ತಾಯಿಗೆ ನಿಂದನೆ, ತಲೆ ಮೇಲೆ ಕಲ್ಲು ಹಾಕಿ ಕೊಲೆಗೆ ಯತ್ನಿಸಿದ ಗುಂಪು

ಜಿಲ್ಲೆ

ಹುಬ್ಬಳ್ಳಿ; ತನ್ನ ತಾಯಿಯನ್ನ ನಿಂದಿಸಿದ ಕಾರಣಕ್ಕೆ 9 ಜನರು ಓರ್ವ ಯುವಕನ್ನನ್ನ ಕೊಲೆ ಮಾಡಲು ಯತ್ನಿಸಿದ ಘಟನೆ ಉದಯನಗರದ ಕ್ರಾಸ್ ಬಳಿ ನಡೆದಿದೆ.
ಗೋಪನಕೊಪ್ಪದ ಕಡೆ ಓಣಿಯ ಮಲ್ಲಿಕಾರ್ಜುನ ಗುಡಿ ಸಮೀಪ ಎಗ್ ರೈಸ್ ಅಂಗಡಿಯಲ್ಲಿ ರೈಸ್ ತಿನ್ನುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಂಜುನಾಥ ಮಡಿವಾಳಪ್ಪ ಮಡಿವಾಳರ ಎಂಬುವವ ಮಂಕನಗನೌಡ ಪಾಟೀಲ್ ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾನೆ. ಇದು ಮಾತಿಗೆ ಮಾತು ಬೆಳೆದು ಕೊನೆಗೆ ಮಂಕನಗೌಡ ತನ್ನ ತನ್ನ ೯ ಗೆಳಯರೊಂದಿಗೆ ಮಂಜುನಾಥ ಮಡಿವಾಳಪ್ಪನನ್ನ ಅಪಹರಣ ಮಾಡಿಕೊಂಡು ಉದಯ ನಗರ ಕ್ರಾಸ್ ಬಳಿಯ ಖುಲ್ಲಾ ಜಾಗೆಯಲ್ಲಿ ಬಸವರಾಜ ಭಜಂತ್ತಿ, ಕಿರಣ ಮಾನೆ, ಮಾರುತಿ, ಪೂಜಾರಿ, ಪ್ರಭು, ಈರಣ್ಣ ಬಟ್ಟೂರ,ಇನ್ನ ಇಬ್ಬರು ಹೆಸರು ಗೊತ್ತಾಬೇಕಿದ್ದು ಇವರು ಸೇರಿಕೊಂಡು ಕಲ್ಲು ಹಾಗೂ ಬಾಟಲಿಯಿಂದ ಹೊಡೆದು ಕೊಲೆ ಮಾಡಲು ಯತ್ನಿಸಿದ ಘಟನೆ ನಡದಿದೆ. ಆರೋಪಿಗಳು ಪರಾರಿಯಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.