
ಚುನಾವಣೆ ಬಳಿಕ ಪೆಟ್ರೋಲ್ ಡೀಸೆಲ್ ಏರಿಕೆ ವಿಚಾರ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು..?
ಬೆಂಗಳೂರು : ವಿಧಾನಸಭೆ ಚುನಾವಣೆ ಬಳಿಕ ಪೆಟ್ರೋಲ್ ಡೀಸೆಲ್ ಏರಿಕೆಯ ಕುರಿತಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ವಿತ್ತ ಸಚಿವೆ, ‘ರಷ್ಯಾ-ಉಕ್ರೇನ್ ಯುದ್ಧ ಹಲವು ಸವಾಲುಗಳನ್ನ ತಂದೊಡ್ಡಿದೆ. ಯುದ್ಧದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ. ಭಾರತ ಶೇಕಡಾ 80ರಷ್ಟು ಕಚ್ಚಾತೈಲ ಆಮದು ಮಾಡಿಕೊ ಳ್ಳುತ್ತಿದೆ. ಇನ್ನು ಪೆಟ್ರೋಲಿಯಂ ಕಂಪನಿಗಳು ತೈಲ ದರದ ಬಗ್ಗೆ ನಿರ್ಧರಿಸಲಿವೆ. ಪರ್ಯಾಯ ಮೂಲಗಳಿಂದ ತೈಲ ಆಮದು ಬಗ್ಗೆ ಚಿಂತಿಸ್ತಿದ್ದೇವೆ. ಇನ್ನೂ ತೈಲ ಬೆಲೆ ಏರುಪೇರು ತಡೆಯಲು ಬಜೆಟ್ನಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದೆ. ಆದ್ರೂ ಯುದ್ಧದಿಂದ ವ್ಯತಿರಿಕ್ತ ಪರಿಣಾಮ ಖಂಡಿತವಾಗಿಯೂ ಆಗಲಿದೆ’ ಎಂದು ಹೇಳಿದರು.