Home District M.B.ಪಾಟೀಲ್‌ರ ಹಿಂದಿದ್ಯಾ ಆ ಒಂದು ಶಕ್ತಿ..!? ಸೈಲೆಂಟಾಗೇ ಬದಾಮಿಯಲ್ಲಿ ಕುಳಿತು ಮೈತ್ರಿ ಸರ್ಕಾರದ ಬುಡಕ್ಕೆ ಕೊಳ್ಳಿ...

M.B.ಪಾಟೀಲ್‌ರ ಹಿಂದಿದ್ಯಾ ಆ ಒಂದು ಶಕ್ತಿ..!? ಸೈಲೆಂಟಾಗೇ ಬದಾಮಿಯಲ್ಲಿ ಕುಳಿತು ಮೈತ್ರಿ ಸರ್ಕಾರದ ಬುಡಕ್ಕೆ ಕೊಳ್ಳಿ ಹಿಡ್ತಿದ್ದಾರಾ ಸಿದ್ದರಾಮಯ್ಯ..??!

1555
0
SHARE

ಮೈತ್ರಿ ಸರ್ಕಾರದಲ್ಲಿ ಕಡೆಗಣಿಸಿದ ಹೈಕಮಾಂಡ್ ವಿರುದ್ದ ಸಿಡಿದೆದ್ದ ಸಿದ್ದರಾಮಯ್ಯ.ಬೆಂಬಲಿಗರ ಮೂಲಕ ಹೈಕಮಾಂಡ್ ಗೆ ತಲೆ ನೋವು ತಂದ ಮಾಜಿ ಮುಖ್ಯಮಂತ್ರಿ.ಜೆಡಿಎಸ್ ಜೊತೆ ಕೈ ಜೋಡಿಸೋದು ಸಿದ್ದರಾಮಯ್ಯರಿಗೆ ಇಷ್ಟ ಇರ್ಲಿಲ್ಲ.ಆದ್ರೂ ಸಿದ್ದರಾಮಯ್ಯನ ಮಾತು ಮೀರಿ ಜೆಡಿಎಸ್ ಸಖ್ಯ ಬೆಳಸಿದ್ದ ಕಾಂಗ್ರೆಸ್ ಹೈಕಮಾಂಡ್…

ಸಚಿವ ಸಂಪುಟ ರಚನೆಯಲ್ಲೂ ಸಿದ್ದರಾಮಯ್ಯನ ಮಾತಿಗೆ ಸೊಪ್ಪು ಹಾಕದ ಕಾಂಗ್ರೆಸ್.ಸೋತ ಮೇಲೆ ಕೈ ಬಿಟ್ಟಿದ್ದಕ್ಕೆ ಸೇಡು ತೀರಿಸಿಕೊಳ್ತಿರೋ ಸಿದ್ದರಾಮಯ್ಯ.ಎಂಬಿ ಪಾಟೀಲ್ ರನ್ನಾ ಮುಂದೆ ಬಿಟ್ಟಿರೋದೇ ಸಿದ್ದರಾಮಯ್ಯ..!ತೆರೆಯ ಹಿಂದೆ ನಿಂತು ಕಾಂಗ್ರೆಸ್ ಹೈಕಮಾಂಡ್ ಗೆ ಸೆಡ್ಡು..!

ಪರಮೇಶ್ವರ್ ಡಿಸಿಎಂ ಆಗಿದ್ದಕ್ಕೆ ಸಿಟ್ಟಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.ಬಂಡಾಯ ಶಮನಕ್ಕೆ ಕೈ ಹಾಕದೇ ಬಂಡಾಯದ ಬೆಂಕಿಗೆ ತುಪ್ಪ ಸವರಿದ ಸಿದ್ದರಾಮಯ್ಯ.ಅಸ್ತಿರತೆಯ ಸೂಚನೆ ನೀಡಿ ಜೆಡಿಎಸ್ ಬುಡ ಅಲ್ಲಾಡಿಸಲು ಪ್ಲಾನ್.

ಒಂದೇ ಕಲ್ಲಲ್ಲಿ ಜೆಡಿಎಸ್, ಕಾಂಗ್ರೆಸ್ ನ್ನಾ ಹಣಿಯಲು ಸಿದ್ದರಾಮಯ್ಯ ತಂತ್ರ.ಬದಾಮಿ ಹೋಗಿ ಕೂತು ಬೊಂಬೆ ಆಡಿಸುತ್ತಿರುವ ಮಾಜಿ ಮುಖ್ಯಮಂತ್ರಿ.ಸರ್ಕಾರ ಮುಂದುವರಿಯುವುದು ಸಿದ್ದರಾಮಯ್ಯವರಿಗೆ ಸುತರಾಮ್ ಇಷ್ಟವಿಲ್ಲ. ಸಚಿವ ಸ್ಥಾನ ವಂಚಿತ ಎಂ.ಬಿ.ಪಾಟೀಲ್ , ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು. ದೆಹಲಿಯ ತುಘಲಕ್ ರಸ್ತೆಯಲ್ಲಿರೋ ರಾಹುಲ್ ನಿವಾಸಕ್ಕೆ ಆಗಮಿಸಿದ ಎಂ.ಬಿ.ಪಾಟೀಲ್ ಮಾತುಕತೆ ನಡೆಸಿದರು. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here