ಮೊಬೈಲ್ ಕಳೆದುಕೊಂಡವರಿಗೆ ಪೊಲೀಸ್ರಿಂದ ಸಿಹಿ ಸುದ್ದಿ: ಮೊಬೈಲ್ ಕಳ್ಕೊಂಡ್ರೆ ಇನ್ಮುಂದೆ ಠಾಣೆ ಮೆಟ್ಟಿಲೇರಂಗಿಲ್ಲ

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಮೊಬೈಲ್ ಕಳೆದುಕೊಂಡವರು ಇನ್ಮುಂದೆ ಕೆ ಎಸ್ ಪಿಇ ಲಾಸ್ಟ್ ಆ್ಯಪ್ ನಲ್ಲಿ ದೂರು ಸಲ್ಲಿಸಬಹುದಾಗಿದೆ. ಈ ಸಂಬಂಧ ಡಿಸಿಪಿ ಸಂಜೀವ್ ಪಾಟೀಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಮೊಬೈಲ್ ಕಳೆದುಕೊಂಡವರು ಇನ್ಮುಂದೆ ಠಾಣೆ ಮೆಟ್ಟಿಲೇರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್ ಕಳೆದುಕೊಂಡವರು ಈ ಆ್ಯಪ್ ನಲ್ಲಿ ದೂರು ದಾಖಲಿಸಿದರೆ, ಪೊಲೀಸರು ಫೋನ್ ಪತ್ತೆ ಮಾಡಿದ ನಂತರ ಮೊಬೈಲ್ ಕಳೆದುಕೊಂಡವರಿಗೆ ಫೋನ್ ಮರಳಿ ಸಿಗಲಿದೆ. ದೂರಿನ ಮಾಹಿತಿಯಲ್ಲಿ ಐಎಂಇ ನಂಬರ್ ಆಧರಿಸಿ ಮೊಬೈಲ್ ಮರಳಿಸಲಿದ್ದು, ಇದೇ ರೀತಿ 24 ಮಂದಿಗೆ ಪಶ್ಚಿಮ ವಿಭಾಗದ ಪೊಲೀಸರು ಮರಳಿಸಿದ್ದಾರೆ. ನಗರದ ಬ್ಯಾಡರಹಳ್ಳಿಯ 20, ಕೆಪಿ ಅಗ್ರಹಾರದ 4 ಸೇರಿ ಹಲವರಿಗೆ ಮೊಬೈಲ್ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಂಜೀವ್ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.