೂಡಿಬರುತ್ತಿದ್ದು, ಕಾಮೇಗೌಡರ ಒಟ್ಟು ಕಾರ್ಯಸಾಧನೆಗಳ ಮೇಲೆ ಬೆಳಕು ಚೆಲ್ಲಲಿದೆ.

ಇಂತಹ ಕ್ರಿಯೆಟಿವ್ ಪ್ರಯತ್ನಕ್ಕೆ ಕೈಹಾಕಿರೋ ನಿರ್ದೆಶಕ ದಯಾಳ್ ಒಂದಿಷ್ಟು ಹೊಸ ಆಲೋಚನೆಗಳ ಜೊತೆಗೆ ಈ ಗುಡ್ ಶೆರ್ಫಡ್ ಸಾಕ್ಷ್ಯಚಿತ್ರವನ್ನ ತಯಾರಿಸಲಿದ್ದಾರೆ. ಕಾಮೇಗೌಡರ ಅಚಿವ್‌ಮೆಂಟ್‌ಗಳನ್ನ ರಾಷ್ಟಮಟ್ಟದಲ್ಲಿ ತೋರಿಸೋ ಪ್ರಯತ್ನವನ್ನ ಈ ಡಾಕ್ಯುಮೆಂಟರಿ ಮಾಡಲಿದೆ. ಒಂದು ದಿನಪತ್ರಿಕೆಯಲ್ಲಿ ಕಾಮೇಗೌಡರ ಬಗ್ಗೆ ಸುದ್ಧಿ ಓದಿದ ತಕ್ಷಣವೇ ದಯಾಳ್ ಈ ಸಾಕ್ಷ್ಯಚಿತ್ರವನ್ನ ತಯಾರಿಸುವ ನಿರ್ಧಾರಕ್ಕೆ ಬಂದ್ರಂತೆ. ಕಾಮೇಗೌಡರ ಜೀವನದ ಕೆಲವು ಇಂಟ್ರೆಸ್ಟಿಂಗ್ ಘಟನೆಗಳ ಝಲಕ್ ಕೂಡ ಈ ಡಾಕ್ಯುಮೆಂಟರಿ ಯಲ್ಲಿ ಇರುತ್ತೆ. ಕಾಮೇಗೌಡರ ಜೊತೆಗೆ ಈಗಾಗಲೇ ಮಾತನಾಡಿರೋ ದಯಾಳ್, ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಮಾಹಿತಿಯಗಳನ್ನ ಕಲೆಹಾಕುತ್ತಿದ್ದಾರೆ. ಡಾಕ್ಯುಮೆಂಟರಿ ತಯಾರಿಸಲು ಕಾಮೇಗೌಡರು ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಒಟ್ಟಿನಲ್ಲಿ ವಿಶ್ವಮಟ್ಟದಲ್ಲಿ ಈ ಲೇಕ್ ಮ್ಯಾನ್ ಸಾಧನೆ ಸದ್ದು ಮಾಡೋದಂತೂ ಗ್ಯಾರಂಟಿ. ಮನ್ ಕೀ ಬಾತ್‌ನಲ್ಲಿ ಪ್ರಧಾನಿಗಳು ಕಾಮೇಗೌಡರ ವಿಷಯವನ್ನ ಪ್ರಸ್ತಾಪಿಸಿದ್ದೇ ತಡ, ಕಾಮೇಗೌಡರು ಹೊಸ ಸೆನ್ಸೆಷನ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಷ್ಟುದಿನ ಯಾವುದೇ ಪ್ರಚಾರದ ಹಮ್ಮುಬಿಮ್ಮಿಲ್ಲದೇ ಕೆಲಸ ಮಾಡಿದ ಕಾಮೇಗೌಡರಿಗೆ ಕಡೆಗೂ ನ್ಯಾಯಸಮ್ಮತವಾದ ಗೌರವ ಸಿಕ್ಕಿದೆ. ಬಯೊಪಿಕ್ ಮಾದರಿಯಲ್ಲೇ ಈ ಡಾಕ್ಯುಮೆಂಟರಿ ಕಾಮೇಗೌಡರ ಜೀವನದ ಕುರಿತ ರೋಚಕ ಕಹಾನಿಯೊಂದನ್ನ ಬಿಚ್ಚಿಡಲಿದೆ. ಗುಡ್ ಶೆಫರ್ಡ್ ಸಾಕ್ಷ್ಯಚಿತ್ರದ ಶೂಟಿಂಗ್ ಈ ವಾರವೇ ಶುರುವಾಗಲಿದೆ. ದಯಾಳ್ ಪದ್ಮನಾಭನ್ ಹಾಗೂ ಅವಿನಾಶ್ ಶೆಟ್ಟಿ ಜಂಟಿಯಾಗಿ ಈ ಸಾಕ್ಷ್ಯಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದು, ಬಿ.ರಾಕೇಶ್ ಕ್ಯಾಮೆರಾ ಹಿಂದೆ ನಿಲ್ಲಲಿದ್ದಾರೆ. ಅಂತೂ ಗುಡ್ ಶೆಫರ್ಡ್ ಸಾಕ್ಷ್ಯಚಿತ್ರ ಕನ್ನಡಿಗರನ್ನೂ ಒಳಗೊಂಡಂತೇ ಅನೇಕ ಪರಿಸರಪ್ರೇಮಿಗಳಿಗೂ ಸ್ಪೂರ್ತಿಯಾಗಲಿದೆ. ಇಷ್ಟುದಿನ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಸುತ್ತಾಡಿಕೊಂಡಿದ್ದ ಕಾಮೇಗೌಡರು, ಈಗ ವಲ್ಡ್‌ವೈಡ್ ಫೇಮಸ್ ಆಗಲಿದ್ದಾರೆ ಎನ್ನುವುದೇ ಸದ್ಯದ ಹ್ಯಾಪಿನ್ಯೂಸ್.

 

LEAVE A REPLY

Please enter your comment!
Please enter your name here