
ಗಂಡು ಮಗುವಿನ ತಾಯಿಯಾದ ನಟಿ ಅಮೃತಾ ನಾಯ್ಡು
ಕಿರುತೆರೆ ನಟಿ ಅಮೃತಾ ನಾಯ್ಡು ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿರುವ ದಂಪತಿಗಳು ಗಂಡು ಮಗುವಿನ ಆಗಮನದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಸಾಕಷ್ಟು ಸಿನಿಮಾ, ಕಿರುತೆರೆಯ ಸೀರಿಯಲ್ ಮತ್ತು ಶೋ ಮೂಲಕ ಗುರುತಿಸಿಕೊಂಡಿದ್ದ ಅಮೃತಾ ರೂಪೇಶ್ ಬದುಕಲ್ಲಿ ಇತ್ತೀಚೆಗೆಷ್ಟೇ ಸಾಕಷ್ಟು ಕಷ್ಟದ ದಿನಗಳನ್ನ ಏದುರಿಸಿದ ನಂತರ ಇದೀಗ ಖುಷಿಯಾಗಿದ್ದಾರೆ. ಮುದ್ದು ಮಗಳು ಸಮನ್ವಿ ಸಾವಿನ ನಂತರ ಸಾಕಷ್ಟು ಕುಗ್ಗಿ ಹೋಗಿದ್ದ ಕುಟುಂಬಕ್ಕೆ ಇದೀಗ ಹೊಸ ಚೈತನ್ಯ ಸಿಕ್ಕಿದೆ. ಗಂಡು ಮಗುವಿಗೆ ಆಗಮನ ಅಮೃತ ಬಾಳಲ್ಲಿ ಖುಷಿ ತರಿಸಿದೆ.
ನಟಿ ಅಮೃತಾ ರೂಪೇಶ್ (ಜುಲೈ.2)ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿನ ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಮಗುವಿನ ಆಗಮನದ ಖುಷಿಯ ವಿಚಾರವನ್ನು ಅಮೃತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಶುಭಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.