Home Health ಆಕ್ಸಿಜನ್ ಇಲ್ಲದೆ 24 ಮಂದಿ ಸೋಂಕಿತರ ದುರ್ಮರಣ!

ಆಕ್ಸಿಜನ್ ಇಲ್ಲದೆ 24 ಮಂದಿ ಸೋಂಕಿತರ ದುರ್ಮರಣ!

ಆಕ್ಸಿಜನ್ ಇಲ್ಲದೆ 24 ಮಂದಿ ಸೋಂಕಿತರ ದುರ್ಮರಣ!

461
0

ವರದಿ: ಅಶ್ವಥ್ ಕುಮಾರ್

ಚಾಮರಾಜನಗರ: ಅದು ಕೋರೊನಾ ಸೋಂಕಿತರ ಚಿಕಿತ್ಸೆಗೆಂದು ಇರುವ ಆಸ್ಪತ್ರೆ.. ಅಲ್ಲಿ ಭಾನುವಾರ ನಡೆದೇ ಹೋಯ್ತು 24 ಮಂದಿಯ ಮರಣ ಮೃದಂಗ.. ಸಾವಿಗೆ ಆಕ್ಸಿಜನ್ ಕಾರಣನಾ.. ಅಥವಾ ಅಧಿಕಾರಿಗಳ ಪ್ರತಿಷ್ಟೆ ಕಾರಣನಾ.. ನೋಡಿ ಈ ಸ್ಟೋರಿ.

ಕಳೆದ ವರ್ಷ ಕೋರೊನಾ ಮಹಾಮಾರಿಯಿಂದ ದೂರವಾಗಿದ್ದು ಹಸಿರು ವಲಯವಾಗಿದ್ದ ಚಾಮರಾಜನಗರ ಈ ವರ್ಷ ಕೋರೊನಾ ರಣಕೇಕೆಯ ನಡುವೆ ಸೋಂಕಿತರ ಮರಣ ಮೃದಂಗ ನಡೆದೇ ಹೋಯ್ತು.ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಸ್ಪತ್ರೆಯ ಪಕ್ಕದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲಾಗಿದೆ. ಇಲ್ಲಿ ಜಿಲ್ಲೆಯ ಕೋರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದೇನೆ ಬಂತೋ ತಿಳಿಯದು ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೋರೊನಾ ಸೋಂಕಿತರಿಗೆ ಸಾವಿನ ದಾರಿ ಕಾದಿತ್ತು.

ಭಾನುವಾರ ರಾತ್ರಿ ನಿಜಕ್ಕೂ ಚಾಮರಾಜನಗರ ಜಿಲ್ಲೆಗೆ ಕರಾಳ ರಾತ್ರಿಯಾಗಿತ್ತು. ಭಾನುವಾರ ರಾತ್ರಿ ಸುಮಾರು 11.30 ರ ವೇಳೆಗೆ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳು ಖಾಲಿಯಾಗಿದ್ದವು.. ವೈದ್ಯರುಗಳು ಆಕ್ಸಿಜನ್ ಇಲ್ಲದೆ ಕೈ ಚೆಲ್ಲಿದರು. ಸಮಯ ಕಳೆದಂತೆ ಸೋಂಕಿತರು ಒಬ್ಬರಾದ ಮೇಲೆ ಒಬ್ಬರು ಸಾವನ್ನಪ್ಪುತ್ತಿದ್ದರು.ಹಾಸಿಗೆಯಲ್ಲಿದ್ದವರು ತಮ್ಮ ಕಣ್ಮುಂದೆನೇ ಸಾವಾಗುತ್ತಿರುವುನ್ನು ನೋಡಲಾರದೆ ಪ್ರಾಣ ಬಿಡುವಂತಾಯಿತು. ಕೋವಿಡ್ ಆಸ್ಪತ್ರೆಯಲ್ಲಿನ ನೆರಳಾಟ ಹೊರಗೆ ಇದ್ದ ಸಂಬಂಧಿಕರಿಗೆ ತಿಳಿಯಿತು. ಕೋವಿಡ್ ಆಸ್ಪತ್ರೆಯಲ್ಲಿ ಸಾವಿನ ಮರಣ ಮೃದಂಗ ಹೆಚ್ಚಾಯಿತು. ಬೆಳಗಾಗುವಾಗಲೇ 23 ಮಂದಿ ಸಾವನ್ನಪ್ಪಿದ್ದರು. ಜೊತೆಗೆ ಹನೂರು ತಾಲ್ಲೂಕಿನ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಆಸ್ಪತ್ರೆಯ ಆವರಣದಲ್ಲಿ ಜನ ಜಾತ್ರೆಯಾಯಿತು.

ಮೃತ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟುವಂತ್ತಿತ್ತು. ಇದಕ್ಕೂ ಮೂಲ ಕಾರಣ ಏನೆಂದು ಹುಡುಕಿದಾಗ ಮೈಸೂರಿನಿಂದ ಆಕ್ಸಿಜನ್ ಸಿಲಿಂಡರ್ ಸರಭರಾಜಾಗದೆ ಇರುವುದು.ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರವರು ಸದರನ್ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಮೌಖಿಕ ಸೂಚನೆ ನೀಡಿ ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಸರಭರಾಜು ಮಾಡದಂತೆ ತಾಕೀತು ಹಾಕಿದ್ದೇ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಮರಣ ಮೃದಂಗಕ್ಕೆ ಕಾರಣ ಎನ್ನಲಾಗಿದೆ.

ಕೋರನಾ ಸೋಂಕಿತರ ಸರಣಿ ಸಾವಿನ ಬಗ್ಗೆ ರೋಚಿಗೆದ್ದ ಸಾರ್ವಜನಿಕರು ಆಸ್ಪತ್ರೆಯ ಮುಂದೆ ಧರಣಿ ನಡೆಸಿದರು , ಪರಿಸ್ಥಿತಿಯನ್ನು ಅರಿತ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿ ಕರೆದುಕೊಂಡು ಹೋದರು.ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಮರಣಮೃದಂಗದ ಸುದ್ದಿ ನ್ಯಾಷಿನಲ್ ಮಟ್ಟಕ್ಕೆ ಪ್ರಚಾರ ವಾಗುತ್ತಿದ್ದಂತೆ, ಕಾಂಗ್ರೇಸ್ ಪಕ್ಷದ ರಾಹುಲ್ ಗಾಂಧಿ ಟ್ವೀಟ್ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.

ಈ ನಡುವೆ ಬೆಂಗಳೂರಿನಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್, ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚಾಮರಾಜನಗರಕ್ಕೆ ಆಗಮಿಸಿ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರ ಸಭೆ ನಡೆಸಿದರು.ಚಾಮರಾಜನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸುದ್ದಿಘೋಷ್ಟಿ ನಡೆಸಿ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಆದೇಶ ನೀಡಿದ್ದು, ತಪ್ಪತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದರು.

ಈ ನಡುವೆ ಚಾಮರಾಜನಗರ ಶಾಸಕ ಮತ್ತು ಹನೂರು ಶಾಸಕರು ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ, ಜಿಲ್ಲಾಡಳಿತ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದೆ, ಹನೂರು ಕ್ಷೇತ್ರದ ಮೂವರು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಈ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ ಮರೆಮಾಚುತ್ತಿದೆ ಎಂದಾಗ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆ ಶಾಸಕದ್ವರು ಜಿಲ್ಲಾಧಿಕಾರಿಗಳ ಮೇಲೆ ಸಿಟ್ಟಿಗೆದ್ದ ಘಟನೆ ನಡೆಯಿತು.

ಒಟ್ಟಿನಲ್ಲಿ ಅಧಿಕಾರಿಗಳ ಪ್ರತಿಷ್ಠೆಯೋ ಆಥವಾ ಸರ್ಕಾರದ ನಿರ್ಲಕ್ಷ್ಯವೂ ತಿಳಿಯದೂ ಅಂತೂ ಕೋವಿಡ್ ಆಸ್ಪತ್ರೆಯಲ್ಲಿದ್ದ 24 ಮಂದಿಯ ಪ್ರಾಣ ಪಕ್ಷಿ ಮಾತ್ರ ಹಾರಿಹೋಗಿದ್ದು ದುರಂತವೇ ಸರಿ.

VIAಆಕ್ಸಿಜನ್ ಇಲ್ಲದೆ 24 ಮಂದಿ ಸೋಂಕಿತರ ದುರ್ಮರಣ!
SOURCEಆಕ್ಸಿಜನ್ ಇಲ್ಲದೆ 24 ಮಂದಿ ಸೋಂಕಿತರ ದುರ್ಮರಣ!
Previous articleಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ; ಕೊರೋನಾಗೆ ಕಂಗಲಾದ ಕೊಡಗಿನ‌ ಜನ
Next articleಆಕ್ಸಿಜನ್ ಇಲ್ಲದೆ 24 ಜನ ರೋಗಿಗಳ ಸಾವು ಕುರಿತು ಸಚಿವ ಮುರುಗೇಶ ನಿರಾಣಿ ಹೇಳಿದ್ದೇನು?

LEAVE A REPLY

Please enter your comment!
Please enter your name here