Home KARNATAKA ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟುಗಳ ಬಂದ್ ಕರೆ ; ವರ್ತಕರ ಸಂಘದ ಕರೆಗೆ ಮಿಶ್ರ ಪ್ರತಿಕ್ರಿಯೆ

ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟುಗಳ ಬಂದ್ ಕರೆ ; ವರ್ತಕರ ಸಂಘದ ಕರೆಗೆ ಮಿಶ್ರ ಪ್ರತಿಕ್ರಿಯೆ

101
0
SHARE

ಬೆಂಗಳೂರು. ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನ ಹಿನ್ನಲೆ, ಬಸವನಗುಡಿಯ ಗಾಂಧೀಬಜಾರ್ ವ್ಯಾಪಾರಿಗಳು ಸ್ವಯಂ ಪ್ರೇರಿತ ಲಾಕ್ ಡೌನ್ ಮಾಡಲು ನಿರ್ಧರಿಸಿದ್ದಾರೆ. ಮಾರ್ಕೇಟ್ ಹಾಗೂ ಚಿಕ್ಕಪೇಟೆಯನ್ನ ಸೀಲ್ ಡೌನ್ ಮಾಡಿರುವುದರಿಂದಾಗಿ ಗ್ರಾಹಕರು ಗಾಂಧಿಬಜಾರ್ ಕಡೆ ಮುಖ ಮಾಡಿದ್ದಾರೆ.

ಹೀಗಾಗಿ ಕೋವಿಡ್ 19 ನನ್ನು ತಡೆಗಟ್ಟಲು ಬಸವನಗುಡಿಯ ಎಲ್ಲಾ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡುವಂತೆ ವರ್ತಕರ ಸಂಘ ಕರೆ ಕೊಟ್ಟಿತ್ತು.

ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇಕಡ 60 ರಷ್ಟು ಮಂದಿ ಸ್ವಯಂ ಪ್ರೇರಿತವಾಗಿ ಅಂಗಡಿಗಳ ಶೆಟ್ಟರ್ ಎಳೆದ್ರು. ಇನ್ನೂ ಕೆಲವರಂತೂ ಹೀಗಾಗ್ಲೇ ಲಾಕ್ ಡೌನ್ ನಿಂದ ಆರ್ಥಿಕವಾಗಿ ನಷ್ಟವಾಗಿದ್ದು, ಸರ್ಕಾರ ಸೂಚನೆ ಮೇರೆಗೆ ಬೇಕಾದ್ರೆ ಕ್ಲೋಸ್ ಮಾಡ್ತೀವಿ ಅಂತ ಎಂದಿನಂತೆ ಅಂಗಡಿಗಳನ್ನ ತೆರೆದಿದ್ರು.

LEAVE A REPLY

Please enter your comment!
Please enter your name here