Home Cinema “ME TOO” ಚಳುವಳಿಯಲ್ಲಿ “ಬೆತ್ತಲಾದವರು” ಆದೆಷ್ಟು ಜನ ಗೊತ್ತೇ..!! ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ಗೊತ್ತಾ “ಖುಷ್ಬೂ”...

“ME TOO” ಚಳುವಳಿಯಲ್ಲಿ “ಬೆತ್ತಲಾದವರು” ಆದೆಷ್ಟು ಜನ ಗೊತ್ತೇ..!! ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ಗೊತ್ತಾ “ಖುಷ್ಬೂ” ಅಂದಿದ್ದೇನು…!?

3280
0
SHARE

ದೇಶಾದ್ಯಂತ ಮೀಟೂ ಅಭಿಯಾನ ಆರಂಭವಾದಾಗಿನಿಂದ ದಿನಕ್ಕೊಂದು ಹೆಸರುಗಳು ಬಹಿರಂಗ ಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ನಟಿಯರು- ಸೆಲೆಬ್ರಿಟಿಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡುತ್ತಿದ್ದಾರೆ. ಖ್ಯಾತ ನಾಮರ ಮುಖವಾಡ ಕಳಚಿ ಬೀಳ್ತಿದೆ. ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದೆ, ಸಮಾಜದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಹಿ ಅನುಭವಗ ಳನ್ನು ಬಹಿರಂಗಪಡಿಸುತ್ತಿದ್ದಾರೆ.ಇಷ್ಟೆಲ್ಲಾ ಪ್ರಕರಣಗಳ ಮಧ್ಯೆ #ಮೀ- ಟೂ ಅಭಿಯಾನದ ಬಗ್ಗೆ ಖ್ಯಾತ ನಟಿ ಖುಷ್ಭೂ ತಮ್ಮ ಅನುಭವವನ್ನು ಶೇರ್ ಮಾಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ಗೊತ್ತಾ “ಖುಷ್ಬೂ” ಅಂದಿದ್ದೇನು…!:ಯಸ್.. ನಟಿ ಖುಷ್ಭೂ ಸ್ಯಾಂಡಲ್‌ವುಡ್‌ನಲ್ಲಿ ರವಿಚಂದ್ರನ್, ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದಾರೆ. ರಣಧೀರ, ಅಂಜದ ಗಂಡು ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಮನೆಮಾತಾದ ಅಪ್ರತಿಮ ನಾಯಕಿ. ಖುಷ್ಭು ರವಿಚಂದ್ರನ್ ನಿರ್ಮಾಣದ ನಿರ್ದೇಶನದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅತ್ಯತ್ತಮ ನಟನೆ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದಾರೆ.ಸದ್ಯ ಕಾಲಿವುಡ್, ಮಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೇ ಮೀ ಟೂ ಈ ಆಂದೋಲನ ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ.

ಇದರ ಬೆನ್ನಲ್ಲೇ ಖ್ಯಾತ ನಟಿ ಖುಷ್ಭೂ ಸಹ # ಮೀ.. ಟೂ ಅಭಿಯಾನದ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ಕ್ರೇಝೀ ಸ್ಟಾರ್ ರವಿಚಂದ್ರನ್ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ. ಕಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಹೆಸರುವ ಮಾಡಿರುವ ನಟಿ ಖುಷ್ಭೂ ಮೀ..ಟೂ ಪರ ಧ್ವನಿ ಎತ್ತಿರುವುದು, ತಮ್ಮಗಾದ ಯಾವುದೇ ಅನ್ಯಾಯದ ವಿರುದ್ದ ಬಗ್ಗೆ ಅಲ್ಲ.. ಬದ್ಲಿಗೆ, ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ತಮ್ಮ ನಿಲುವನ್ನು ಮುಕ್ತವಾಗಿ ತಮ್ಮ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಈ ಮೂಲಕ # ಮೀ.. ಟೂ ಅಂತ ಅಬ್ಬರಿಸಿ ಬೊಬ್ಬಿರಿಯುತ್ತಿ ರುವವರಿಗೆ ಸೈಲೆಂಟಾಗೆ ಟಾಂಗ್ ಕೊಡುವ ಪ್ರಯತ್ನ ಮಾಡಿದ್ದಾರೆ.

ಖುಷ್ಭೂ ಟ್ವೀಟ್:ನನ್ನ ೪೦ ವರ್ಷಗಳ ಸಿನಿಮಾ ಜೀವನದಲ್ಲಿ ಅಂತಹ ಸಂದರ್ಭ ಎದುರಾಗಲಿಲ್ಲ. ಎನ್ನುವುದನ್ನು ನಾನು ಈ ಟ್ವೀಟ್ ಮಾಡುವ ಮೂಲಕ ಹೇಳಿಕೊಳ್ಳಲು ಇತ್ತೀಚಿಸುತ್ತೇನೆ. ನಾನು ಜೀವನದಲ್ಲಿ ಸಾಕಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಆದ್ರೆ ಮೀ.. ಟೂ ಪ್ರಕರಣದಂತ ಅನುಭವನ್ನು ನಾನು ಎಂದು ಫೇಸ್ ಮಾಡಿಲ್ಲ. ನನ್ನ ಕಷ್ಟದ ದಿನಗಳಲ್ಲಿ ನಟ ರವಿಚಂದ್ರನ್ ಅವರು ನನಗೆ ಹೆಚ್ಚು ಸಹಕರಿಸಿದ್ದಾರೆ. ಇವರಿಂದ ನನಗೆ ಎಂದೂ ಈರೀತಿಯ ಘಟನೆಗಳು ನಡೆದಿಲ್ಲ. ನಮ್ಮ ಕಷ್ಟದ ಹಾದಿಯನ್ನು ನಾವೇ ಎದುರಿಸಬೇಕು.

ಹೀಗೆ ಖುಷ್ಭೂ ಮೀ..ಟೂ ಅಭಿಯಾನದ ಬಗ್ಗೆ ಮೊದಲಿಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ರು. ಖುಷ್ಭು ಟ್ವೀಟ್ ಮಾಡಿದ ಕೆಲಹೊತ್ತಿನಲ್ಲೇ ಸಾಕಷ್ಟು ಮಂದಿ ಖಷ್ಭೂ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ರು. ಖುಷ್ಭು ಟ್ವೀಟ್‌ಗೆ ರೀಟ್ವೀಟ್‌ಗಳನ್ನು ಮಾಡಿದ್ದಾರೆ. ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ರವಿಚಂದ್ರನ್ ಎಂತಹ ವ್ಯಕ್ತಿ ಅನ್ನೋದು ಗೊತ್ತಿಲ್ಲದೆ. ಪಬ್ಲಿಸಿಟಿಗಾಗಿ ಸುಮ್ಮನೆ ಮಾತನಾಡಬೇಡಿ. ನೀವು ಸಂತ್ರಸ್ತೆ ಅಲ್ಲ, ನಿಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲದೇ ಈ ರೀತಿ ಒಬ್ಬ ಪಾಪ್ಯುಲರ್ ವ್ಯಕ್ತಿಯ ಬಗ್ಗೆ ಮಾತನಾಡುವುದು ತಪ್ಪು. ರವಿಚಂದ್ರನ್ ಎಂತಹವರು ಅಂತ ನನಗೆ ಗೊತ್ತು. ಅವರನ್ನು ನಾನು ತುಂಬಾ ಅತ್ತಿರದಿಂದ ಬಲ್ಲೆ.

ಇಂದು ನಮ್ಮ ತಾಯಿ ಬದುಕಿದ್ದಾರೆ ಅಂದ್ರೆ ಅದಕ್ಕೆ ಅವರೇ ಕಾರಣ. ರವಿಚಂದ್ರನ್, ಅವರ ತಂದೆ ಎಸ್. ವೀರಾಸ್ವಾಮಿ ಬಗ್ಗೆ ನಿನಗೆ ಗೊತ್ತಾ..? ರವಿಚಂದ್ರನ್ ಬಹಳ ಒಳ್ಳೆ ಗುಣದವರು. ಎಲ್ಲರಿಗೂ ಒಳ್ಳೆ ಸ್ನೇಹಿತರಾಗಿದ್ದವರು. ಕನ್ನಡ ಚಿತ್ರರಂಗಕ್ಕೆ ಅವರು ಮಾಡಿದ ಸೇವೆಯ ಬಗ್ಗೆ ನಿಮಗೆ ಗೊತ್ತಿಲ್ಲ.ಅಂತಹವರ ಕುರಿತು ಬಾಯಿಗೆ ಬಂದಂತೆ ಮಾತನಾಡುವುದು ಎಷ್ಟು ಸರಿ. ಹೀಗೆ ಲಕ್ಷ್ಮೀ ಮಾತಿಗೆ ಸರಿಯಾಗಿ ಖುಷ್ಭು ತಿರುಗೇಟು ನೀಡುವ ಮೂಲಕ, ಲಕ್ಷ್ಮೀಯನ್ನು ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಯ ನಂತ್ರ ಖುಷ್ಭೂ ಮೀಟೂ ಬದುಕಿನ ಎಲ್ಲಾ ಹಂತಗಳಲ್ಲಿಯೂ ಸಾಂಕ್ರಾಮಿಕವಾಗಿದೆ.

ಸಮಾಜದಲ್ಲಿ ಈ ಅಭಿಯಾನವನ್ನು ನಡೆಸುವ ಅಗತ್ಯವಿದೆ. ಇದರಿಂದ ಸ್ತ್ರೀಯರಿಗೆ ಬಲ ಬಂದತಾಗುತ್ತದೆ. ದೌರ್ಜನ್ಯಕ್ಕೊಳಗಾದವರು ಮುಕ್ತವಾಗಿ ಬಹಿರಂಗವಾಗಿ ತಮಗಾದ ಅನ್ಯಾಯದ ವಿರುದ್ದ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.ಅಮಿತಾಭ್ ಬಚ್ಚನ್ ಮೇಲೆ ಕೇಳಿ ಬಂದ “ಆರೋಪ” ನಿಜವೇನು..?:ಮೊದಲಿಗೆ ಹಾಲಿವುಡ್‌ನಲ್ಲಿ ಮೀಟೂ ಆರಂಭವಾಗಿತ್ತು. ಬಳಿಕ ಸುನಾಮಿಯಂತೆ ಮೀಟೂ ಭಾರತದಾದ್ಯಂತ ಸಂಚಲನ ಸೃಷ್ಠಿಸುತ್ತಿದೆ. ನಾನಾ ಪಾಟೇಕರ್, ಸುಭಾಷ್ ಘೈ, ಅಭಿಜಿತ್ ಭಟ್ಟಾಚಾರ್ಯ, ಅಲೋಕ್‌ನಾಥ್, ಚೇತನ್ ಭಗತ್ ಸುನಿಲ್ ಗ್ರೋವರ್,ಎಂ ಜೆ. ಅಕ್ಬರ್, ಕೈಲಾ ಶ್ ಕೇರ್ ಸೇರಿದಂತೆ ದೊಡ್ಡ ದೊಡ್ಡ ಹೆಸರುಗಳ ವಿರುದ್ದ ಕೇಳಿಬಂದಿರೋ ಮೀಟೂ ಅಭಿಯಾನ ಇದೀಗ ಬಾಲಿವುಡ್‌ನ ಬಿಗ್ ಬಿ ಅಮಿತಾಭ್‌ಗೂ ತಟ್ಟಿದೆ.

ಕೇಶ ವಿನ್ಯಾಸಕಿ, ಫ್ಯಾಶನ್ ಆರ್ಟಿಸ್ಟ್, ಬರಹಗಾರ್ತಿಯು ಆಗಿರುವ ಸಪ್ನಾ ಮೋತಿ ಭವಾನಿ ಅಮಿತಾಭ್ ವಿರುದ್ಧ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಅಮಿತಾಭ್ ನಿಜವಾದ ಅನಾವರಣವಾಗಲಿದೆ ಅಂದಿದ್ದಾರೆ.ನಾನು ಅಮಿತಾಭ್ ಬಚ್ಚನ್ ನೀಡಿರುವ ಲೈಂಗಿಕ ಕಿರುಕುಳದ ಬಗ್ಗೆ ಹಲವರಿಂದ ಕೇಳಿದ್ದೇನೆ. ನನಗೆ ನಂಬಿಕೆ ಇದೆ, ಬಚ್ಚನ್‌ರಿಂದ ಅನ್ಯಾಯಕ್ಕೊಳಗಾದ ಮಹಿಳೆಯರು ಹೊರ ಬಂದು ತಮಗಾದ ಅನ್ಯಾಯವನ್ನು ಹೇಳಿಕೊಳ್ಳುತ್ತಾರೆ. ಮಹಿಳೆಯರು, ಸದ್ಯದಲ್ಲೇ ಟ್ವೀಟ್ ಮಾಡುವ ಮೂಲಕ ತಮಗಾದ ಅನ್ಯಾಯದ ವಿರುದ್ದ ಸದ್ಯದಲ್ಲೇ ಧ್ವನಿ ಎತ್ತಲಿದ್ದಾರೆ.

ಹೀಗೆ ಯಾವುದೇ ಉರುಳಿಲ್ಲದೆ ಬಿಗ್ ಬಿ ಅಮಿತಾಭ್ ಬಚ್ಚನ್ ಬಗ್ಗೆ ಕೇಶ ವಿನ್ಯಾಸಕಿ ಸಪ್ನಾ ಬಾಯಿಗೆ ಬಂತೆ ಟ್ವೀಟ್ ಮಾಡಿರೋದು ಸಾಕಷ್ಟು ಮಂದಿ ಕಣ್ಣು ಕೆಂಪಾಗಿಸುವುದರ ಜೊತೆಗೆ ಸಾಕಷ್ಟು ಅನುಮಾನಕ್ಕೂ ಕಾರಣವಾಗಿದೆ.ಇತ್ತೀಚೆಗಷ್ಟೇ ಯಾವುದೇ ಮಹಿಳೆ, ಯುವತಿ, ಯಾರೇ ಆಗಲಿ ಅನಾಚಾರಕ್ಕೆ ಒಳಗಾಗಬಾರದು, ಕಿರಿಕಿರಿ ಅನುಭವಿಸುವಂತಾಗಬಾರದು ಎಂದು ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ೭೬ನೇ ಹುಟ್ಟುಹಬ್ಬದಂದು ತಮ್ಮ ಮನದಾಳದ ಮಾತನ್ನು ಹೊರಹಾಕಿದ್ರು. ಈ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದ ಅಮಿತಾಭ್, ಕೆಲಸದ ಸ್ಥಳದಲ್ಲಿ ಯಾರೂ ಕಿರಿಕಿರಿ ಅನುಭವಿಸುವಂತಾಗಬಾರದು.

ಇಂತಹ ಘಟನೆ ಎಲ್ಲೇ ನಡೆಯಲಿ ಅದು ಖಂಡನಾರ್ಹ ಮತ್ತು ಇಂತಹ ಕಿರಿಕಿರಿಯಾದ ತಕ್ಷಣ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು ಅದು ಎಲ್ಲರ ಕರ್ತವ್ಯ ಕೂಡ ಎಂದು ಆಂಗ್ರಿ ಯಂಗ್ ಮ್ಯಾನ್ ಅಮಿತಾಭ್ ಮಹಿಳೆಯರಿಗೆ ತಮ್ಮ ಬರ್ತ್‌ಡೇ ದಿನ ಕಿವಿ ಮಾತನ್ನು ಹೇಳಿದ್ರು. ಇದಾದ ಬೆನ್ನಲ್ಲೆ ಅವರ ಮೇಲೆ ಇಂಥದೊಂದು ಆರೋಪ ಕೇಳಿಬರ್ತಿರೋದು ಕೇವಲ ಸಮೂಹ ಸನ್ನಿ ಯಿಂದ ಬಂದಿರುವ ಆರೋಪನಾ ಇಲ್ಲಾ ಸತ್ಯವಾ..? ಎಂಬ ಅನುಮಾನ ಮೂಡುವಂತೆ ಮಾಡ್ತಿದೆ.ಒಟ್ಟಾರೆ .. ದೇಶವ್ಯಾಪಿ ಕೇಳಿಬರ್ತಿರುವ ಮೀಟೂ ಸಮೂರ ಸನ್ನಿಗೆ ಸದ್ಯ ಬಿಗ್ ಬಿ ವಿರುದ್ದ ಕೇಳಿಬಂದಿರೋದು . ಮುಂದಿನ ದಿನಗಳಲ್ಲಿ ಈ ಅಭಿಯಾನ ಎಲ್ಲಿಗೆ ಮುಟ್ಟುತ್ತೆ ಎಂಬ ಯಕ್ಷ ಪ್ರಶ್ನೆಯನ್ನು ಹುಟ್ಟುಹಾಕಿದೆ.

LEAVE A REPLY

Please enter your comment!
Please enter your name here