
ಕಿಚ್ಚನ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ್ದ ವ್ಯಕ್ತಿಗೆ ಖಡಕ್ ವಾರ್ನಿಂಗ್ ಕೊಟ್ಟ ನಂದ ಕಿಶೋರ್
ಇದು ಸೋಷಿಯಲ್ ಮೀಡಿಯಾ ಯುಗ. ಇಲ್ಲಿ ಯಾರು ಹೇಗೆ ಬೇಕಾದ್ರು ಮಾತನಾಡಬಹುದು ಅನ್ನೋ ಹಾಗಾಗಿದೆ. ಆದರೆ ಕೆಲವೊಮ್ಮೆ ಇದು ಸಾಕಷ್ಟು ಮಂದಿಯ ಆಕ್ರೋಶಕ್ಕೂ ಕಾರಣವಾಗುತ್ತೆ. ಇದೀಗ ವ್ಯಕ್ತಿಯೋರ್ವ ನಟ ಕಿಚ್ಚ ಸುದೀಪ್ ಬಗ್ಗೆ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಇದೀಗ ಈ ಬಗ್ಗೆ ನಿರ್ದೇಶಕ ನಂದ ಕಿಶೋರ್ ವಿಡಿಯೋವೊಂದನ್ನ ಮಾಡಿದ್ದು ಕನ್ನಡ ಚಿತ್ರರಂಗದ ಯಾವುದೇ ಕಲಾವಿದರ ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಮೇರು ನಟ ಕಿಚ್ಚ ಸುದೀಪ್ ಅವರ ಬಗ್ಗೆ ವ್ಯಕ್ತಿಯೊಬ್ಬ ತುಂಬ ತುಚ್ಛವಾಗಿ ಮಾತನಾಡಿದ ಒಂದು ವಿಡಿಯೋ ನೋಡಿದೆ. ಕನ್ನಡದ ಕಲಾಭಿಮಾನಿಗಳೇ ನಮ್ಮ ತಂದೆ-ತಾಯಿ ಇದ್ದಂತೆ. ಕನ್ನಡದ ನಟರು ಅವರದೇ ಚೌಕಟ್ಟಿನಲ್ಲಿ ಅನೇಕ ಸಹಾಯಗಳನ್ನು ಮಾಡಿದ್ದಾರೆ. ಕಲಾಭಿಮಾನಿಗಳನ್ನು ತಲೆಮೇಲೆ ಹೊತ್ತುಕೊಂಡು ತಿರುಗಾಡಿದ ಉದಾಹಣೆ ಇದೆ. ಚಿತ್ರರಂಗ ಒಂದು ಕುಟುಂಬ ಆದ್ದರಿಂದ ನಾನು ಈಗ ಮಾತನಾಡುತ್ತಿದ್ದೇನೆ’ ಎಂದು ನಿರ್ದೇಶಕ ನಂದ ಕಿಶೋರ್ ಮಾತು ಆರಂಭಿಸಿದ್ದಾರೆ.
ಸುದೀಪ್ ಅವರ ಸಾಧನೆ ದೊಡ್ಡದು. ಕನ್ನಡ ಚಿತ್ರರಂಗದ ಕಡೆಗೆ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಇಂಥ ನಾಯಕರು ಕಾರಣ. ಅಂಥವರ ಬಗ್ಗೆ ದಾರಿಯಲ್ಲಿ ಹೋಗುವವರೆಲ್ಲ ಏನೋ ಒಂದು ಮಾತನಾಡುತ್ತಾರೆ ಎಂದರೆ ಬಹಳ ತಪ್ಪಾಗುತ್ತದೆ. ಕನ್ನಡದ ನಟರಿಗೆ ನಪುಂಸಕರು ಎಂದು ಹೇಳುವ ನಿನ್ನ ಭಾಷೆಯಲ್ಲಿಯೇ ಗೊತ್ತಾಗುತ್ತದೆ ನೀನು ಎಂಥ ಸಂಸ್ಕಾರದಿಂದ ಬಂದಿದ್ದೀಯ ಎಂಬುದು. ನಿನ್ನ ಪ್ರಚಾರಕ್ಕಾಗಿ ಕನ್ನಡದ ಧೀಮಂತ ನಟರ ಹೆಸರನ್ನು ಉಪಯೋಗಿಸಿಕೊಂಡು, ಅವರಿಗೆ ಅವಹೇಳನಕಾರಿಯಾದ ಮಾತುಗಳನ್ನು ಹೇಳಿದ್ದೀಯ. ನೀನು ನಪುಂಸಕನಾಗಿಲ್ಲದೇ ಇದ್ದರೆ, ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿದ್ದೀಯಾ?’ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡ ಚಿತ್ರರಂಗದವರ ಬಗ್ಗೆ ಮಾತನಾಡಬೇಕಾದರೆ ನಿನಗೊಂದು ಯೋಗ್ಯತೆ ಇರಬೇಕು. ಇಲ್ಲದಿದ್ದರೆ ನಿನ್ನಂಥವರಿಗೆ ಬೀದಿಯಲ್ಲಿ ನಿಲ್ಲಿಸಿ ಮೆಟ್ಟಲ್ಲಿ ಹೊಡಿತಾರೆ. ಮೊಬೈಲ್ ಇದೆ ಎಂಬ ಕಾರಣಕ್ಕೆ ಎಲ್ಲಿ ಬೇಕಾದರೂ ಅಪ್ಲೋಡ್ ಮಾಡಬಹುದು ಅಂತ ಈ ರೀತಿ ಮಾತನಾಡಬಾರದು. ಯಾರಿಂದಲಾದರೂ ತಪ್ಪಾಗಿದ್ದರೆ ವಾಣಿಜ್ಯ ಮಂಡಳಿಗೆ ದೂರು ನೀಡು’ ಎಂದು ನಂದ ಕಿಶೋರ್ ಹೇಳಿದ್ದಾರೆ.