Home Cinema “Me Too” ಅಭಿಯಾನದಲ್ಲಿ ಉಲ್ಟಾ ಹೊಡೆದ ಪ್ರಕಾಶ್ ರೈ..!? “ಅರ್ಜುನ್‌ರನ್ನು ಆರೋಪಿ ಎಂದಿಲ್ಲ, ಶೃತಿ ಕೂಡ...

“Me Too” ಅಭಿಯಾನದಲ್ಲಿ ಉಲ್ಟಾ ಹೊಡೆದ ಪ್ರಕಾಶ್ ರೈ..!? “ಅರ್ಜುನ್‌ರನ್ನು ಆರೋಪಿ ಎಂದಿಲ್ಲ, ಶೃತಿ ಕೂಡ ಅವಕಾಶವಾದಿ ಹೆಣ್ಣು ಮಗಳಲ್ಲ”…

1166
0
SHARE

ಖ್ಯಾತ ನಟ ಅರ್ಜುನ್‌ ಸರ್ಜಾ ವಿರುದ್ದ ಮೀ ಟೂ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್‌ ಪರ ಬ್ಯಾಟ್‌ ಬೀಸಿ ಭಾರೀ ಟ್ರೋಲ್‌ಗೊಳಗಾಗಿದ್ದ ನಟ ಪ್ರಕಾಶ್‌ ರೈ ಅವರು ಉಲ್ಟಾ ಹೊಡೆದಿದ್ದಾರೆ. ಟ್ವೀಟ್‌ ಮೂಲಕ ನಾನು ಅರ್ಜುನ್‌ ಸರ್ಜಾ ಅವರನ್ನು ಸಾರಾ ಸಗಟಾಗಿ ಅಪರಾಧಿ ಎನ್ನಲಿಲ್ಲ ಎಂದಿದ್ದಾರೆ.

“ಆಚಾರ.ವಿಚಾರಗಳಿಲ್ಲದ ನಾಲಿಗೆಗಳು..ತಮ್ಮ ನೀಚ ಬುದ್ದಿಯಿಂದ ತಮ್ಮ ತಮ್ಮ ಹಿತಾಸಕ್ತಿಗಳ ಬೇಳೆ ಬೇಯಿಸಿಕೊಳ್ಳುತ್ತಾ ಮೀಟೂ ಅಭಿಯಾನವನ್ನು ದಾರಿ ತಪ್ಪಿಸುವ ಮುನ್ನ”ಎಂದು ಪೋಸ್ಟ್‌ ಮಾಡಿದ್ದಾರೆ. ಅರ್ಜುನ್‌ ಸರ್ಜಾ ನನ್ನ ಬಹುಕಾಲದ ಗೆಳೆಯ…ಸಹಪ್ರಯಾಣಿಕ…ಆತನನ್ನು ನಾನು ತುಂಬಾ ಚೆನ್ನಾಗಿ , ನಿಮ್ಮೆಲರಿಗಿಂತ ಆಂತರಿಕವಾಗಿ ಬಲ್ಲೆ …

ನಾನು ಎಲ್ಲೂ ಆತನನ್ನು ಸಾರಾಸಗಟಾಗಿ ಅಪರಾಧಿ ಎನ್ನಲಿಲ್ಲ….ಯಾರ ಬಗ್ಗೆಯೂ ಅರ್ಥವಿಲ್ಲದ ದೂಷಣೆ ಮಾಡುವವನು ನಾನಲ್ಲ..ಶ್ರುತಿ..ಎಲ್ಲರೂ ದೂಷಿಸಿರುವಂತೆ ಅವಕಾಶವಾದಿ ಹೆಣ್ಣು ಮಗಳಲ್ಲ..ಅಪ್ಪಟ ಪ್ರತಿಭಾವಂತೆ..ದಿಟ್ಟ ಹೆಣ್ಣು..ನಮ್ಮೆಲ್ಲರಂತೆ ಇವರನ್ನೂ ಬೆಳೆಸಿರುವುದು ನಮ್ಮ ಸಮಾಜವೇ..

“ಈ ಇಬ್ಬರೂ ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಾದವರೂ.ಮಾಡಲು ಸಾಧ್ಯವಿರುವವರು.ಈ ಸತ್ಯದ ಹಿನ್ನಲೆಯಲ್ಲಿ ನಾನು ತುಂಬಾ ಮಾರ್ಮಿಕವಾಗಿ ಕೇಳುತ್ತಿರುವ ಸೂಕ್ಷ್ಮತೆಯ ಪ್ರತಿಕ್ರಿಯೆ ಎಲ್ಲರಿಗೂ ಅರ್ಥವಾದರೆ ಒಳಿತು.ಪಕ್ಷಪಾತವಿಲ್ಲದೆ..ಪೂರ್ವಾಗ್ರಹಪೀಡಿತರಲ್ಲದ ಕೆಲವು ಹಿರಿಯರು ಇಬ್ಬರನ್ನು ಕರೆಸಿ ಕೂರಿಸಿ ತಕ್ಷಣವೆ ಇತ್ಯರ್ಥಿಸಿ”ಎಂದು ಬರೆದಿದ್ದಾರೆ.

LEAVE A REPLY

Please enter your comment!
Please enter your name here