ಶೋಕಿಗಾಗಿ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳರ ಬಂಧನ..!

ಅಪರಾಧ ಜಿಲ್ಲೆ

ಚಿಕ್ಕಬಳ್ಳಾಪುರ :ಮನೆ ಮುಂದೆ ಕಚೇರಿಗಳ ಮುಂದೆ ನಿಲ್ಲಿಸುತ್ತಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಗಳನ್ನು ಕ್ಷಣಾರ್ಧದಲ್ಲೆ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನ ಹೆಡೆಮುರಿಕಟ್ಟುವಲ್ಲಿ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .. ರಾಯಲ್ ಎನ್‌ಫೀಲ್ಡ್ ಬೈಕ್ ಹಳೆಯದಾದರೂ, ಹೊಸದಾದರೂ ಬೆಲೆ ಕಡಿಮೆಯಾಗಲ್ಲ. ಸದ್ಯ ಹೆಚ್ಚಿನ ಜನರು ರಾಯಲ್ ಎನ್‌ಫೀಲ್ಡ್ ಬೈಕ್ ಮೊರೆ ಹೋಗುತ್ತಿದ್ದಾರೆ.

ಇದನ್ನೇ ಬಂಡವಾಳ ಮಾಡಿಕೊಂಡಿರುವ ಖತರ್ನಾಕ್ ಕಳ್ಳರು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಕನ್ನ ಹಾಕುತ್ತಿದ್ದರು.. ಬೈಕ್ ಕಳ್ಳರ ಉಪಟಳದಿಂದ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತಲೆನೋವಾಗಿತ್ತು. ಕಾರ್ಯಾಚರಣೆಗಿಳಿದ  ಬಾಗೇಪಲ್ಲಿ ಪೊಲೀಸರು  ಅಂತರರಾಜ್ಯ ಕುಖ್ಯಾತ  ಕಳ್ಳರಾದ ಆಂಧ್ರಪ್ರದೇಶದ ಪೋದ್ದುಟುರ್  ಮೂಲದ  ಸತೀಶ್ ಯಾದವ್ ಹಾಗೂ  ಪವನ್ ರನ್ನು ಬಾಗೇಪಲ್ಲಿ ಟೋಲ್ ಫ್ಲಾಜಾದ ಬಳಿ ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 35 ಲಕ್ಷ ರುಪಾಯಿ ಮೌಲ್ಯ 12 ರಾಯಲ್ ಎನ್ ಫೀಲ್ಡ್ , 2 ಕೆಟಿಎಮ್, 1ಡಿಯೋ, 2 ಎನ್ ಎಸ್ ಪಾಲ್ಸರ್ ,

ದಿಯೋ ಎನ್ಸ್ 1 ಬೈಕ್ ಗಳನ್ನು ವಶಕ್ಕೆ ಪಡೆದಿದ್ದು. ಜೊತೆಗೆ ಕಳ್ಳತನ ಮಾಡಿದ್ದ  ಹಲವು ಬೈಕ್‌ಗಳನ್ನು ಕದ್ದು ಮಾರಾಟ ಮಾಡಿದ್ದು.  ಅಂತರಾಜ್ಯ ಕಳ್ಳ ಸತೀಶ್ ಹಾಗೂ ಪವನ್ ಬೆಂಗಳೂರು . ಚಿಕ್ಕಬಳ್ಳಾಪುರ ಜಿಲ್ಲೆ. ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ಬೈಕ್ ಗಳನ್ನು ಕದ್ದಿರುವುದಾಗಿ ವಿಚಾರದಲ್ಲಿ ಬಾಯಿಬಿಟ್ಟಿದ್ದಾರೆ.. ಬಂಧಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂದಕ್ಕೆ ಒಪ್ಪಿಸಿದ್ದು. ಸಧ್ಯ ಖತರ್ನಾಕ್ ಕಳ್ಳರು ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ ಮುದ್ದೆಮುರಿಯುತ್ತಿದ್ದಾರೆ.

Leave a Reply

Your email address will not be published.