ಪ್ರೀತಿಸಿ ಮದುವೆಯಾದ ಜೋಡಿ: ಮಗು ನನ್ನದಲ್ಲ ಎಂದ ಪತಿ – ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು

ಬೆಂಗಳೂರು : ಗಂಡು ಮಗುವಿನ ತಂದೆಗಾಗಿ ಅಸ್ಸೋಂ ಮೂಲದ‌ ಮಹಿಳೆ ಯಶವಂತಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ‌. ವಿವಾಹ ವಾಗಿ ಗಂಡು ಮಗುವಿಗೆ ತಂದೆಯಾದರೂ ಮಗು ತನ್ನದಲ್ಲ‌, ವಿವಾಹವೇ ಆಗಿಲ್ಲ ಹೇಳುತ್ತಿರುವ ಪತಿ ವಿರುದ್ದ ಕಾನೂನು ಕ್ರಮ ಕ್ಕಾಗಿ ಮಹಿಳೆ‌ ದೂರು ನೀಡಿದ್ದಾರೆ. 5 ವರ್ಷಗಳ ಹಿಂದೆ ಮಹಿಳೆಯು ದುಬೈನಲ್ಲಿ ಇವೆಂಟ್ ಮ್ಯಾನೇಜ್​ಮೆಂಟ್ ಕಂಪನಿ ತೆರೆದಿ ದ್ದರು. ಇದೇ ಕಂಪನಿಯಲ್ಲಿ ತಬರೇಜ್ ಕೆಲಸಕ್ಕೆ ಸೇರಿಕೊಂಡಿದ್ದ. ಹೀಗೆ ಆರಂಭವಾದ ಪರಿಚಯ ಸಲುಗೆಗೆ ತಿರುಗಿತ್ತು, ಮೂರು ವರ್ಷಗಳ ಕಾಲ ವಿವಾಹೇತರ ಸಂಬಂಧ ಹೊಂದಿದ್ದಾರೆ.‌ ಬಳಿಕ ಇಬ್ಬರು ದುಬೈನಿಂದ ಭಾರತಕ್ಕೆ ಬಂದು ಹಿಂದೂ ಸಂಪ್ರದಾಯದಂತೆ ಮದುವೆ ಯಾಗಿದ್ದು,

ಕೆಲ ತಿಂಗಳಲ್ಲೇ ಮಹಿಳೆ ಗರ್ಭಿಣಿಯಾಗಿದ್ದಾರೆ. ಕೆಲಸದ ನಿಮಿತ್ತ ಬೆಂಗಳೂರಿಗೆ ಹೊರಟ ಪತಿ ತಬರೇಜ್ ಮತ್ತೆ ವಾಪಸ್ ಬಂದಿರಲಿಲ್ಲ. ನಂತರ ಪತಿಯನ್ನು ಭೇಟಿಯಾದಾಗ ನಿನ್ನ ಗರ್ಭಧಾರಣೆಗೆ ನಾನು ಕಾರಣನಲ್ಲ. ಬೇಕಾದರೆ ಡಿಎನ್​​ಐ ಪರೀಕ್ಷೆ ಮಾಡಿಸು ಎಂದು ತನ್ನಿಂದ‌ ದೂರವಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ತಬರೇಜ್​​ನನ್ನು ಕರೆದು ಪ್ರಶ್ನಿಸಿದಾಗ ಮಗುವಿಗೆ ನಾನು ತಂದೆಯಲ್ಲ. ಬೇಕಾದರೆ ನಾನು‌ ಡಿಎನ್‌ಎ ಟೆಸ್ಟ್​ಗೆ ಒಳಗಾಗಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published.