Home KARNATAKA ಖಾಸಗಿ ಆಸ್ಪತ್ರೆಗಳು ಮಾನವೀಯತೆಯಿಂದ ಸಹಾಯ ಮಾಡಿ ;  ಸಚಿವ ಆರ್ ಅಶೋಕ್ ಮನವಿ

ಖಾಸಗಿ ಆಸ್ಪತ್ರೆಗಳು ಮಾನವೀಯತೆಯಿಂದ ಸಹಾಯ ಮಾಡಿ ;  ಸಚಿವ ಆರ್ ಅಶೋಕ್ ಮನವಿ

461
0
SHARE

ಬೆಂಗಳೂರು. ಲಾಕ್ ಡೌನ್ ಅವಧಿಯಲ್ಲಿ ವೈದ್ಯಕೀಯ ಸಂಬಂಧಿತ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶ ನೀಡಲು ಸಿಎಂ ಒಪ್ಪಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ಮಾಡಲು ಚೈನ್ ಬ್ರೇಕ್ ಮಾಡಬೇಕಾಗಿದೆ, ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇದೆ. ಆದರೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಬೆಡ್ ಸಮಸ್ಯೆ ಇಲ್ಲ ಖಾಸಗಿ ಆಸ್ಪತ್ರೆಗಳ ಬೆಡ್ ಸ್ಟ್ರೀಮ್ ಲೈನ್ ಮಾಡಿದರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ಕಡಿಮೆಯಾಗುತ್ತದೆ.

ಖಾಸಗಿ ಆಸ್ಪತ್ರೆಗಳು  ಮಾನವೀಯತೆಯಿಂದ ಸಹಾಯ ಮಾಡಿ  ಎಂದು ಸಚಿವ ಆರ್ ಅಶೋಕ್ ಮನವಿ ಮಾಡಿದ್ದೇವೆ. ಬೆಂಗಳೂರ ನಗರ ಸೇರಿದಂತೆ ಬೆಂಗಳೂರು ಗ್ರಾಮೀಣದಲ್ಲಿ  ಲಾಕ್ ಡೌನ್ ಸದ್ಯಕ್ಕೆ ಏಳು ದಿನ ಮಾತ್ರ ಮಾಡಲಾಗಿದೆ. ಕೊರೊನಾ ಸ್ಪೀಡ್ ಯಾವ ರೀತಿ ಕಡಿಮೆ ಆಗುತ್ತದೆ ಎಂಬುದನ್ನು ನೋಡಿ ಇದರ ಬಗ್ಗೆ ತಜ್ಞರ ವರದಿ ಪಡೆದು ಲಾಕ್ ಡೌನ್ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು  ಲಾಕ್ ಡೌನ್ ಮುಗಿಯುವ ಎರಡು ದಿನ ಮೊದಲೇ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ನಿನ್ನೆಯೇ ಬೆಂಗಳೂರು ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ಯಾರ್ಯಾರು ಎಲ್ಲೆಲ್ಲಿಗೆ ಹೋಗಬೇಕು ಅಂತಾ ಇದ್ದೀರೋ ಅವರು ನಾಳೆಯೇ ಹೊರಟುಬಿಡಿ. ಅಗತ್ಯ ಸೇವೆ ಹೊರತುಪಡಿಸಿ ಉಳಿದವರು ಮನೆಯಲ್ಲೇ ಇರಿ ಎಂದು ಜನರಲ್ಲಿ ಸರ್ಕಾರದ ಪರವಾಗಿ ಕೈ ಮುಗಿದು ವಿನಂತಿ ಮಾಡುತ್ತೇನೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here