ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲೇ ಸಾವು..!

ಜಿಲ್ಲೆ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ತಮಟಕಲ್ ಬಳಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆಯೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಚಿತ್ರದುರ್ಗ ನಗರದ ಹೊರವಲಯದಲ್ಲಿರುವ  ತಮಟಕಲ್ ಗ್ರಾಮದ ಬಳಿಯ ಹೊಸ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇನ್ನೂ ರಾತ್ರಿ 8 ಗಂಟೆ ವೇಳೆ ಈ ಘಟನೆ ನಡೆದಿದ್ದು ರಸ್ತೆ ದಾಟುವಾಗ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಬೀರವಾಗಿ ಗಾಯಗೊಂಡ ಚಿರತೆ ಸ್ಥಳದಲ್ಲೆ ಸಾವನ್ನಪ್ಪಿದೆ.  ಮೃತ ಚಿರತೆಯನ್ನು ಎರಡು ವರ್ಷದ  ಹೆಣ್ಣು ಚಿರತೆ ಎಂದು ಗುರುತಿಸಲಾಗಿದ್ದು,ಚಿರತೆಯ ಪೋಸ್ಟ್ ಮಾಟಮ್ ನಡೆಸಲಾಗಿದೆ. ನಂತರ ಚಿರತೆಯ ದೇಹವನ್ನು ನಗರದ ಹೊರವಲಯದಲ್ಲಿರುವ ಆಡುಮಲ್ಲೇಶ್ವರ ಮೃಗಾಲಯದಲ್ಲಿ  ಸುಟ್ಟು ಹಾಕಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಸಂದೀಪ ನಾಯಕ ತಿಳಿಸಿದ್ದಾರೆ.

Leave a Reply

Your email address will not be published.