ಆಸ್ತಿಗಾಗಿ ಅತ್ತೆ ಸೊಸೆ ಜಗಳ: ಕೋಪಗೊಂಡ ವೃದ್ಧೆ ಮಾಡಿದ್ದು ಮಾತ್ರ ಭಯಾನಕ ಕೃತ್ಯ

ಅಪರಾಧ ರಾಷ್ಟ್ರೀಯ

ಹೈದರಾಬಾದ್: ಆಸ್ತಿಯಲ್ಲಿ ಸೊಸೆ ಪಾಲು ಕೇಳಿದ ಕಾರಣಕ್ಕೆ ಕೋಪಗೊಂಡ ಅತ್ತೆ ಆಕೆಯ ರುಂಡವನ್ನೇ ಕತ್ತರಿಸಿ ರುಂಡ ಸಮೇತ ಪೊಲೀಸರ ಮುಂದೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ನಡೆದಿದೆ.

ಆಂಧ್ರದ ರಾಯಚೋಟಿ ಪುರಸಭಾ ವ್ಯಾಪ್ತಿಯ ಕೊತ್ತಕೋಟ ರಾಮಪುರಂ ನಿವಾಸಿ ಸುಬ್ಬಮ್ಮ ಎಂಬ ಮಹಿಳೆ ತನ್ನ ಸೊಸೆ ವಸುಂಧರಾಳನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾಳೆ.

ಈ ಮೊದಲು ಕುವೈತ್ ನಲ್ಲಿ ಕೆಲಸ ಮಾಡುತ್ತಿದ್ದ ಸುಬ್ಬಮ್ಮ ಸಾಕಷ್ಟು ಆಸ್ತಿ ಪಾಸ್ತಿ ಸಂಪಾಧಿಸಿದ್ದರು. ಇತ್ತೀಚೆಗೆ ಮಗ ಮೃತಪಟ್ಟಿದ್ದು ಆ ಬಳಿಕ ಸೊಸೆ ಹಾಗೂ ಮೊಮ್ಮಕ್ಕಳ ಜೊತೆ ಸುಬ್ಬಮ್ಮ ವಾಸಿಸುತ್ತಿದರು. ಆದರೆ ಮಗ ಮೃತಪಟ್ಟ ಬಳಿಕ ಸೊಸೆ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದು ಇದೇ ವಿಷಯಕ್ಕೆ ನಿತ್ಯ ಅತ್ತೆ ಸೊಸೆ ಮಧ್ಯೆ ಜಗಳ ನಡೆಯುತ್ತಿತ್ತು.

 

ಅಲ್ಲದೆ ಸೊಸೆ ಆಸ್ತಿ ನೀಡುವಂತೆ ನಿತ್ಯ ಆತ್ತೆಯನ್ನು ಪೀಡಿಸುತ್ತಿದ್ದಳು. ಸೊಸೆ ತನ್ನ ಆಸ್ತಿಯನ್ನು ಬಾಯ್​​ಫ್ರೆಂಡ್​​ಗೆ ಕೊಡಬಹುದು ಎಂಬ ಆತಂಕ ಆಕೆಗಿತ್ತು. ಇದರಿಂದ ಆರೋಪಿ ವೃದ್ಧೆ ತನ್ನ ಮೊಮ್ಮಗಳಿಗೆ ಅನ್ಯಾಯವಾಗಬಹುದೆಂಬ ಭಯದಿಂದ ತನ್ನ ಸೊಸೆ ಹಾಗೂ ಆಕೆಯ ಗೆಳೆಯನನ್ನು ಮನೆಗೆ ಕರೆದು ಇತ್ತೀಚೆಗಷ್ಟೇ ಛೀಮಾರಿ ಹಾಕಿ ಕಳುಹಿಸಿದ್ದಳು. ಇದನ್ನು ಅರಗಿಸಿಕೊಳ್ಳಲಾಗದೆ ಅತ್ತೆ– ಸೊಸೆ ನಡುವೆ ವಾಗ್ವಾದ ನಡೆದಿದೆ. ಅದಾದ ಬಳಿಕ ಆಕೆ ತನ್ನ ಸೊಸೆಯನ್ನು ಕೊಲೆ ಮಾಡಿದ್ದಾಳೆ. ನಂತರ ಆಕೆ ತಾನು ಕತ್ತರಿಸಿದ ಸೊಸೆಯ ತಲೆಯನ್ನು ಹಿಡಿದು ಪೋಲೀಸ್ ಠಾಣೆಗೆ ಬಂದಿದ್ದಾಳೆ.

ತನ್ನ ಸೊಸೆಯಿಂದ ಮೊಮ್ಮಗಳಿಗೆ ಅನ್ಯಾಯವಾಗಬಹುದು ಎಂಬ ಭಯದಿಂದ ಈ ರೀತಿ ಮಾಡಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ತಾನು ಕೊಲೆ ಮಾಡಿದ ನಂತರ ಆಘಾತಗೊಂಡಿದ್ದ ಆ ಮಹಿಳೆ ಈಗಾಗಲೇ ಸತ್ತಿರುವ ತನ್ನ ಸೊಸೆ ಎದ್ದುಬಂದು ತನ್ನನ್ನು ಕೊಲೆ ಮಾಡಬಹುದು ಎಂಬ ಭಯ ಆಕೆಯನ್ನು ಕಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.