ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮೋದಿ ಚರ್ಚೆ; ಕದನ ವಿರಾಮ ಘೋಷಿಸಿದಕ್ಕೆ ಪ್ರಶಂಸೆ

ರಾಷ್ಟ್ರೀಯ

ನವದೆಹಲಿ: ರಷ್ಯಾ ಅಧ್ಯಕ್ಷ ಪುಟಿನ್ ಜತೆ ಪ್ರಧಾನಿ ಮೋದಿ ಚರ್ಚೆ ಮಾಡಿದ್ದಾರೆ. ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ ನರೇಂದ್ರ ಮೋದಿ, ರಷ್ಯಾ, ಉಕ್ರೇನ್​ ಯದ್ಧ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ಸುಮಾರು 50 ನಿಮಿಷಗಳ ಕಾಲ ಮೋದಿ, ಪುಟಿನ್ ಚರ್ಚೆ ಮಾಡಿದ್ದು, ಉಕ್ರೇನ್​, ರಷ್ಯಾ ನಡುವೆ ಮಾತುಕತೆ ಬಗ್ಗೆ ಪುಟಿನ್ ಮಾಹಿತಿ ನೀಡಿದ್ದಾರೆ. ನೇರವಾಗಿ ಉಕ್ರೇನ್​ ಅಧ್ಯಕ್ಷರ ಜತೆ ಚರ್ಚಿಸಲು ರಷ್ಯಾ ಅಧ್ಯಕ್ಷ ಪುಟಿನ್​ಗೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಕದನ ವಿರಾಮ ಘೋಷಿಸಿದ ರಷ್ಯಾ ಕ್ರಮಕ್ಕೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.