monkeypox ಆತಂಕ: ಮಂಕಿಪಾಕ್ಸ್ ತಡೆಗೆ BBMP ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು

ಬೆಂಗಳೂರು: ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಕಂಡು ಬಂದ ಹಿನ್ನೆಲೆ ಮಂಕಿಪಾಕ್ಸ್ ತಡೆಗೆ ಬಿಬಿಎಂಪಿ ಹೊಸ ಮಾರ್ಗ ಸೂಚಿ ಪ್ರಕಟಿಸಿದೆ. ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸುತ್ತೋಲೆ ಕಳಿಸಿದ್ದಾರೆ. ಏರ್ಪೋರ್ಟ್, ರೈಲ್ವೆ ಸ್ಟೇಷನ್, ಬಸ್ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಟೀಮ್ ನೇಮಕ ಮಾಡಲು ಸೂಚಿಸಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಬರುವವರಿಗೆ ಮಂಕಿಪಾಕ್ಸ್ ಲಕ್ಷಣವಿದ್ದರೆ ತಪಾಸಣೆ ಕೈಗೊಳ್ಳಬೇಕು.

ಮಂಕಿಪಾಕ್ಸ್ ಸೋಂಕು ದೃಢಪಟ್ಟರೆ 21 ದಿನಗಳ ಕಾಲ ಐಸೋಲೇಷನ್ ಮಾಡಬೇಕು. ಸಂಪೂರ್ಣ ಗುಣವಾಗುವವರೆಗೆ ತಜ್ಞರ ಮೇಲ್ವಿಚಾರಣೆಯಲ್ಲಿರಬೇಕು. ಯುಪಿಹೆಚ್ಸಿಗಳಲ್ಲಿ ಮಂಕಿಪಾಕ್ಸ್ ಬಗ್ಗೆ ಜನರಿಗೆ ಮಾಹಿತಿ ತಿಳಿಸಬೇಕು. ಮಂಕಿಪಾಕ್ಸ್ ದೃಢವಾಗದಿದ್ದರೂ ವರದಿ ಬರುವವರೆಗೆ ಆರೈಕೆಮಾಡಬೇಕು. ಸೋಂಕು ಹರಡದಂತೆ ತಡೆಯುವ ನಿಯಮದಂತೆ ಆರೈಕೆ ಮಾಡಬೇಕು. ಚರ್ಮ, ಮಕ್ಕಳ ಸ್ಪೆಷಾಲಿಟಿ ಆಸ್ಪತ್ರೆ ಒಪಿಡಿಯಲ್ಲಿ ಹೆಚ್ಚಿನ ನಿಗಾವಹಿಸಿ ವಹಿಸಿ ಎಂದು ಮಂಕಿಪಾಕ್ಸ್ ತಡೆಗೆ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

Leave a Reply

Your email address will not be published.