Home District ಈ ಗ್ರಾಮಕ್ಕೆ ಬರಬೇಕಾದ್ರೆ ಮಂಗಗಳ ಕಾಟ. ಮನೆಯಲ್ಲಿ ಇರುವ ಆಹಾರವನ್ನು ಬಿಡ್ತಾ ಇಲ್ಲ, ಕಪಿಸೈನ್ಯ ಹಾವಳಿಗೆ...

ಈ ಗ್ರಾಮಕ್ಕೆ ಬರಬೇಕಾದ್ರೆ ಮಂಗಗಳ ಕಾಟ. ಮನೆಯಲ್ಲಿ ಇರುವ ಆಹಾರವನ್ನು ಬಿಡ್ತಾ ಇಲ್ಲ, ಕಪಿಸೈನ್ಯ ಹಾವಳಿಗೆ ಹೈರಾಣಾದ ಗ್ರಾಮಸ್ಥರು

243
0
SHARE

ಆ ಗ್ರಾಮಸ್ಥರಿಗೆ ಮಂಗನ ಹಾವಳಿಯಿಂದ ಸಾಕಾಗಿ ಹೋಗಿದೆ. ಎಲ್ಲಿ ಯಾವಾಗ ತಮ್ಮ‌ ಮೇಲೆ ಎರಗಿ ಬೀಳುತ್ವೋ ಎನ್ನೋ ಭಯದಲ್ಲಿ ಗ್ರಾಮಸ್ಥರಿದ್ದಾರೆ. ಈ ಪರಸ್ಥಿತಿ ಇರೋದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಖಾನಾಪುರ  ಗ್ರಾಮದಲ್ಲಿ. ಶಿರಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಈ ಪುಟ್ಟ ಗ್ರಾಮದ ಜನರು ಮಂಗಗಳ ಹಾವಳಿಯಿಂದ ಹೈರಾಣಾಗಿದ್ದಾರೆ. ಮಂಗಗಳಿಗೆ ಹೆದರಿ ಮನೆಗಳ ಮೇಲ್ಛಾವಣಿಗೆಲ್ಲಾ ಮುಳ್ಳು ಹಾಕಿದ್ದಾರೆ. ಬೇರೆ ಊರಿಂದ ಖಾನಾಪುರ ಗ್ರಾಮಸ್ಥರ ಮನೆಗಳಿಗೆ ಯಾರಾದ್ರೂ ಬಂಧು ಬಳಗ ಬಂದ್ರೆ ಸಾಕು, ಈ ಮಂಗಗಳಿಗೆ ಆಟವಾಗುತ್ತೆ. ಅವರ ಕೈನಲ್ಲಿನ ಚೀಲವನ್ನು ಕಂಡು, ಅವರ ಮೇಲೆ ಅಟ್ಯಾಕ್ ಮಾಡಿ ಚೀಲ ಕಸಿದುಕೊಂಡು ಹೋಗುತ್ವೆ. ಈ ಮಂಗಗಳಿಗೆ ಹೆದರಿ, ಮಕ್ಕಳು, ಮಹಿಳೆಯರು ಮನೆಯ ಬಾಗಿಲು ಹಾಕ್ಕೊಂಡು ಹೊರಬಾರದೆ ದಿನ ಕಳೀತಿದ್ದಾರೆ. ಅಪ್ಪಿ ತಪ್ಪಿ ಮನೆಯ ಬಾಗಿಲೇನಾದ್ರೂ ಓಪನ್ ಆಗಿದ್ರೆ, ಯಾರ ಅಂಜಿಕೆ ಇಲ್ದೆ ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿನ ವಸ್ತುಗಳನ್ನು ತೆಗೆದುಕೊಂಡು ಹೋಗುತ್ವೆ ಈ ವಾನರ ಸೈನ್ಯ. ಹೀಗಾಗಿ ಗ್ರಾಮದ ಮಕ್ಕಳು ಮಹಿಳೆಯರು ಮಂಗಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ.

ಇನ್ನು ಗ್ರಾಮದ ಪರಿಚಯಸ್ಥರ ಮನೆಗೆ ಬರಲೂ ಸಹ ಇತರರಿಗೆ ಅಂಜಿಕೆಯಾಗಿದೆ. ಈ ಕಪಿಸೈನ್ಯ ಊರಿಗೆ ಬರೋ ಅಪರಿಚಿತರ ಕೈಚೀಲವೊಂದನ್ನೇ ಕಸಿದುಕೊಂಡು ಹೋಗಲ್ಲ, ಬದಲಾಗಿ ಅವರ‌ ಮೇಲೆ ಅಟ್ಯಾಕ್ ಸಹ ಮಾಡ್ತಾವಂತೆ. ಹೀಗಾಗಿ ಗ್ರಾಮಕ್ಕೆ ಬರೋರೂ ಸಹ ಮಂಗಗಳಿಗ ಅಂಜಿ ಬರ್ತಿಲ್ಲವಂತೆ. ಇನ್ನು ಈ ಮಂಗಗಳು ತಮ್ಮ‌ ಮನೆ ಮೇಲೆ ಬರಬಾರದೆಂದು ಗ್ರಾಮಸ್ಥರು ಮನೆಗಳ ಮೇಲ್ಛಾವಣಿಗೆ ಮುಳ್ಳನ್ನು ಹಾಕಿದ್ದಾರೆ. ಆದ್ರೂ ಸಹ ಈ ವಾನರ ಸೈನ್ಯ ಅಂಜಿಕೆಯಿಲ್ದೆ ಮನೆಗಳ ಮೇಲೆ‌ ದಾಳಿ ಮಾಡುತ್ತವೆ. ಸುಮಾರು‌ 300 ಕ್ಕೂ ಹೆಚ್ಚು ಮಂಗಗಳು ಈ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಬೇರೂರಿವೆ. ಗ್ರಾಮ ಬಿಟ್ಟು ಬೇರೆಡೆ ಹೋಗ್ತಾಯಿಲ್ಲಾ. ಸಂಜೆಯವರಿಗೂ ಗ್ರಾಮದಲ್ಲಿರೋ ವಾನರ ಸೈನ್ಯ ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿವೆ. ಮನೆ ಮುಂದೆ ಬಟ್ಟೆ ಹಾಕಿದ್ರೂ ಅವುಗಳನ್ನು ಸಹ ಹಾಳು ಮಾಡುತ್ತವೆ. ಹೀಗಾಗಿ ಮಂಗಗಳನ್ನು ಗ್ರಾಮದಿಂದ ಹಿಡಿದುಕೊಂಡು ಹೋಗುವಂತೆ ಮನವಿ ಮಾಡಿದ್ರು ಅರಣ್ಯ ಇಲಾಖೆ ಅಧಿಕಾರಿಗಳು ಕೇರ್ ಮಾಡಿಲ್ಲ ಅಂತ ಗ್ರಾಮಸ್ಥರು ಆರೋಪಿಸ್ತಿದ್ದಾರೆ. ಈ ಕುರಿತು ಪಟ್ಟಣ ಪಂಚಾಯತಿ, ಶಿರಹಟ್ಟಿ ತಹಸೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿಗಳು, ಸೇರಿದಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ್ರು ಪ್ರಯೋಜನವಾಗಿಲ್ಲ ಅಂತಾರೆ ಗ್ರಾಮಸ್ಥರು.

 

ಈಗಲಾದ್ರೂ ಅಧಿಕಾರಿಗಳು ಎಚ್ಚೆತ್ತು ಈ ಮಂಗಗಳ ಹಾವಳಿಯನ್ನು ನಿಯಂತ್ರಣ ಮಾಡಬೇಕು. ಮಂಗಗಳನ್ನು ಹಿಡಿದು ಕಾಡಿಗೆ ಬಿಡಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತೆ ಅಂತ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here