ಮಲಯಾಳಂ ನಲ್ಲೂ ರಿಲೀಸ್ ಆಗಲಿದೆ ‘ಮನಸಾಗಿದೇ’ ಸಿನಿಮಾ

ಚಲನಚಿತ್ರ

ಕನ್ನಡದ ‘ಮನಸಾಗಿದೇ’ ಸಿನಿಮಾ ರಾಜ್ಯಾದಾದ್ಯಂತ ರಿಲೀಸ್ ಆಗಿದ್ದು ಒಳ್ಳೆ ರೆಸ್ಪಾನ್ಸ್ ಸಿಗ್ತಾಯಿದೆ . ಹೊಸಬರ ಸಿನಿಮಾ ಆದ್ರು ಕಥೆಯ ಮೂಲಕ ಎಲ್ಲರ ಮನಸೆಳೆಯುತ್ತಿದೆ. ಇದೀಗ ಈ ಸಿನಿಮಾ ಮಲಯಾಳಂ ನಲ್ಲಿ ಅತಿ ಶೀಘ್ರದಲ್ಲೇ ತೆರೆಕಾಣಲಿದೆ.

ಕನ್ನಡಿಗರ ಮನಗೆದ್ದ ‘ಮನಸಾಗಿದೇ ಸಿನಿಮಾ ಇದೀಗ ಮಲಯಾಳಂ ನಲ್ಲೂ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದೆ.   ಕಥೆ ಹಾಗೂ ನಿರ್ಮಾಣ ಸಿ ಚಂದ್ರಶೇಖರ . ನಿರ್ದೇಶನ ಹಾಗೂ ಸ್ಕ್ರೀನ್ ಪ್ಲೇ ಶ್ರೀನಿವಾಸ ಶಿಡ್ಲಘಟ್ಟ ಅವ್ರದ್ದು . ಇದು ನಿರ್ಮಾಪಕ ಚಂದ್ರಶೇಖರ ಅವರ ನಾಲ್ಕನೇ ಸಿನಿಮಾ ಆಗಿದ್ದು , ಅವರ ಮಗ ಅಭಯ್ ನಾಯಕ ನಟನಾಗಿ ಮೊದಲ ಬಾರಿಗೆ ತೆರೆ ಮೇಲೆ ಮಿಂಚಿದ್ದಾರೆ . ಅಭಯ್ ಗೆ ಮೇಘಶ್ರೀ ಹಾಗೂ ಅಥೀರಾ ಅರುಣ್  ನಾಯಕಿಯರಾಗಿ ಕಾಣಿಸಿದ್ದಾರೆ.

ಈ ಸಿನಿಮಾದಲ್ಲಿ ಒಟ್ಟು 5 ಹಾಡುಗಳಿದ್ದು ಮಾನಸಾ ಹೋಳ್ಳಾ ಸಂಗೀತ ಸಂಯೋಜನೆ ಹಾಗೂ  ಕವಿರಾಜ್ , ನಾಗೇಂದ್ರ ಪ್ರಸಾದ್ ಸೇರಿದಂತೆ ಘಟಾನುಘಟಿ ಚಿತ್ರ ಸಾಹಿತಿಗಳ ಸಾಹಿತ್ಯದಲ್ಲಿ ಮೂಡಿಬಂದ ಸಾಂಗ್ ಗಳು ಕೇಳುಗರ ಮನಸೆಳೆದಿದೆ.ಹೊಸಬರ ಚಿತ್ರವಾದ್ರು ಎಲ್ಲರ ನಟನೆ ಕಣ್ಣು ಕಟ್ಟುವಂತಿದ್ದು ಪ್ರೇಕ್ಷಕ ಪ್ರಭು ಫೀದಾ ಆಗೋದು ಗ್ಯಾರೆಂಟಿ

Leave a Reply

Your email address will not be published.