Home District M.B.ಪಾಟೀಲ್ ರೋಷಕ್ಕೆ ಕಾರಣವೇ ಆ ಹಳೆ ದ್ವೇಷ..! ಪಾಟೀಲ್ ಕಿರೀಟ ಕಿತ್ತುಕೊಂಡ ಆ ಬದ್ಧವೈರಿ ಯಾರು...

M.B.ಪಾಟೀಲ್ ರೋಷಕ್ಕೆ ಕಾರಣವೇ ಆ ಹಳೆ ದ್ವೇಷ..! ಪಾಟೀಲ್ ಕಿರೀಟ ಕಿತ್ತುಕೊಂಡ ಆ ಬದ್ಧವೈರಿ ಯಾರು ಗೊತ್ತಾ!? ಯಾರು ಆ ಹಳೆ ದ್ವೇಷಿ..? ಈ ಸ್ಟೋರಿ ಓದಿ…

3508
0
SHARE

ಸಮ್ಮಿಶ್ರ ಸರ್ಕಾರ ರಚನೆಯಾದ ಬೆನ್ನಲ್ಲೆ ಕೈ ಪಕ್ಷಕ್ಕೆ ಸಂಪುಟ ವಿಸ್ತರಣೆ ಸಂಕಟವಾಗಿ ಪರಿಣಮಿಸಿದೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಟೆಕಾಫ್ ಆಗುವ ಮೊದಲೆ ಟ್ರಬಲ್ ಗೆ ಸಿಕ್ಕಾಕೊಂಡಿದೆ. ಸಂಪುಟ ರಚನೆ ವೇಳೆ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಘಟಾನುಘಟಿಗಳನ್ನೆ ಕೈ ಬಿಟ್ಟಿರೋದು ಈಗ ಬಿಕ್ಕಟ್ಟು ಸೃಷ್ಠಿಸಿದೆ. ಅದ್ರಲ್ಲು ಮಾಜಿ ನೀರಾವರಿ ಮಂತ್ರಿ ಎಂ ಬಿ ಪಾಟೀಲ್ ರಿಗೆ ಸಚಿವ ಸ್ಥಾನ ಮಿಸ್ ಆಗಿರೋದು ಬಾರಿ ಗದ್ದಲ ಸೃಷ್ಡಿಸಿದೆ. ಮೊದಲ ಪಟ್ಟಿಯಲ್ಲಿ ತಮ್ಮ ಹೆಸ್ರು ಮಿಸ್ ಆಗಿರೊದ್ರಿಂದ ರಾಂಗ್ ಆಗಿರೋ ಶಾಸಕ ಎಂ ಬಿ ಪಾಟೀಲ್ ಕೈ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದಾರೆ…

ಬೆಂಗಳೂರಿನ ತಮ್ಮ ನಿವಾಸಕ್ಕೆ ಘಟಾನುಘಟಿ ನಾಯಕರು ಬಂದು ಸಮಾಧಾನ ಪಡೆಸಲು ಮುಂದಾದ್ರು ಎಂ ಬಿ ಪಾಟೀಲರ ಕೋಪಾಗ್ನಿ ಮಾತ್ರ ಕಡಿಮೆಯಾಗಿಲ್ಲ. ತಮ್ಮ ಹಠವನ್ನ ಬಿಲ್ ಕುಲ್ ಬಿಡಲೇ ಇಲ್ಲ. ಸ್ವತಃ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿ ಸಮಾಧಾನ ಹೇಳಲು ಯತ್ನಿಸಿದ್ರು ಎಂ ಬಿ ಪಾಟೀಲ್ ಜಗ್ಗಲಿಲ್ಲ. ಇನ್ನು ವಿಜಯಪುರ ನಗರದ ಬಸವೇಶ್ವರ ವೃತ್ತದಲ್ಲಿ ಲಿಂಗಾಯತ ಬಸವ ಸೇನೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ರು. ಈ ವೇಳೆ ಬಸವ ಸೇನೆಯ ಕಾರ್ಯಕರ್ತನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮತ್ತೊಂದೆಡೆ ಎಂ ಬಿ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಬಲೇಶ್ವರ ಪಟ್ಟಣದಲ್ಲು ನಿರಂತರ ಉಪವಾಸ ಸತ್ಯಾಗ್ರಹ ನಡೆಸಲಾಗ್ತಿದೆ…

ಇದು, ಎಂ ಬಿ ಪಾಟೀಲ್ ರಿಗೆ ಸಚಿವ ಸ್ಥಾನ ತಪ್ಪುತ್ತಿದ್ದಂತೆ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ನಡೆದಿರುವ ಮೆಜರ್ ಡೆವೆಲಪ್ ಮೆಂಟ್. ಆದ್ರೆ ಹೈಕಮಾಂಡ್ ಜೊತೆಗೆ ಹೈಲಿ ಲಿಂಕ್ ಹೊಂದಿದ್ದ ಶಾಸಕ ಎಂ ಬಿ ಪಾಟೀಲ್ ಪರಿಸ್ಥಿತಿ ಹೀಗಾಗೋದಕ್ಕೆ ಕಾರಣ ಏನು.? ಸಧ್ಯ ಕೈ ಮುಖಂಡರು ಮನೆ ಬಾಗಿಲಿಗೆ ತೆರಳಿ ಸಂತೈಸಿ, ಸಮಾಧಾನ ಹೇಳಲು ಮುಂದಾದ್ರು ಎಂ ಬಿ ಪಾಟೀಲ್ ಮಾತ್ರ ಯಾಕೆ ಬಗ್ತಿಲ್ಲ ಅನ್ನೋ ಕಾರಣ ಕೇಳಿದ್ರೆ ಅಚ್ಚರಿಯಾಗೋದು ಖಚಿತ. ಅಷ್ಟಕ್ಕೂ ಆ ಕಾರಣ ಬೇರೆಯಾವುದು ಅಲ್ಲ ಆ ಒಂದು ಹಳೆಯ ದ್ವೇಷ..! ಆ ಹಳೆಯ ದ್ವೇಷದಿಂದಾಗಿಯೇ ಎಂ ಬಿ ಪಾಟೀಲ್ ಯಾರ ಮಾತನ್ನು ಕೇಳ್ತೀಲ್ಲ. ಆ ಹಳೆಯ ದ್ವೇಷದಿಂದಾಗಿಯೇ ಎಂ ಬಿ ಪಾಟೀಲರಿಗೆ ಇಂದು ಸಚಿವ ಸ್ಥಾನ ತಪ್ಪಿರೋದಂತೆ…

ನಂತ್ರ 1994 ರಲ್ಲಿ ಶಿವಾನಂದ ಪಾಟೀಲ್ ಜನತಾದಳದಿಂದ ಸ್ಪರ್ಧಿಸುವ ಮೂಲಕ ಇದೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ ಬಿ ಪಾಟೀಲರನ್ನ ಸೋಲಿಸಿದ್ದರು. 1999 ರಲ್ಲಿ ಮತ್ತೆ ಶಿವಾನಂದ ಪಾಟೀಲ್ ಬಿಜೆಪಿ ಪಕ್ಷದ ಮೂಲಕ ಸ್ಪರ್ಧಿಸಿ ಎಂ ಬಿ ಪಾಟೀಲರನ್ನ ಸೋಲಿಸಿದ್ದರು. ನಂತ್ರ 2004ರಲ್ಲಿ ತಿಕೋಟ ಮತಕ್ಷೇತ್ರ ಬಬಲೇಶ್ವರ ಮತಕ್ಷೇತ್ರವಾಗಿ ಪುನರ್ ರಚನೆಯಾದ ನಂತ್ರ ಶಿವಾನಂದ ಪಾಟೀಲ್ ಎಸ್ ಎಂ ಕೃಷ್ಣಾರ ಆಹ್ವಾನದ ಮೇರೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ರು. ಬಾಗೇವಾಡಿ ಮತಕ್ಷೇತ್ರದಿಂದ 2004-2013-2018ರಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಸಚಿವರಾಗಿದ್ದಾರೆ…

ಆದ್ರೆ ಸಧ್ಯ ಈ ಇಬ್ಬರು ಪಾಟೀಲರ ನಡುವಿನ ಹಳೆಯ ದ್ವೇಷ ಈಗ ರಾಜ್ಯ ರಾಜಕಾರಣದಲ್ಲು ಮುಂದುವರೆದಂತೆ ಕಾಣುತ್ತಿದೆ. ಇದೆ ಹಳೆಯ ದ್ವೇಷದಿಂದಾಗಿಯೇ ಎಂ ಬಿ ಪಾಟೀಲ್ ಯಾರೆ ಏನು ಹೇಳಿದ್ರು ಕೇಳದೆ ತಮ್ಮದೆಯಾದ ಹಠಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಅದ್ರಲ್ಲು ತಮ್ಮ ಹಳೆಯ ಎದುರಾಳಿಗೆ ಸಚಿವ ಸ್ಥಾನ ನೀಡಿ ತಮಗೆ ಬಿಟ್ಟಿರೋದು ಎಂ ಬಿ ಪಾಟೀಲರನ್ನ ಮತ್ತಷ್ಟು ಕುದಿಯುವಂತೆ. ಶಿವಾನಂದ ಪಾಟೀಲ ಹೊರತಾಗಿ ಮತ್ಯಾರಿಗಾದ್ರು ಸಚಿವ ಸ್ಥಾನ ನೀಡಿದ್ರು ಇಷ್ಟು ಸಿಡಿಯುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಪಕ್ಷದ ಹೈಕಮಾಂಡ್ ನಿರ್ಧಾರ ಎಂ ಬಿ ಪಾಟೀರನ್ನ ರೊಚ್ಚಿಗೇಳುವಂತೆ ಮಾಡಿದೆ…

 

ಒಟ್ಟಿನಲ್ಲಿ ಎಂ ಬಿ ಪಾಟೀಲ ಹಾಗೂ ಶಿವಾನಂದ ಪಾಟೀಲರ ನಡುವಿನ ಹಳೆಯ ವೈಷಮ್ಯ ಇಂದಿಗೂ ರಾಜ್ಯ ರಾಜಕಾರಣದಲ್ಲಿ ಮುಂದುವರೆದಂತೆ ಕಾಣ್ತಿದೆ. ಒಂದೆ ಪಕ್ಷದಲ್ಲಿದ್ದು ಒಬ್ಬರ ಕಾಲನ್ನ ಒಬ್ಬರು ಎಳೆಯೋ ಕೆಲಸ ಎಂ ಬಿ ಪಾಟೀಲರ ಸಚಿವ ಸ್ಥಾನ ತಪ್ಪಿಸೋ ವರೆಗು ಹೋಗಿ ತಲುಪಿದೆ. ಇತ್ತ ಇನ್ನು ಮುಂದೆ 2 ನೇ ಹಂತದಲ್ಲಿ ಸಚಿವ ಸ್ಥಾನ ನೀಡಿದ್ರು ಬೇಡ ಅಂತಿರೋ ಎಂ ಬಿ ಪಾಟೀಲ್ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ. ಎಂ ಬಿ ಪಾಟೀಲ್ ಹಾಗೂ ಶಿವಾನಂದ ಪಾಟೀಲರ ನಡುವಿನ ಪಾರಂಪರಿಕ ವೈಷಮ್ಯ ಇಲ್ಲಿಗೆ ಕೊನೆಯಾಗುತ್ತಾ. ಅಥವಾ ಮುಂದುವರೆಯುತ್ತಾ.. ಮುಂದೇನಾಗುತ್ತೋ ಅನ್ನೋದನ್ನ ಕಾದು ನೋಡಬೇಕಾಗಿದೆ…

LEAVE A REPLY

Please enter your comment!
Please enter your name here