Home District ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಿ ಇಲ್ಲ ಅಂದ್ರೆ ನಾನು ಬಾಯಿ ಬಿಡಬೇಕಾಗುತ್ತೆ ; ಸಚಿವ ಸುಧಾಕರ್...

ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಿ ಇಲ್ಲ ಅಂದ್ರೆ ನಾನು ಬಾಯಿ ಬಿಡಬೇಕಾಗುತ್ತೆ ; ಸಚಿವ ಸುಧಾಕರ್ ವಾರ್ನಿಂಗ್

856
0
SHARE

ಚಿಕ್ಕಬಳ್ಳಾಪುರ. ಕಾಂಗ್ರೆಸ್ ನಾಯಕರಿಗೆ ಸಚಿವ ಸುಧಾಕರ್ ವಾರ್ನಿಂಗ್ ಕೊಟ್ಟಿದ್ದಾರೆ.ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಿ ಇಲ್ಲ ಅಂದ್ರೆ ನಾನು ಬಾಯಿ ಬಿಡಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.ಕಾಂಗ್ರೆಸ್ ನವರಿಗೆ ಹಗರಣಗಳು ಮಾಡಿ ಅದೇ ಅಭ್ಯಾಸ ಆಗಿದೆ. ಕಾಮಾಲೆ ರೋಗದವರಿಗೆ ಕಾಣೋದೆಲ್ಲಾ ನೀಲಿ.

ಆ ರೋಗದಿಂದ ಮೊದಲು ಹೊರಗೆ ಬರಲಿ,ಯಾರು ಎಲ್ಲೆಲ್ಲಿಹೋಗಿದ್ರು ಯಾರು ಎಲ್ಲಿ ಲೂಟಿ ಮಾಡಿದ್ರು ಅನ್ನೋದು ನನಗೆ ಗೊತ್ತಿದೆ ಇದನ್ನ ನಾನು ಈಗ ಬಾಯಿಬಿಡಬೇಕಾಗುತ್ತದೆ ಎಂದು ಸಚಿವ ಸುಧಾಕರ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.ಪಿಪಿಇ ಕಿಟ್ ಹಗರಣದ ನಡಿದಿದೆ ಅಂತ ಸಿದ್ದರಾಮಯ್ಯ ಹೇಳಿಕೆ ಸಚಿವ ಸುಧಾಕರ್ ಟಾಂಗ್  ಕೊಟ್ಟಿದ್ದಾರೆ.

ಆರೋಗ್ಯ ಇಲಾಖೆಯವರು ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ.ಡಾ. ಮಂಜುನಾಥ್ ಅವರು ಇದನ್ನು ಶಿಫಾರಸು ಮಾಡಿದ್ದಾರೆ. ಸತ್ಯಾಸತ್ಯತೆ ತಿಳಿದು ಆರೋಪ ಮಾಡಲಿ ಎಂದು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here