Home Cinema ಸಿನಿರಸಿಕರಿಗೆ ಹೊಸಕಿಕ್ ಕೊಟ್ಟ ‘ಆದ್ಯಂತ’….ಮಯೂರಿಯ ಸಿನಿಮಾದ ಇಂಟ್ರೆಸ್ಟಿಂಗ್ ಖಬರ್…

ಸಿನಿರಸಿಕರಿಗೆ ಹೊಸಕಿಕ್ ಕೊಟ್ಟ ‘ಆದ್ಯಂತ’….ಮಯೂರಿಯ ಸಿನಿಮಾದ ಇಂಟ್ರೆಸ್ಟಿಂಗ್ ಖಬರ್…

262
0
SHARE

ಬೆಂಗಳೂರು. ಇತ್ತೀಚಿಗಷ್ಟೇ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ಚಂದದ ನಾಯಕಿ ಮಯೂರಿ, ಚಂದನವನದಲ್ಲಿ ಮತ್ತೆ ಸದ್ದು ಮಾಡ್ತಿದ್ದಾರೆ. ಅದು, ಆದ್ಯಂತ ಎಂಬ ಸಿನಿಮಾ ಮೂಲಕ. ಹೌದು, ಆದ್ಯಂತ.. ಮಯೂರಿ ಅಭಿನಯದಲ್ಲಿ ಬರಲಿರುವ ಹೊಸ ಸಿನಿಮಾ. ಇತ್ತೀಚಿಗಷ್ಟೇ ಮಯೂರಿ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಬರೀ ಫಸ್ಟ್ ಲುಕ್ ಅಷ್ಟೇ ಅಲ್ಲ ಬರ್ಥ್‌ಡೇಯ ಪ್ರಯುಕ್ತ, ಚಿತ್ರತಂಡ ಚಿತ್ರದ ಚಿಕ್ಕ ಮೇಕಿಂಗ್ ತುಣುಕನ್ನೂ ರಿವೀಲ್ ಮಾಡಿದೆ.

ಮಯೂರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನೂ ವಿಡಿಯೋ ಮೂಲಕ ತಿಳಿಸಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಮೇಕಿಂಗ್ ನಲ್ಲಿ ಮಯೂರಿಯ ಚೇಷ್ಠೆಗಳೂ ಇವೆ. ಸೆಟ್ ಸುತ್ತ ಮುತ್ತವಿರುವ ಚಿಣ್ಣರಿಗೆ ಮಯೂರಿ ಹೇಳಿ ಕೊಟ್ಟಿರುವ ಪ್ರೀ ಕನ್ನಡ ಟ್ಯೂಶನ್‌ನ ಸ್ಯಾಂಪಲ್ ಕೂಡಾ ಇದೆ. ಇದ್ರ ಜೊತೆಯಲ್ಲಿ ಪಾತ್ರಕ್ಕೆ ಜೀವ ತುಂಬಲು ಮಯೂರಿ ಮಾಡಿದ ತಯಾರಿಗಳೂ ಇವೆ. ಅಂದ ಹಾಗೇ ಪುನೀತ್ ಶರ್ಮಾ ಚಿತ್ರದ ನಿರ್ದೇಶಕ. ರಾಜಮೌಳಿ ಹಾಗೂ ರಾಮ್ ಗೋಪಾಲ್ ವರ್ಮಾ ಜೊತೆ ಕೆಲ್ಸ ಮಾಡಿದ ಅನುಭವ ಇವ್ರ ಬೆನ್ನಿಗಿದೆ ಅನ್ನೋದು ನಿಮ್ಮ ಗಮನಕ್ಕಿರಲಿ.

ಇನ್ನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದೀಪಾ ಯಾನೆ ಮಯೂರಿಗೆ ಅಚಾನಕ್ಕಾಗಿ ತನ್ನ ಅಜ್ಜಿ ಬರೆದ ಆಸ್ತಿಯ ವೀಲ್ ಸಿಗುತ್ತದೆ. ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದ ದೀಪಾ, ಆ ಆಸ್ತಿಯನ್ನು ಮಾರಲು ಸಕಲೇಶಪುರದ ಎಸ್ಟೇಟ್ ಗೆ ತನ್ನ ಪ್ರಿಯಕರನೊಂದಿಗೆ ಬರುತ್ತಾಳೆ. ಎಸ್ಟೇಟ್ ಮನೆಯಲ್ಲಿ ಅವಳಿಗೆ ಹಲವು ವಿಚಿತ್ರವಾದ ಘಟನೆಗಳು ನಡೆಯುತ್ತವೆ.

ದೀಪಾ ಕೂಡ ಆ ಘಟನೆಗಳ ಸುಳಿಗೆ ಸಿಲುಕಿಕೊಳ್ಳುತ್ತಾಳೆ. ಆ ಘಟನೆ ಏನು..? ಅವಳು ಹೇಗೆ ಅದರಿಂದ ಪಾರಾಗಿ ಬರುತ್ತಾಳೆ ಅನ್ನೋದು ಚಿತ್ರದ ಕಥಾ ವಸ್ತು.

ಹೊಸ ಕಲಾವಿದ ದಿಲೀಪ್, ರಮೇಶ್ ಭಟ್,  ಶ್ರೀನಾಥ್ ವಸಿಷ್ಠ, ಪ್ರಶಾಂತ್ ನಟನಾ, ಟಿಕ್ ಟಾಕ್ ಖ್ಯಾತಿಯ ಕಲಾವಿದ ನಿಖಿಲ್ ಗೌಡ ಚಿತ್ರದ ತಾರಾಗಣದಲ್ಲಿ ಇದ್ದಾರೆ. ಲೇಖನಾ ಕ್ರಿಯೇಷನ್ ಮತ್ತು ಆರ್ ಆರ್ ಮೂವೀಸ್ ಬ್ಯಾನರ್ ನಲ್ಲಿ ರಮೇಶ್ ಬಾಬು ಟಿ ಬಂಡವಾಳ ಹೂಡಿದ್ದಾರೆ.

ಇವ್ರಿಗೆ ಪ್ರಕಾಶ್ ಎಲಗೂಡು, ಮೋಹನ್ ಕುಮಾರ್ ಆರ್.ಎಸ್ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಆಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿರುವ ಆದ್ಯಂತಗೆ ನವೀನ್ ಕುಮಾರ್ ಚಲ್ಲ ಛಾಯಾಗ್ರಹಣ ಹಾಗೂ ಸ್ಯಾಂಡಿ ಸಂಗೀತ ನಿರ್ದೇಶನವಿದೆ.

ಸದ್ಯ ಫಸ್ಟ್ ಲುಕ್ ಮೂಲಕ ಎಲ್ಲರ ಗಮನಸೆಳೆದ ಆದ್ಯಂತ ಕೊರೊನಾ ಹಾವಳಿ ಕಡಿಮೆಯಾಗಿ ಚಿತ್ರಮಂದಿರದ ಬಾಗಿಲು ತೆರೆದ್ಮೇಲೆ ಬಿಡುಗಡೆಯಾಗಲಿದೆ.

 

LEAVE A REPLY

Please enter your comment!
Please enter your name here