ಮಂಗ ಸೇರಿದಂತೆ ವನ್ಯ ಜೀವಿಗಳ ತೊಂದರೆಗೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಲು BBMP ಆದೇಶ

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಗಳು ಮತ್ತು ಇತರೆ ವನ್ಯಜೀವಿಗಳಿಂದ ಆಗುವ ತೊಂದರೆಗಳಿಗೆ ಸಾರ್ವಜನಿಕರು ಟೋಲ್ ಫ್ರೀ ಸಂ. 1533 ದೂರುಗಳನ್ನು ನೀಡುವಂತೆ ಬಿಬಿಎಂಪಿ ತಿಳಿಸಿದೆ. ಈ ಕುರಿತಂತೆ ಆದೇಶ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಕಂಡುಬಂದ ಸಂದರ್ಬದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಪತ್ರದ ಮೂಲಕ, ದೂರವಾಣಿ ಮೂಲಕ ದೂರುಗಳನ್ನು ನೀಡುತ್ತಿರುತ್ತಾರೆ ಎಂದಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಂದ ಆಗಬಹುದಾದ ತೊಂದರೆಗಳನ್ನು ನಿವಾರಣೆ ಮಾಡುವ ಸಂಬಂಧ ಹಾಗೂ ತುರ್ತು ಸಂದರ್ಭ ಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕರುಗಳು ನಮ್ಮ ಬೆಂಗಳೂರು ಮೊಬೈಲ್ ಆಫ್ ಮುಖಾಂತರ ದೂರುಗಳನ್ನು ದಾಖಲಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ರವರು ಕೋರಿದೆ.

Leave a Reply

Your email address will not be published.