Home Cinema ಯೋಗಿಯ ಒಂಭತ್ತನೇ ದಿಕ್ಕು …ನೋಡುವ ಕಾಲ ಬಂದಿದೆ…!

ಯೋಗಿಯ ಒಂಭತ್ತನೇ ದಿಕ್ಕು …ನೋಡುವ ಕಾಲ ಬಂದಿದೆ…!

327
0
SHARE

ಬೆಂಗಳೂರು. ಸ್ಯಾಂಡಲ್‌ವುಡ್‌ನ ರಗಡ್ ಬಾಯ್ ಲೂಸ್‌ಮಾದಾ ಯೋಗಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 30ನೇ ವಸಂತಕ್ಕೆ ಇಂದು ಕಾಲಿಡ್ತಿರೋ ಯೋಗಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ನಯಾ ಧೂಳೆಬ್ಬಿಸೋಕೆ ರೆಡಿಯಾಗಿದ್ದಾರೆ.

ಇದರ ಫಲವಾಗಿಯೇ ಯೋಗಿಗೆ ಮೂರು ಹೊಸ ಸರ್‌ಪ್ರೈಸ್‌ಗಳು ಸಿಕ್ಕಿವೆ. ಬರ್ತಡೇ ಆಚರಣೆಯ ನೆಪದಲ್ಲೇ ಯೋಗಿ ತಮ್ಮ ಮುಂದಿನ ಸಿನಿಆಯ್ಕೆ ಹೇಗಿರುತ್ತೆ ಎನ್ನುವ ಒಂದು ಭರ್ಜರಿ ಹಿಂಟ್ ಕೊಟ್ಟಿದ್ದಾರೆ. ಹಿಂದೆ ಇದ್ದ ಮ್ಯಾನರಿಸಂಗಳನ್ನ ಒಡೆದು ಹೊಸದಾರಿ ಕಂಡು ಕೊಳ್ಳುವ ತವಕದಲ್ಲಿದ್ದಾರೆ ಮಿಸ್ಟರ್. ಯೋಗಿ.

ಲೂಸ್‌ಮಾದಾ ಯೋಗಿ ಹುಟ್ಟುಹಬ್ಬದ ಪ್ರಯುಕ್ತ ದಯಾಳ್ ಪದ್ಮನಾಭನ್ ನಿರ್ದೆಶನದ ಒಂಭತ್ತನೇ ದಿಕ್ಕು ಸಿನಿಮಾದ ಖಡಕ್ ಟೀಸರ್ ರಿಲೀಸ್ ಆಗಿದೆ. ಈ ಹಿಂದೆ ತಮ್ಮ ಒಂಭತ್ತನೇ ದಿಕ್ಕು ಸಿನಿಮಾದ ಗಡ್ಡದ ಲುಕ್‌ನಿಂದಲೇ ಗಮನ ಸೆಳೆದಿದ್ದ ಯೋಗಿ ಈಗ ಫುಲ್ ಆಕ್ಷನ್ ಮೀಲ್ಸ್ ಕೊಡಲು ಸಜ್ಜಾಗಿದ್ದಾರೆ. ದಯಾಳ್ ಹಾಗೂ ಯೋಗಿಯ ಕಾಂಇಬಿನೇಷನ್ ಹೇಗೆ ವರ್ಕೌಟ್ ಆಗುತ್ತೆ ಎಂಬುದರ ವಿವರ ಕೂಡ ಈ ಹೊಸ ಟೀಸರ್‌ನ ಹೈಲೇಟ್ ಆಗಿದೆ.

ಒಂಭತ್ತನೇ ದಿಕ್ಕು ಸಿನಿಮಾದಲ್ಲಿ ಒಂದು ಎರ್ನಜಟಿಕ್ ಪಾತ್ರದ ಮೂಲಕವೇ ಮತ್ತೆ ಪ್ರೇಕ್ಷಕನಿಗೆ ಎಂಟರ್‌ಟೈನ್‌ಮೆಂಟ್ ಮಾಡಲು ಬಂದಿರೋ ಯೊಗೇಶ್, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಅದಿತಿ ಪ್ರಭುದೇವ್ ಯೋಗಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಯಿಪ್ರಕಾಶ್, ಸಂಪತ್ ಕುಮಾರ್, ಪ್ರಶಾಂತ್ ಸಿದ್ದಿ, ರಮೇಶ್ ಭಟ್, ಸುಂದರ್, ಅಶೋಕ್ ಸೇರಿದಂತೆ ಹಲವು ಘಟನುಘಟಿಗಳ ಸ್ಟಾರ್‌ಕಾಸ್ಟ್ ಚಿತ್ರಕ್ಕಿದೆ. ತಮ್ಮ ವಿಭಿನ್ನವಾದ ಸಿನಿಮಾಕ್ರಾಫ್ಟ್ ಮೂಲಕವೇ ಸದ್ದು ಮಾಡೋ ನಿರ್ದೆಶಕ ದಯಾಳ್ ಈ ಬಾರಿಯೂ ದಿಕ್ಕುಗಳ ಕಥೆ ಹೇಳ್ತಾ ಹೊಸ ಜಾನರ್‌ನ ಬೆನ್ನುಹತ್ತಿದ್ದಾರೆ.

 

ಶೋಗನ್. ಟೈಟಲ್ ಕೇಳಿದ್ರೆ ಇದು ಇಂಗ್ಲೀಷ್ ಸಿನಿಮಾನಾ ಎನಿಸುತ್ತೆ. ಆದರೆ ಇದು ಅಪ್ಪಟ ಕನ್ನಡ ಸಿನಿಮಾನೇ. ಬರ್ತಡೇ ಬ್ಯಾಷ್‌ನಲ್ಲಿರೋ ಯೋಗಿಗೆ ಇದು ಎರಡನೇ ಉಡುಗೊರೆ. ಶೋಗನ್ ಪೋಸ್ಟರ್‌ನಲ್ಲಿ ಒಬ್ಬ ಬೈಕರ್ ದೃಶ್ಯ ಎದ್ದುಕಾಣ್ತಿದೆ. ಇಂಡಸ್ಟ್ರಿಯಲ್ಲಿ ಹಲವು ವರ್ಷಗಳಿಂದ ಸಿನಿಮಾದ ಬೇರೆಬೇರೆ ವಿಭಾಗಗಳಲ್ಲಿ ಕೆಲಸಮಾಡಿ ಅನುಭವವಿರೋ ನೀನಾಸಂ ಮಂಜು ಈ ಸಿನಿಮಾಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಶೋಗನ್ ಮೂಲಕ ಒಂದು ಫ್ರೆಶ್ ಮ್ಯಾಟಿರಿಯಲ್ ಪ್ರಸೆಂಟ್ ಮಾಡುವ ಜೋಷ್‌ನಲ್ಲಿದ್ದಾರೆ ನಿರ್ದೆಶಕ ನೀನಾಸಂ ಮಂಜು.

ಶೋಗನ್ ಚಿತ್ರತಂಡ ಯೋಗಿ ಬರ್ತಡೇಯನ್ನ ಕೇಕ್ ಕತ್ತರಿಸೋ ಮೂಲಕ ಸರಳವಾಗಿ ಸೆಲೆಬ್ರೆಟ್ ಮಾಡಿದೆ. ಯೋಗಿ ಹೀಗೆ ಸದಾ ಚಿತ್ರರಂಗದಲ್ಲಿ ಆಕ್ಟಿವ್ ಆಗಿರಲಿ ಎನ್ನುವ ಹಾರೈಕೆಯೊಂದಿಗೆ ಹುಟ್ಟುಹಬ್ಬವನ್ನ ಆಚರಿಸಿದೆ ಈ ಶೋಗನ್ ಚಿತ್ರತಂಡ. ಸಿನಿಮಾ ಪಕ್ಕಾ ಬೇರೆ ರೀತಿಯಲ್ಲೇ ಮನರಂಜನೆಯ ಚಿತ್ರಾನ್ನ ಬಡಿಸುತ್ತೆ ಎನ್ನುವ ಭರವಸೆ ಶೋಗನ್ ಆಂಡ್ ಟೀಮ್‌ನದ್ದು.

ಅಕಟಕಟ. ಯೋಗಿ ಒಪ್ಪಿಕೊಂಡಿರೋ ಇನ್ನೊಂದು ಹೊಸ ಸಿನಿಮಾ. ಇಷ್ಟುದಿನ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ನಾಗಾರಾಜ್ ಸೋಮಯಾಜಿ ಅಕಟಕಟ ಚಿತ್ರವನ್ನ ನಿರ್ದೆಶಿಸುತ್ತಿದ್ದಾರೆ. ದಿ ಬೆಸ್ಟ್ ಆಕ್ಟರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗಿದ್ದ ನಾಗಾರಾಜ್ ಸೋಮಯಾಜಿ ಅದೇ ಉತ್ಸಾಹದಲ್ಲಿ ಈ ಅಕಟಕಟ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಫೋಟೊಗ್ರಾಫಿಯಲ್ಲೂ ಮಾಸ್ಟರ್ ಆಗಿರೋ ನಾಗಾರಾಜ್ ಈ ಅಕಟಕಟ ಚಿತ್ರಕ್ಕಾಗಿ ಯೋಗಿಯೇ ಸೂಕ್ತ ಎನ್ನುವ ಯೋಚನೆಯಲ್ಲಿದ್ರು. ಅದಕ್ಕೆ ತಕ್ಕಹಾಗೇ ಪೋಸ್ಟರ್ ಕೂಡ ನಾನಾ ವಿಷಯಗಳನ್ನ ಒಂದೇ ಚೌಕಟ್ಟಿನಲ್ಲಿ ಹೇಳೊದ್ರಲ್ಲಿ ಯಶಸ್ವಿಯಾಗಿದೆ.

ಅಕಟಕಟ ಪೋಸ್ಟರ್ ನೋಡುಗರ ತಲೆಗೆ ಹುಳ ಬಿಡೋದರ ಜೊತೆಗೆ ಒಂದಷ್ಟು ಕುರ‍್ಯಸಿಟಿಗಳನ್ನೂ ಹುಟ್ಟುಹಾಕಿದೆ. ಮಿದುಳಿನ ಜೊತೆಗೆ ಮಗುವೊಂದು ಉಯ್ಯಾಲೆ ಆಡುತ್ತಿರೋ ಈ ಚಿತ್ರಣ ಈಗ ಪ್ರೇಕ್ಷಕನ ಗಮನ ಸೆಳೆತಿದೆ. ಅಬನಾರ್ಮಲ್ ಮನಸ್ಥಿತಿಯ ಒಂದು ಝಲಕ್ ಕೂಡ ಈ ಅಕಟಕಟ ಪೋಸ್ಟರ್‌ನಲ್ಲಿ ಮಿಂಚುತಿದೆ.

ಒಟ್ಟಿನಲ್ಲಿ ಸ್ವಲ್ಪ ವರ್ಷಗಳಿಂದ ತಮ್ಮ ಸಿನಿಮಾಜರ್ನಿಯನ್ನ ಕಾಪಾಡಿಕೊಳ್ಳೊದ್ರಲ್ಲಿ ಮಗ್ನರಾಗಿದ್ದ ಲೂಸ್‌ಮಾದಾ ಯೋಗಿ ಈಗ ಈ ಧಮ್‌ದಾರ್ ಸಿನಿಮಾಗಳ ಮೂಲಕ ಮತ್ತೆ ಗಾಂಧಿನಗರದಲ್ಲಿ ತಮ್ಮ ವಿಜಯಯಾತ್ರೆ ಹಮ್ಮಿಕೊಳ್ಳೊಕೆ ಪ್ಲಾನ್ ಮಾಡಿದ್ದಾರೆ. ಒಂದಷ್ಟು ಚಾಲೆಂಜ್‌ಗಳನ್ನ ಇಟ್ಕೊಂಡೇ ಈ ಸಿನಿಮಾಗಳನ್ನ ಯೋಗಿ ಒಪ್ಪಿಕೊಂಡಿರೋದು ಇಲ್ಲಿ ಸ್ಪಷ್ಟವಾಗಿ ಕಾಣಿಸ್ತಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ಯೋಗಿ ನಾನು ಸೋತಿದ್ದೀನಿ, ಬಟ್ ಸತ್ತಿಲ್ಲ ಎನ್ನುವ ಹೇಳಿಕೆ ಕೊಟ್ಟಿದ್ರು. ಆದರೆ ಕತ್ತಲು ಕಳೆದ ಮೇಲೆ ಬೆಳಕು ಬರಲೇಬೇಕು ಎನ್ನುವಂತೆ ಯೋಗಿ ಮತ್ತೆ ತಮ್ಮದೇ ಶೈಲಿಯಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಈ ಮೂರು ಸಿನಿಮಾಗಳ ಅಪ್‌ಡೇಟ್ ಯೊಗೇಶ್ ಹುಟ್ಟುಹಬ್ಬಕ್ಕೆ ನಯಾ ಖದರ್ ಕೊಟ್ಟಿದೆ. ಅದೇನೇ ಇರ‍್ಲಿ, ಕೊರೋನಾ ಪರಿಸ್ಥಿತಿ ಕಳೆದಮೇಲೆ ಇನ್ನೊಮ್ಮೆ ಯೊಗೇಶ್ ತಮ್ಮ ಹೊಸ ಖೇಲ್ ತೋರಿಸ್ತಾರೆ ಎನ್ನುವ ಫ್ಯಾಕ್ಟರ್ ಅಂತೂ ಫಿಕ್ಸ್. ಆ ಕ್ಷಣಕ್ಕಾಗಿ ಯೋಗಿ ಫ್ಯಾನ್ಸ್ ಕೂಡ ವೈಟ್ ಮಾಡ್ತಿದಾರೆ. ಬೇರೆಬೇರೆ ದಿಕ್ಕುಗಳ ಹುಡುಕಾಟದಲ್ಲಿರೋ ಯೋಗಿಗೆ ಗುಡ್ ಟೈಮ್ ಶುರುವಾಗುವ ಲಕ್ಷಣಗಳು ಕಾಣಿಸ್ತಿವೆ. ಒನ್ಸ್ ಆಗೇನ್ ಹ್ಯಾಪಿ ಬರ್ತಡೇ ಯೋಗಿ.

 

LEAVE A REPLY

Please enter your comment!
Please enter your name here