Home Crime ಮದುವೆಯಾಗಿ ಮಸಣ ಸೇರಿದ ಮಹಿಳೆ!; ವಿಶೇಷ ವರದಿ

ಮದುವೆಯಾಗಿ ಮಸಣ ಸೇರಿದ ಮಹಿಳೆ!; ವಿಶೇಷ ವರದಿ

ಮದುವೆಯಾಗಿ ಮಸಣ ಸೇರಿದ ಮಹಿಳೆ!; ವಿಶೇಷ ವರದಿ

940
0

ಆಕೆ ನೂರಾರು ಕನಸ್ಸು ಹೊತ್ತು ತಿಂಗಳ ಹಿಂದಷ್ಟೇ ಮದುವೆಯಾಗಿದ್ಲು.. ಆಕೆ ಪೋಷಕರು ಕೂಡ ಮಗಳ ಭವಿಷ್ಯ ಚೆನ್ನಾಗಿರ್ಲಿ ಅಂತಾ ಟೆಕ್ಕಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ರು. ಆದ್ರೆ ಸಂಸಾರದ ಸುಖ ಅನುಭವಿಸಬೇಕಿದ್ದ ಆ ನವ ವಿವಾಹಿತೆ ಮಸಣ ಸೇರಿದ್ದಾಳೆ. ಅಷ್ಟಕ್ಕೂ‌ ಇಲ್ಲಿ ಆಗಿದ್ದೇನು ಗೋತ್ತ….?.. ಇಲ್ಲಿದೆ ಫುಲ್ ಡಿಟೇಲ್ಸ್

ನೋಡೊಕೆ ಮುದ್ದು ಮುದ್ದಾಗಿರೋ ಈ ಯುವತಿ ಹೆಸ್ರು ಆಶಾ ರಾಣಿ…ಗಂಡನ ಮನೆಯವ್ರು ಸರಿಯಾಗಿದ್ರೆ ಈಕೆಗೆ ಈ ಸ್ಥಿತಿ ಬರ್ತಿರಲಿಲ್ಲ. …ಪಾಪಿ ಪತಿ ಹಾಗೂ ಅತ್ತೆಯ ವರದಕ್ಷಿಣೆ ಕಿರುಕುಳಕ್ಕೆ ಈ ಆಶಾರಾಣಿ ಇವತ್ತು ಹೆಣವಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತಾಳಿ ಪಕ್ಕ ಚಿನ್ನದ ಕಾಸು ಇಲ್ಲ ಅಂತಾ ಕ್ಯಾತೆ ತಗೆದು ಆಶಾರಾಣಿಗೆ ಇನ್ನಿಲ್ಲದ ಕಿರುಕುಳ ಕೊಟ್ಟಿದ್ದಾರೆ. ಅಂದಹಾಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ‌ ನಾಗರಾಜ ನಾಯಕ ತಮ್ಮ ನಾಲ್ಕನೇ ಪುತ್ರಿ ಆಶಾರಾಣಿಯನ್ನ ಮೈಸೂರಿನ ಶ್ರೀರಾಂಪುರ ಎರಡನೇ ಹಂತದಲ್ಲಿರೋ ಎಸ್ ಬಿ ಎಂ ಕಾಲೋನಿಯ ಸಾಫ್ಟ್ವೇರ್ ಇಂಜಿನಿಯರ್ ಪ್ರದೀಪ್ ಎಂ.ಸಿ. ಎಂಬಾತನಿಗೆ ಕೊಟ್ಟು ಕಳೆದ ತಿಂಗಳ ನಾಲ್ಕರಂದು ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ರು. ಆದ್ರೆ ಆಶಾ ರಾಣಿ ಮದುವೆ ಆದಾಗಲಿಂದಲೂ ಪ್ರದೀಪ್ ಹಾಗೂ ಆತ‌ನ ತಾಯಿ ಸರೋಜ ಇಬ್ಬರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ರಂತೆ..ತಾಳಿ ಜೊತೆ ಚಿನ್ನದ ಕಾಸು ಹಾಕಿಸಿಕೊಂಡು ಬಂದಿಲ್ಲ ಅಂತಾ ನಿಂದನೆ ಮಾಡಿದ್ರಂತೆ. ಲಾಕ್ ಡೌನ್ ಕಾರಣ ಚಿನ್ನದ ಅಂಗಡಿ ಬಂದ್ ಆಗಿವೆ.. ಚಿನ್ನದ ಕಾಸು ಕೊಡಿಸ್ತೇವೆ ಆಂತಾ ಆಶಾರಾಣಿ ಪೋಷಕರು ಹೇಳಿದ್ರಂತೆ‌.

ಇನ್ನೂ ಮದುವೆ ಸಂದರ್ಭಗಳಲ್ಲಿ 130 ಗ್ರಾಂ ಚಿನ್ನ ಐದು ಲಕ್ಷ ನಗದನ್ನ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ತಾನೂ ಸೆಕ್ಯುರಿಟಿ ಕೆಲ್ಸ ಮಾಡಿದ್ರು ಮಗಳು ಚೆನ್ನಾಗಿರ್ಲಿ ಅಂತಾ ಸಾಫ್ಟ್‌ವೇರ್ ಇಂಜಿನಿಯರ್ ಅಂತಾ ಮದುವೆ ಮಾಡಿದ್ರಂತೆ. ಅಳಿಯನ ಮನೆಯವ್ರು ಕೇಳಿದಷ್ಟು ಕೊಟ್ಟು ಮದುವೆ ಮಾಡಿದ್ರು. ಆದ್ರೆ ಮದುವೆಯಾದ ದಿನದಿಂದಲೇ ಎಂತಹ ತಿರಿಕೆ ಮನೆಯಿಂದ ಸೊಸೆ ತಂದ್ವಿ ಅಂತಾ ಆಶಾರಾಣಿ ಅತ್ತೆ ಸರೋಜ ಬೈತಾ ಇದ್ರಂತೆ ಗಂಡ ಪ್ರದೀಪ್ ಕೂಡ ಇದಕ್ಕೆ ಸಾಥ್ ನೀಡ್ತಿದ್ದ ಅಂತಾ ಆಶಾರಾಣಿ ಪೋಷಕರಿಗೆ ತಿಳಿಸಿದ್ಲಂತೆ ಮೃತೆ ಆಶಾರಾಣಿ.. ಹೀಗಾಗಿಯೇ ತಮ್ಮ ಮಗಳನ್ನ ಹಣಕ್ಕಾಗಿ ಹೊಡೆದು ನೇಣಿಗೆ ಹಾಕಿದ್ದಾರೆ. ವರದಕ್ಷಿಗೆ ಕಿರುಕುಳಕ್ಕೆ ಮುದ್ದಾದ ಮಗಳನ್ನು ಕಳೆದುಕೊಂಡಿದ್ದೇವೆ. ಆರೋಪಿಗಳಿಗೆ ತಕ್ಕ‌ ಶಿಕ್ಷೆ ಕೊಡಿ ಅಂತಾ ಆಶಾರಾಣಿ ಪೋಷಕರು ಒತ್ತಾಯಿಸಿದ್ದಾರೆ.

ಒಟ್ಟಾರೆ, ಪತಿ ಮನೆಯವ್ರ ಧನದಾಹಿತನಕ್ಕೆ ಉತ್ತಮ ಭವಿಷ್ಯದ ಕನಸ್ಸು ಕಂಡಿದ್ದ ಈ ಆಶಾರಾಣಿಯ ಬದುಕು ಕಮರಿ ಹೋಗಿದೆ. ಸಾಂಸಾರಿಕ ಸುಖ ಅನುಭವಿಸಿ ಬಾಳಿ ಬದುಕ ಬೇಕಿದ್ದ ನವ ವಧು ಮದುವೆಯಾದ ಒಂದೇ ತಿಂಗಳಿಗೆ ಮಸಣ ಸೇರಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

VIAಮದುವೆಯಾಗಿ ಮಸಣ ಸೇರಿದ ಮಹಿಳೆ!; ವಿಶೇಷ ವರದಿ
SOURCEಮದುವೆಯಾಗಿ ಮಸಣ ಸೇರಿದ ಮಹಿಳೆ!; ವಿಶೇಷ ವರದಿ
Previous articleಕೊರೋನಾ ಹಿನ್ನಲೆ; ಆಕ್ಸಿಜನ್ ಸಿಲಿಂಡರ್ ಸ್ವತಃ ಇಳಿಸಿಕೊಂಡ ಅಧಿಕಾರಿಗಳು!
Next articleಚಿತ್ರದುರ್ಗ ಜಿಲ್ಲೆಯಲ್ಲಿ ಮೇ 10 ರಿಂದ ಟಫ್ ರೂಲ್ಸ್; ಜಿಲ್ಲಾ SP ಜಿ.ರಾಧಿಕಾ ಅಧಿಕೃತ ಘೋಷಣೆ

LEAVE A REPLY

Please enter your comment!
Please enter your name here