ನಿಮ್ಮ ಅಂಗೈಯ್ಯಲ್ಲಿನ ರೇಖೆಗಳು ಹೀಗಿದ್ದರೆ ಜೀವನದ ಗುಟ್ಟನ್ನು ತಿಳಿಸುತ್ತವೆ..!

ಲೈಫ್ ಸ್ಟೈಲ್

ಜ್ಯೋತಿಷ್ಯ ಶಾಸ್ತ್ರದಲ್ಲೂ ಹಲವಾರು ಪ್ರಕಾರಗಳಿವೆ. ಕೆಲವರು ಕುಂಡಲಿ ನೋಡಿ, ಇನ್ನು ಕೆಲವರು ಹಸ್ತ ನೋಡಿ ನಿಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿಸುವರು. ಅದರಲ್ಲೂ ಹಸ್ತದಲ್ಲಿರುವ ಕೆಲವೊಂದು ರೇಖೆಗಳು ನಿಮ್ಮ ಜೀವನದ ಸುಖ, ದುಃಖ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಹಸ್ತದಲ್ಲಿರುವಂತಹ ಪ್ರತಿಯೊಂದು ರೇಖೆಗಳು ಕೂಡ ನಿಮ್ಮ ಭವಿಷ್ಯ ಹೇಳುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಸ್ತಸಾಮುದ್ರಿಕೆ ಎಂದರೆ ಹಸ್ತದ ರೇಖೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಜೀವನದಲ್ಲಿ ಹಿಂದೆ ಆಗ ಮತ್ತು ಮುಂದೆ ಜರುಗಲಿರುವ ವಿದ್ಯಮಾನಗಳನ್ನು ತಿಳಿಸುವುದು. ಈ ವಿದ್ಯೆಯನ್ನು ಏಷಿಯಾ ಖಂಡದ ಹಲವಾರು ರಾಷ್ಟ್ರಗಳಲ್ಲಿ ಶತಮಾನಗಳಿಂದ ಅನುಸರಿಸಿಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ, ಪರ್ಷಿಯಾ, ಪ್ರಾಚೀನ ಇಸ್ರೇಲ್ ಮತ್ತು ಬ್ಯಾಬಿಲೋನಿ ಯಾದಲ್ಲಿಯೂ ಹಸ್ತಸಾಮುದ್ರಿಕೆ ಬಳಕೆಯಲ್ಲಿತ್ತು.

ಇನ್ನು ಹಸ್ತದ ರೇಖೆಗಳು ಹೇಳುವ ಮಾಹಿತಿಗಳನ್ನು ಆಧರಿಸಿ ತಮ್ಮ ಕಾರ್ಯವೈಖರಿಯನ್ನು ತೀರ್ಮಾನಿಸುತ್ತಿದ್ದವರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ ದ ಗ್ರೇಟ್ ಮತ್ತು ಅರಿಸ್ಟಾಟಲ್ ಸಹಾ ಸೇರಿದ್ದಾರೆ. ಅರಿಸ್ಟಾಟಲ್‌ರವರು ಹೇಳಿರುವ ಪ್ರಕಾರ ಈ ಗೆರೆಗಳನ್ನು ಯಾವುದೇ ಉದ್ದೇಶವಿಲ್ಲದೇ ಬರೆಯಲಾಗಿಲ್ಲ. ಇವು ದೇವರಿಂದ ಬಂದಂತಹದ್ದಾಗಿದ್ದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ. ಹಸ್ತಸಾಮುದ್ರಿಕೆಯನ್ನು ಕಲಿಯಬಯಸುವವರಿಗೆ ವಿದೇಶಕ್ಕೆ ಹೋಗಬೇಕಾಗಿಯೇನೂ ಇಲ್ಲ. ಬದಲಿಗೆ ಈ ವಿದ್ಯೆಯನ್ನು ಕಲಿಯಲು ಮನಸ್ಸನ್ನು ತೆರೆದು ಕೆಲವು ಮಾಹಿತಿಗಳನ್ನು ಅಭ್ಯಸಿಸಿದರೆ ಸಾಕಾಗುತ್ತದೆ.

ಹಣದ ರೇಖೆ!

ನಿಮ್ಮ ಉಂಗುರದ ಬೆರಳಿನಿಂದ ಕೆಳಗೆ ಸಾಗುವ ಈ ರೇಖೆಯು ಹಣದ ರೇಖೆಯೆಂದು ಗುರುತಿಸಲ್ಪಟ್ಟಿದೆ. ಸಣ್ಣ ರೇಖೆಗಳು ನೀವು ಹಣದ ಜೊತೆಗೆ ಆಳವಾದ ಸಂಬಂಧವನ್ನು ಹೊಂದಿದ್ದೀರಿ ಎಂದು ತೋರಿಸುತ್ತದೆ. ಉದ್ದವಾದ ರೇಖೆಗಳು ನಿಮಗೆ ಹಣ ಮುಖ್ಯ ಮತ್ತು ನೀವು ಸಮಯವನ್ನು ಸಹ ಉಳಿಸುತ್ತೀರಿ ಎಂದು ಸೂಚಿಸುತ್ತದೆ. ಹಣದ ರೇಖೆಗಳು ಹೆಚ್ಚಾಗಿದ್ದಲ್ಲಿ ನೀವು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಿ ಎಂದು ತಿಳಿಸುತ್ತದೆ.

ಕಂಕಣ ರೇಖೆಗಳು ನಿಮ್ಮ ಕೈ ಮಣಿಕಟ್ಟಿನ ಬಳಿ ಕಂಕಣದಂತೆ ಕಾಣುವ ರೇಖೆಗಳು, ನೀವು ಹೊಂದಿರುವ ಹಣದ ಪ್ರಮಾಣವನ್ನು ಸೂಚಿಸುತ್ತವೆ. ಜೊತೆಗೆ ನೀವು ಎಷ್ಟು ಪ್ರಮಾಣದ ಹಣವನ್ನು ಪಡೆಯುವಿರಿ ಎಂದು ಸಹ ಇದರಿಂದ ತಿಳಿಯಬಹುದು. ಹೆಚ್ಚಿನ ರೇಖೆಗಳು ಹೆಚ್ಚಿನ ಹಣವನ್ನು ತಿಳಿಸುತ್ತವೆ.

ಮದುವೆ ರೇಖೆ

ಹಸ್ತಸಾಮುದ್ರಿಕಾದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವ ರೇಖೆ ಎಂದರೆ ಇದೇ. ನಿಮ್ಮ ಜೀವನದಲ್ಲಿನ ಪ್ರಸಕ್ತ ಪ್ರೇಮದ ಸ್ಥಿತಿ ಗತಿಯ ಕುರಿತು ಇದು ತಿಳಿಸಿಕೊಡುತ್ತದೆ. ಈ ಭಾಗದಲ್ಲಿ ಹಲವಾರು ಸಣ್ಣ ಸಣ್ಣ ರೇಖೆಗಳು ಇದ್ದಲ್ಲಿ, ಅದು ನೀವು ಏಕಮುಖ ಪ್ರೇಮಿ ಎಂದು ತಿಳಿಸಿಕೊಡುತ್ತದೆ. ಒಡೆದ ತುದಿಯಿರುವ ರೇಖೆಗಳು ನಿಮ್ಮ ಮದುವೆಯು ವಿಚ್ಛೇಧನದಲ್ಲಿ ಅಂತ್ಯವಾಗುತ್ತದೆ ಎಂದು ತಿಳಿಸುತ್ತದೆ. ಪರಸ್ಪರ ಒಂದರ ಮೇಲೆ ಒಂದು ಹೋಗುವಂತಹ ರೇಖೆಗಳು ನೀವು ಒಬ್ಬ ಸರಿಯಾದ ಸಂಗಾತಿಗಾಗಿ ಹುಡುಕುತ್ತಿದ್ದೀರಿ ಎಂದು ತಿಳಿಸುತ್ತಿದೆ. ಒಂದು ವೇಳೆ ನಿಮಗೆ ಮದುವೆ ರೇಖೆಯು ಇಲ್ಲದಿದ್ದಲ್ಲಿ ಗಾಬರಿಯಾಗಬೇಡಿ. ಅದು ನಿಮಗೆ ಮದುವೆಯಾಗುವ ಆಲೋಚನೆ ಸದ್ಯಕ್ಕೆ ಇಲ್ಲ ಎಂದು ತಿಳಿಸುತ್ತದೆ.

ಅಂಗೈಯಲ್ಲಿ ಮೂಡುವ ತಲೆ ಗೆರೆ

ಈ ತಲೆ ರೇಖೆಯು ಬುದ್ಧಿವಂತಿಕೆ ಮತ್ತು ಆಲೋಚನಾ ಕ್ರಮದ ಕುರಿತಾಗಿ ತಿಳಿಸಿಕೊಡುತ್ತದೆ. ಇದು ಕಲ್ಪನೆಯನ್ನು ಸಹ ಒಳಗೊಂಡಿರುತ್ತದೆ. ಒಂದು ವೇಳೆ ಈ ರೇಖೆಯು ಜೀವನ ರೇಖೆಯ ಮೇಲೆ ಇದ್ದಲ್ಲಿ, ಅದು ನಿಮ್ಮ ಆಲೋಚನೆಯಲ್ಲಿ ಒಳ್ಳೆಯ ಸಮತೋಲನ ಇದೆ ಎಂದು ಸೂಚಿಸುತ್ತದೆ. ಉದ್ದವಾದ ಮತ್ತು ವಿಸ್ತರಿಸಲ್ಪಟ್ಟ ತಲೆ ಗೆರೆಯು ನಿಮ್ಮ ಮನಸ್ಸನ್ನು ಇತರರು ನಿಯಂತ್ರಿಸುತ್ತಾರೆ ಎಂದು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಎಂದು ಸಹ ಸೂಚಿಸುತ್ತದೆ. ಈ ರೇಖೆಗಳು ಎರಡು ಅಥವಾ ಅದಕ್ಕಿಂತ ಹೆಚ್ಚಾಗಿ ಇದ್ದಲ್ಲಿ, ನೀವು ನಿಮಗೆ ನೀವೇ ಸಾಟಿ ಎನ್ನುವಂತಹ ಒಬ್ಬ ವ್ಯಕ್ತಿ ಎಂದು ಸೂಚಿಸುತ್ತದೆ. ನಿಮ್ಮ ಆಲೋಚನೆಗಳು, ಸೃಜನಶೀಲತೆ ಇತ್ಯಾದಿಗಳಲ್ಲಿ ನಿಮಗೆ ನೀವೇ ಸಾಟಿ.

ಒಂದು ವೇಳೆ ಎರಡೂ ಕೈಗಳ ರೇಖೆಗಳು ಭಿನ್ನವಾಗಿದ್ದರೆ

ಮೊದಲಿಗೆ ಎರಡೂ ಹಸ್ತಗಳನ್ನು ಅಗಲಿಸಿ ಬೆರಳುಗಳನ್ನು ಸಾಧ್ಯವಾದಷ್ಟೂ ಸೆಳೆದು ರೇಖೆಗಳು ಸ್ಪಷ್ಟವಾಗಿ ಕಾಣುವಂತೆ ಮಾಡಿಕೊಳ್ಳಬೇಕು. ಒಂದು ವೇಳೆ ಎರಡೂ ಕೈಗಳ ರೇಖೆಗಳು ಭಿನ್ನವಾಗಿದ್ದರೆ ನಿಮ್ಮ ಇಂದಿನ ಸ್ಥಿತಿಗೆ ಬರಲು ನೀವು ಬಹಳಷ್ಟು ಕಷ್ಟಪಟ್ಟಿರಬೇಕು ಎಂಬುವುದು ಸ್ಪಷ್ಟವಾಗುತ್ತದೆ.

ಎರಡೂ ಕೈಗಳ ರೇಖೆಗಳು ಭಿನ್ನವಾಗಿದ್ದರೆ

ಹಸ್ತಸಾಮುದ್ರಿಕೆಯಲ್ಲಿ ಪ್ರಮುಖ ಹಸ್ತ ಅಥವಾ ನೀವು ಬರವಣಿಗೆ ಮತ್ತು ಇತರ ಪ್ರಮುಖ ಕೆಲಸಗಳಿಗೆ ಬಳಸುವ ಹಸ್ತಕ್ಕೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಹೃದಯದ ರೇಖೆ

ಈ ರೇಖೆ ಹೃದಯ ಅಥವಾ ಆತ್ಮೀಯ ಸಂಗತಿಗಳನ್ನು ಪ್ರತಿನಿಧಿಸುತ್ತದೆ. ಈ ರೇಖೆ ಆಳವಾಗಿದ್ದಷ್ಟೂ ಹೃದಯದಿಂದ ಯೋಚಿಸುವ ಗುಣ ನಿಮ್ಮಲ್ಲಿ ಹೆಚ್ಚಾಗಿದ್ದು ನೀವು ಆತ್ಮೀಯತೆಗೆ ಹೆಚ್ಚಿನ ಮಹತ್ವ ನೀಡುವ ವ್ಯಕ್ತಿ ಎಂದು ಸೂಚಿಸುತ್ತದೆ. ಒಂದು ವೇಳೆ ಈ ರೇಖೆ ತುದಿಯಲ್ಲಿ ಕವಲೊಡೆದಿದ್ದರೆ ಈ ವ್ಯಕ್ತಿ ಒಂದೇ ನಿಟ್ಟಿನಲ್ಲಿ ಯೋಚಿಸದೇ ಎರಡು ಬಗೆಯಲ್ಲಿ ಯೋಚಿಸುತ್ತಿದ್ದಾರೆಂದು ಅರ್ಥ.

ಶಿರದ ರೇಖೆ

ಇವು ಒಂದಕ್ಕಿಂತ ಹೆಚ್ಚಿದ್ದು ಹೆಚ್ಚಿನ ವ್ಯಕ್ತಿಗಳು ಎರಡು ರೇಖೆಗಳನ್ನು ಹೊಂದಿರುತ್ತಾರೆ. ಇವು ಶಿರದ ಅಥವಾ ಮೆದುಳಿನಿಂದ ಯೋಚಿಸುವ ವಿಷಯಗಳಿಗೆ ಸಂಬಂಧಪಟ್ಟಿವೆ. ಈ ರೇಖೆ ಉದ್ದವಾಗಿದ್ದಷ್ಟೂ ವ್ಯಕ್ತಿ ಹೆಚ್ಚಿನ ವಿಷಯಗಳಲ್ಲಿ ಆಸಕ್ತಿ ಹೊಂದಿರುವುದನ್ನು ಸೂಚಿಸುತ್ತದೆ. ಇವು ಒಂದಕ್ಕಿಂತ ಹೆಚ್ಚಿದ್ದು ಹೆಚ್ಚಿನ ವ್ಯಕ್ತಿಗಳು ಎರಡು ರೇಖೆಗಳನ್ನು ಹೊಂದಿರುತ್ತಾರೆ. ಇವು ಶಿರದ ಅಥವಾ ಮೆದುಳಿನಿಂದ ಯೋಚಿಸುವ ವಿಷಯಗಳಿಗೆ ಸಂಬಂಧಪಟ್ಟಿವೆ. ಈ ರೇಖೆ ಉದ್ದವಾಗಿದ್ದಷ್ಟೂ ವ್ಯಕ್ತಿ ಹೆಚ್ಚಿನ ವಿಷಯಗಳಲ್ಲಿ ಆಸಕ್ತಿ ಹೊಂದಿರುವುದನ್ನು ಸೂಚಿಸುತ್ತದೆ.

ವಿಧಿಯ ರೇಖೆ

ಈ ರೇಖೆಯನ್ನು ಅದೃಷ್ಟದ ರೇಖೆ ಎಂದೂ ಕರೆಯಲಾಗುತ್ತದೆ. ಇದರ ಮೂಲಕ ವ್ಯಕ್ತಿಯ ನಿಯಂತ್ರಣಕ್ಕೆ ಮೀರಿದ ವಿಷಯಗಳು ಆತನ ವ್ಯಕ್ತಿತ್ವ ಹಾಗೂ ಜೀವನದ ಮೇಲೆ ಎಷ್ಟು ಪ್ರಭಾವಶಾಲಿಯಾಗಿದೆ ಎಂದು ತಿಳಿಸುತ್ತದೆ.

Leave a Reply

Your email address will not be published.