ಸಿನಿಮೀಯ ಶೈಲಿಯಲ್ಲಿ ಪೊಲೀಸ್ರ ರಿಯಲ್ ಚೇಸಿಂಗ್: ಫೈರಿಂಗ್ ಮಾಡಿದ್ದ ಆಸಾಮಿಗಳ ಕಾರನ್ನೇ ಗುದ್ದಿ ಹೊಲದಲ್ಲಿ ಅಟ್ಟಾಡಿಸಿ ಹಿಡಿದ ಖಾಕಿ

ಬೆಂಗಳೂರು

ಇದು ಸಿನಿಮಾದ ಕಥೆಯನ್ನೇ ಮೀರಿಸೋ  ಪೊಲೀಸ್ರು ರಾಬರ್ಸ್ ನ್ನ ಬೆನ್ನಟ್ಟಿ ಹಿಡಿದ ಕಥೆ. ಸ್ವಲ್ಪ ಯಾಮಾರಿದ್ರೂ ಪೊಲೀಸ್ರಿಗೆ ಪ್ರಾಣಕ್ಕೆ ಕುತ್ತು ತರ್ತಿದ್ದ ಘಟನೆ. ಆದ್ರೆ ಪ್ರಾಣದ ಹಂಗು ತೊರೆದು ತಮ್ಮ ಮೇಲೆಯೇ ಫೈರಿಂಗ್ ಮಾಡಿದ್ದ ಖದೀಮರನ್ನೇ ಪೊಲೀಸ್ರು ಹೊರ ರಾಜ್ಯದಲ್ಲಿ ಹಿಡಿದಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..ಈ ದೃಶ್ಯವನ್ನೊಮ್ಮೆ ನೋಡಿ…ಎಂಥವ್ರ ಮೈ ಕೂಡಾ ಜುಂ ಅನ್ನುತ್ತೆ…ಮುಂದೆ ಹೋಗ್ತಿರೋ ಕಾರನ್ನ ಚೇಸಿಂಗ್ ಮಾಡಲಾಗ್ತಿದೆ…ಈ ನಡುವೆ ಊರೋರ ನಡುವೆ ಕೈಗೆ ಕೋಳ ತೊಡಿಸಿದ ವ್ಯಕ್ತಿಗಳ ಮುಂದೆ ಚಿನ್ನಾಭರಣವನ್ನ ಗುಡ್ಡೆ ಹಾಕಲಾಗಿದೆ..

ಒಂದ್ಕಡೆ ಕಾರು ಡಿಕ್ಕಿ ಹೊಡೆದಿದ್ರೆ,ನಾಲ್ವರನ್ನ ಹಿಡಿದು ಪೊಲೀಸ್ರು ಕರೆತರ್ತಿದ್ದಾರೆ…ಅಷ್ಟಕ್ಕೂ ಈ ದೃಶ್ಯಾವಳಿ ಕಂಡುಬಂದಿದ್ದು ರಾಜಸ್ಥಾನದ ಹಳ್ಳಿಯೊಂದರಲ್ಲಿ…ಇದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ರು ಜ್ಯುವೆಲ್ಲರಿ ರಾಬರಿ ಮಾಡಿದ್ದ ಕಳ್ಳರನ್ನ ಹಿಡಿದ ಪರಿ. ಹೌದು,ಇದೇ ತಿಂಗಳ ನಾಲ್ಕನೇ ತಾರೀಖು ಎಲೆಕ್ಟ್ರಾನಿಕ್ ಸಿಟಿಯ ಮೈಲಸಂಧ್ರದಲ್ಲಿ ಸೋಮವಾರ ಬೆಳಗ್ಗೆ 4. ರಂದು ಬೆಳಗ್ಗೆ 7.30 ಕ್ಕೆ ಗ್ರಾಹಕರ ಸೋಗಿನಲ್ಲಿ ಜ್ಯವೆಲ್ಲರಿ ಮಳಿಗೆಗೆ ನುಗ್ಗಿ ರಾಬರಿ ಮಾಡಲಾಗಿತ್ತು..ನೌಕರ ಧರ್ಮಸೇನಾ ಎಂಬುವನನ್ನ ಕಟ್ಟಿಹಾಕಿ ಪಿಸ್ತೂಲು ತೋರಿಸಿ ನಾಲ್ವರು ದುಷ್ಜರ್ಮಿಗಳು 1.58 ಕೋಟಿ  ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ರು..3.5. ಕೆಜಿ ಚಿನ್ನಾಭರಣ ಮತ್ತು ೩೦ ಕೆಜಿ ಬೆಳ್ಳಿಯನ್ನ ಕದ್ದೊಯ್ದಿದ್ರು.

Leave a Reply

Your email address will not be published.