ಕೊಪ್ಪಳ: ಒಂದೇ ಹಗ್ಗಕ್ಕೆ ನೇಣು ಬೀಗಿದುಕೊಂಡು ಪ್ರೇಮಿಗಳು ಸಾವನಪ್ಪಿದ್ದಾರೆ. ಕುಷ್ಟಗಿ ತಾಲೂಕು ತಾವರಗೇರ ಸಮೀಪದ ಜೆ. ರಾಂಪೂರ ಗ್ರಾಮದ ಸೀಮಾದಲ್ಲಿ ಈ ಘಟನೆ ನಡೆದಿದೆ.ಗ್ರಾಮದ ಹೊರವಲಯದ ಮರಯೊಂದಕ್ಕೆ ನೇಣುಬೀಗಿದುಕೊಂಡಿರುವ ಪ್ರೇಮಿಗಳು.
ಲಿಂಗಾಯಿತ ಸಮುದಾಯದ ವೀರುಪಾಕ್ಷಿಗೌಡ (20)ಕುರುಬ ಸಮುದಾಯದ ಯುವತಿ ಹುಲಿಗೆಮ್ಮ(19) ಮೃತರು. ಕಳೆದ ನಾಲ್ಕು ವರ್ಷದಿಂದ ಇವರು ಪ್ರೀತಿಸುತ್ತಿದ್ದರು. ಮದುವೆಗೆ ಕುಟುಂಬದವರು ವಿರೋಧಿಸಿದ್ದರಿಂದ ತೀವ್ರ ಮನನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಸ್ಥಳಕ್ಕೆ ಪಿಎಸ್ ಐ ಗೀತಾಂಜಲಿ, ಸಿಪಿಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.