“ಮನಸಾಗಿದೆ”ಗೆ ಮನಸೋತ ಚಿತ್ರ ರಸಿಕರು- ಹೊಸಬರ ಪ್ರಯತ್ನಕ್ಕೆ ಶಹಬ್ಬಾಸ್ ಎಂದ ಸಿನಿಪ್ರಿಯರು

ಚಲನಚಿತ್ರ

ಸ್ಯಾಂಡಲ್ ವುಡ್ ಗೆ ಈಗ ಮನಸಾಗಿದೇ… ಹೌದು ಮನಸಾಗಿದೇ ಸಿನಿಮಾ ಈಗ ರಿಲೀಸ್ ಆಗಿದ್ದು ಒಳ್ಳೆ ರೆಸ್ಪಾನ್ಸ್ ಸಿಗ್ತಾಯಿದೆ . ಹೊಸಬರ ಸಿನಿಮಾ ಆದ್ರು ಕಥೆಯ ಮೂಲಕ ಎಲ್ಲರ ಮನಸೆಳೆಯುತ್ತಿದೆ.ಕಥೆ ಹಾಗೂ ನಿರ್ಮಾಣ ಸಿ ಚಂದ್ರಶೇಖರ . ನಿರ್ದೇಶನ ಹಾಗೂ ಸ್ಕ್ರೀನ್ ಪ್ಲೇ ಶ್ರೀನಿವಾಸ ಶಿಡ್ಲಘಟ್ಟ ಅವ್ರದ್ದು . ಇದು ನಿರ್ಮಾಪಕ ಚಂದ್ರಶೇಖರ ಅವರ ನಾಲ್ಕನೇ ಸಿನಿಮಾ ಆಗಿದ್ದು , ಅವರ ಮಗ ಅಭಯ್ ನಾಯಕ‌ ನಟನಾಗಿ ಮೊದಲ ಬಾರಿಗೆ ತೆರೆ ಮೇಲೆ ಮಿಂಚಿದ್ದಾರೆ .

ಅಭಯ್ ಗೆ ಮೇಘಶ್ರೀ ಹಾಗೂ ಅಥೀರಾ ಅರುಣ್ ನಾಯಕಿಯರಾಗಿ ಕಾಣಿಸಿದ್ದಾರೆ .ಈ ಸಿನಿಮಾದಲ್ಲಿ ಒಟ್ಟು 5 ಹಾಡುಗಳಿದ್ದು ಮಾನಸಾ ಹೋಳ್ಳಾ ಸಂಗೀತ ಸಂಯೋಜನೆ ಹಾಗೂ ಕವಿರಾಜ್ , ನಾಗೇಂದ್ರ ಪ್ರಸಾದ್ ಸೇರಿದಂತೆ ಘಟಾನುಘಟಿ ಚಿತ್ರ ಸಾಹಿತಿಗಳ ಸಾಹಿತ್ಯದಲ್ಲಿ ಮೀಡಿಬಂದ ಸಾಂಗ್ ಗಳು ಕೇಳುಗರ ಮನಸೆಳೆದಿದೆ.

ಥ್ರಿಲ್ಲರ್ ಮಂಜು ಸಿನಿಮಾದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ . ಇನ್ನೂ ಸಿನಿಮಾದ ಕಥೆಬಗ್ಗೆ ಹೇಳಬೇಕಂದ್ರೆ ಸಾಮಾನ್ಯವಾಗಿ ಲ್ ಸ್ಟೋರಿ ಅಂದ್ರೆ ಮರಾ ಸುತ್ತುವ ಕತೆ ಅನ್ಕೊತಾರೆ .‌ಆದ್ರೆ ಈ ಸಿನಿಮಾ ಹಾಗಲ್ಲಾ . ಇಲ್ಲಿ ನಿಜವಾದ ಪ್ರೀತಿ ಅಂದ್ರೆ ಏನು‌ ? ಹಾಗೂ‌ ಒಂದು ಫ್ಯಾಮಿಲಿನಲ್ಲಿರುವವರು ಪ್ರೀತಿಯನ್ನ ಪ್ರೀತಿಯಿಂದ ನೋಡ್ಬೇಕು ಅನ್ನೊದನ್ನ ಅಚ್ಚುಕಟ್ಟಾಗಿ ತೋರಿಸಿದ್ದಾರೆ .ಹೊಸಬರ ಚಿತ್ರವಾದ್ರು ಎಲ್ಲರ ನಟನೆ‌ ಕಣ್ಣು ಕಟ್ಟುವಂತಿದ್ದು ಪ್ರೇಕ್ಷಕ ಪ್ರಭು ಫೀದಾ ಆಗೋದು ಗ್ಯಾರೆಂಟಿ.

Leave a Reply

Your email address will not be published.