Minister Narayana swamy.. ಚುನಾವಣೆ ವೇಳೆ ಆಡಳಿತದಲ್ಲಿ ಗೊಂದಲ ಸೃಷ್ಠಿಗೆ ಕಾಂಗ್ರೆಸ್ ಯತ್ನ ಮಾಡ್ತಿದೆ: ಸಚಿವ ಎ ನಾರಾಯಣಸ್ವಾಮಿ

ಜಿಲ್ಲೆ

ಚಿತ್ರದುರ್ಗ : ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ನಗರದ ಚಂದ್ರವಳ್ಳಿ ಗೇಟ್ ನಿಂದ ಬೃಹತ್ ತಿರಂಗಾ ಬೈಕ್ ರ್ಯಾಲಿ ನಡೆಯಿತು. ಈ ವೇಳೆ ಸಾವಿರಾರು ದ್ವಿಚಕ್ರ ಸವಾರರು ತಮ್ಮ ವಾಹನಗಳ  ಮೇಲೆ ದೇಶದ ಭಾವುಟವನ್ನು ಕಟ್ಟಿಕೊಂಡು ನಗರದ ಪ್ರಮುಖ ಎಲ್ಲಾ ರಸ್ತೆಗಳಲ್ಲಿ ಬೃಹತ್ ತಿರಂಗಾ ಬೈಕ್ ರ್ಯಾಲಿ ನಡೆಸಿದರು. ಈ ವೇಳೆ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಹಾಗು MLC ಕೆ.ಎಸ್ ನವೀನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಚುನಾವಣೆ ವೇಳೆ ಆಡಳಿತದಲ್ಲಿ ಗೊಂದಲ‌ ಸೃಷ್ಠಿಗೆ ಕಾಂಗ್ರೆಸ್ ಯತ್ನ ಮಾಡ್ತಿದೆ. ಕಾಂಗ್ರೆಸ್ ಪಕ್ಷದ ಕುತಂತ್ರ ಫಲ ನೀಡುವುದಿಲ್ಲ. ಎಂದು ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಚಿವ ನಾರಾಯಣಸ್ವಾಮಿ ತಿರುಗೇಟು ನೀಡಿದರು‌‌. ಪಕ್ಷದ ತೀರ್ಮಾನ, ಬಿಎಸ್ ವೈ ಸಂಕಲ್ಪದಂತೆ ಬೊಮ್ಮಾಯಿ ಸಿಎಂ ಆಡಳಿತ ಮಾಡ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಆಡಳಿತ ಅವಧಿ ಪೂರ್ಣ ಆಗಲಿದೆ. ಬಿಎಸ್ ವೈ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಖಡಕ್ ಸಂದೇಶ ರವಾನಿಸಿದರು.

Leave a Reply

Your email address will not be published.