ಮದುವೆಗೆ ನಿರಾಕರಿಸಿದ ಲಿವ್ ಇನ್ ರಿಲೇಶನ್ ಶಿಪ್ ಪ್ರೇಮಿ: ಕತ್ತು ಸೀಳಿ ಸೂಟ್ ಕೇಸ್ ನಲ್ಲಿ ತುಂಬಿದ ಪ್ರಿಯತಮೆ

ಅಪರಾಧ ರಾಷ್ಟ್ರೀಯ

ಇತ್ತೀಚೆಗೆ ಮದುವೆಗಳಿಗಿಂತ ಲೀವ್ ಇನ್ ರಿಲೇಷನ್ ಶಿಪ್ ಸಂಬಂಧಗಳೆ ಹೆಚ್ಚು. ಕೆಲ ದಿನಗಳ ಕಾಲ ಒಟ್ಟಿಗಿದ್ದು ಹೊಂದಾಣಿಕೆ ಆದರೆ ಸತಿ ಪತಿಗಳಾಗ್ತಾರೆ. ಈ ವೇಳೆ ಹೊಂದಾಣಿಕೆ ಬರದೆ ಇದ್ರೆ ನಾನೊಂದು ತೀರಾ ನೀನೊಂದು ತೀರಾ ಎನ್ನುತ್ತಾರೆ.

ಇದೇ ರೀತಿ ಲಿವ್ ಇನ್ ರಿಲೇಶನ್ ಶಿಪ್‍ನಲ್ಲಿದ್ದ ಜೋಡಿಯೊಂದು ಪ್ರಿಯಕರನ ಕೊಲೆ ಮಾಡುವ ಮೂಲಕ ಸಂಬಂಧಕ್ಕೆ ಇತಿಶ್ರೀ ಹಾಡಿದ್ದಾರೆ.  ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಆತನ ಕತ್ತನ್ನು ರೇಜರ್‌ನಿಂದ ಸೀಳಿ ಬರ್ಬರವಾಗಿ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ಪ್ಯಾಕ್ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

23 ವರ್ಷದ ಫಿರೋಜ್ ಅಲಿಯಾಸ್ ಚ್ವಾನಿ ಎಂಬುವವನನ್ನು ಆಕೆಯ ಪ್ರಿಯತಮೆ ಪ್ರೀತಿ ಶರ್ಮಾ ಕೆಲ ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಪತಿಯಿಂದ ದೂರವಾದ ಪ್ರೀತಿ ಶರ್ಮಾ, ಫಿರೋಜ್ ಅಲಿಯಾಸ್ ಚ್ವಾನಿ ಜೊತೆ ವಾಸಿಸುತ್ತಿದ್ದಳು.

ಭಾನುವಾರ ತಡರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಪ್ರೀತಿ ಶರ್ಮಾ ಕಪ್ಪು ಟ್ರ್ಯಾಲಿ ಬ್ಯಾಗ್ ಹಿಡಿದುಕೊಂಡು ಬರುತ್ತಿರುವುದನ್ನು ನೋಡದ್ದಾರೆ. ಈ ವೇಳೆ ಪೊಲೀಸರು ಆಕೆಯನ್ನು ಪ್ರಶ್ನಿಸಿದ್ದು ಆಕೆಯಿಂದ ಸರಿಯಾದ ಉತ್ತರ ಸಿಕ್ಕಿಲ್ಲ. ಈ ವೇಳೆ ಅನುಮಾನಗೊಂಡ ಪೊಲೀಸರು ಸೂಟ್ ಕೇಸ್ ತೆರೆದು ನೋಡಿದಾಗ ವ್ಯಕ್ತಿಯ ಶವ ಪತ್ತೆಯಾಗಿದೆ.

ನಾಲ್ಕು ವರ್ಷಗಳಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಫಿರೋಜ್ ನನ್ನು ಇತ್ತಿಚೆಗೆ ಮದುವೆಯಾಗುವಂತೆ ಪ್ರೀತಿ ಕೇಳಿಕೊಂಡಿದ್ದಾರೆ. ಆದರೆ ಅಂತರ್ಜಾತಿ ವಿವಾಹಕ್ಕೆ ತನ್ನ ಪೊಷಕರು ಒಪ್ಪುವುದಿಲ್ಲ ಎಂದು ನೆಪ ಹೇಳಿದ್ದಾರೆ. ಆದರೂ ಮದುವೆಯಾಗುವಂತೆ ಪ್ರೀತಿಯ ಒತ್ತಡ ಹೆಚ್ಚಾದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ರೇಜರ್ ನಿಂದ ಫಿರೋಜ್ ಕತ್ತು ಸೀಳಿ ಕೊಲೆ ಮಾಡಿದ್ದಾಳೆ.

Leave a Reply

Your email address will not be published.