Monkeypox.. ಕೇರಳದಲ್ಲಿ ಪತ್ತೆಯಾಯ್ತು ಮತ್ತೊಂದು ಮಂಕಿಪಾಕ್ಸ್ ಪ್ರಕರಣ: ಹೆಚ್ಚಾಯ್ತು ಆತಂಕ

ರಾಷ್ಟ್ರೀಯ

ತಿರುವನಂತಪುರಂ: ಜಗತ್ತಿನಾದ್ಯಂತ ಮಂಕಿಪಾಕ್ಸ್​ ಸೋಂಕು ಭಾರೀ ಆತಂಕ ಮೂಡಿಸಿದೆ. ಭಾರತದಲ್ಲೂ ಮಂಕಿಪಾಕ್ಸ್​ ಪ್ರಕರಣಗಳು ಹೆಚ್ಚುತ್ತಲೇ ಇದೆ. ಕೇರಳದಲ್ಲಿ 7 ವರ್ಷದ ಬಾಲಕನಿಗೆ ಮಂಕಿಪಾಕ್ಸ್​ ಸೋಂಕು ಪತ್ತೆಯಾಗಿದೆ. ಆತನನ್ನು ಕೇರಳದ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಾಲಕ ಇಂಗ್ಲೆಂಡ್​​ನಿಂದ ಅಪ್ಪ-ಅಮ್ಮನ ಜೊತೆ ವಾಪಾಸ್ ಬಂದಿದ್ದ.

ಆತನಿಗೆ ಮಂಕಿಪಾಕ್ಸ್​ ಸಾಂಕ್ರಾಮಿಕ ರೋಗದ ಲಕ್ಷಣಗಳಿತ್ತು. ಅವರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಬಾಲಕನನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ 9 ಮಂಕಿಪಾಕ್ಸ್ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದೆ.

Leave a Reply

Your email address will not be published.