ಬಹು ನಿರೀಕ್ಷಿತ ಮಿಸೆಸ್ ಇಂಡಿಯಾ ಕರ್ನಾಟಕದ 2021ರ ಆಡಿಷನ್ ಬಹು ಅದ್ಧೂರಿಯಿಂದ ನಗರದ ಹೋಟೆಲ್ ಟುಲಿಪ್ ಇನ್ ನಲ್ಲಿ ಆರಂಭವಾಯಿತು. ರಾಜ್ಯದ ನಾನಾಭಾಗಗಳಿಂದ ಆಗಮಿಸಿದ ನೂರಾರು ಸಂಖ್ಯೆಯ ಮಹಿಳೆಯರು ತಮ್ಮ ಪ್ರತಿಭೆ, ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನ ಪ್ರದರ್ಶಿಸಲು ಈ ಸ್ಪರ್ಧೆಯನ್ನ ವೇದಿಕೆಯಾಗಿಸಿಕೊಂಡರು. ಆಗಮಿಸಿದ್ದ ಸ್ಪರ್ಧಿಗಳನ್ನ ಆತ್ಮೀಯವಾಗಿ ಆಹ್ವಾನಿಸಿಕೊಂಡು ಆಯೋಜಕರು ಸ್ಫರ್ದೆಯ ಕುರಿತು ಸಂಪೂರ್ಣ ನಿಯಾಮವಳಿಗಳನ್ನ ತಿಳಿಸಿಕೊಟ್ಟರು.
ಆಡಿಷನ್ ಗಳು ಆರಂಭವಾಗುತ್ತಿದ್ದಂತೆ ಭಾಗವಹಿಸಿದ್ದ ಸ್ಪರ್ಧಿಗಳಿಗೆ ಕ್ಯಾಟ್ ವಾಕ್ ಮಾಡಲು ತಿಳಿಸಲಾಯಿತು. ನಂತರದಲ್ಲಿ ಅವರ ಕಿರುಪರಿಚಯದೊಂದಿಗೆ ತೀರ್ಪುಗಾರರ ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರ ನೀಡಿದರು. ವಿವಿಧ ವಯೋಮಾನದ 22-39, 40-60 ಮತ್ತು 61 ನಂತರದ ಮಹಿಳೆಯರು ಭಾಗವಹಿಸಿದ್ದರು. ಕೆಲ ಸ್ಪರ್ಧಿಗಳು ಪದವಿ ಪೂರ್ಣಗೊಳಿಸಿ ವೃತ್ತಿಯಲ್ಲಿರುವವರಾದರೆ, ಇನ್ನೂ ಕೆಲವರು ಗೃಹಿಣಿಯರಾಗಿದ್ದರು. ಆಡಿಷನ್ ವೇಳೆ ಎಲ್ಲಾ ನೋಂದಾಯಿತ ಸ್ಪರ್ಧಿಗಳಿಗೆ ಲಿವ್ ಗ್ಲಾಮ್ ಕ್ಲಿನಿಕ್ಸ್ ನವರು ಸೌಂದರ್ಯ ಸಂರಕ್ಷಣೆ ಮತ್ತು ವರ್ಧನೆ ಕುರಿತಂತೆ ಉಚಿತವಾಗಿ ಸಲಹೆ ಹಾಗೂ ಸೂಚನೆಗಳನ್ನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕಿ ಮತ್ತು ಆಯೋಜಕಿ ಪ್ರತಿಭಾ ಸಂಶಿಮಠ,”ಮಿಸೆಸ್ ಇಂಡಿಯಾ ಕರ್ನಾಟಕ ಒಂದು ವಿಶಿಷ್ಟ ಸ್ಫರ್ದೆಯಾಗಿದ್ದು, ಸೌಂದರ್ಯದ ಜೊತೆಗೆ ಹಲವು ವೈವಿಧ್ಯತೆಗಳಿಗೂ ಅವಕಾಶ ನೀಡುತ್ತದೆ. ಆಕೆಯ ನಿಲುವು, ಬಣ್ಣ, ವಯಸ್ಸು ಏನೇ ಆಗಿದ್ದರೂ ಪ್ರತಿ ಮಹಿಳೆಯೂ ಸುಂದರವಾಗಿರುತ್ತಾಳೆ. ನಮ್ಮ ಉದ್ದೇಶವೇ ಕರ್ನಾಟಕದ ಪ್ರತಿಭಾನ್ವಿತ ಮತ್ತು ಸುಂದರ ಮಹಿಳೆಯನ್ನ ಪರಿಚಯಿಸುವುದಾಗಿದೆ. ವಿವಿಧ ಹಿನ್ನೆಲೆಯುಳ್ಳ ಮಹಿಳೆಯನ್ನ ಮುನ್ನೆಎಗೆ ತರುವ ಸದುದ್ದೇಶವೇ ಈ ಸ್ಫರ್ಧೆಯ ಆಶಯ,”ಎಂದರು. ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ಥೈರ್ಯ ತುಂಬುವ ಮೂಲಕ ಅವರು ಎಲ್ಲಾ ಸವಾಲುಗಳನ್ನ ಎದುರಿಸಿ ಜೀವನದಲ್ಲಿ ಬದಲಾವಣೆ ತಂದುಕೊಳ್ಳುವ ನಿಟ್ಟಿನಲ್ಲಿ ಬೇಕಾದ ಕೌಶಲ್ಯಗಳನ್ನ ಕಲಿಸಿ ಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಆಯೋಜಕರು ಕಾರ್ಯನಿರ್ವಹಿಸಿದರು.
ಮಿಸೆಸ್ ಇಂಡಿಯಾ ಕರ್ನಾಟಕ; ಮಿಸೆಸ್ ಇಂಡಿಯಾ ಕರ್ನಾಟಕವು ರಾಜ್ಯದ ವಿವಾಹಿತ ಮಹಿಳೆಯರಿಗೆಂದೆ ರೂಪಿಸಲಾದ ವೇದಿಕೆಯಾಗಿದ್ದು, ಈ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿದೆ. ಈ ಸ್ಪರ್ಧೆಯು ಕೇವಲ ಮಾಡೆಲ್ಗಳನ್ನ ರೂಪಿಸುವುದಿಲ್ಲ, ಸಮಾಜಕ್ಕೆ ಪ್ರೇರಣೆ ನೀಡುವ ಮಾದರಿ ವ್ಯಕ್ತಿಗಳನ್ನ ರೂಪಿಸಲು ಶ್ರಮಿಸುತ್ತದೆ. ಈ ಸ್ಪರ್ಧೆಯ ಫೈನಲ್ ನಗರದ ಸ್ಟಾರ್ ಹೋಟೆಲ್ ನಲ್ಲಿ ನಡೆಸಲಾಗುತ್ತದೆ. ಇಲ್ಲಿ ವಿಜೇತರಾಗಿ ಆಯ್ಕೆಯಾದವರು ಮಿಸೆಸ್ ಇಂಡಿಯಾ ಆ ನಂತರದಲ್ಲಿ ಮಿಸೆಸ್ ಏಶಿಯಾ, ಮಿಸೆಸ್ ವಲ್ರ್ಡ್ ಹಾಗೂ ಮಿಸೆಸ್ ಪ್ಲಾನೆಟ್ ನಲ್ಲಿ ಭಾಗವಹಿಸಲಿದ್ದಾರೆ.