ಕೊಲೆ ಮಾಡಿ ಮೃತದೇಹವನ್ನು ಚರಂಡಿ ಬಿಸಾಡಿದ್ದ ಆರೋಪಿಗಳ ಬಂಧನ..!

ಬೆಂಗಳೂರು

ಬೆಂಗಳೂರು: ಪತಿ ಜೊತೆ ಸೇರಿ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಂದಿದ್ದ ಮಹಿಳೆ ಮತ್ತು ಮೃತ ವ್ಯಕ್ತಿಯ ಹೆಂಡತಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ವಿಶಾಲ್ ಪ್ರಜಾಪತಿ, ಆತನ ಪತ್ನಿ ರೂಬಿ ಪ್ರಜಾಪತಿ ಮತ್ತು ಕೊಲೆಯಾದ ಬಿಹಾರ ಮೂಲದ ಓಂನಾಥ್‌ಸಿಂಗ್ ಪತ್ನಿ ಗುಂಜಾದೇವಿ ಬಂಧಿತರು.

ಆರೋಪಿಗಳು ಜುಲೈ 4ರಂದು ರಾತ್ರಿ ಓಂನಾಥ್ ಸಿಂಗ್ ಎಂಬಾತನನ್ನು ಚಿತ್ರಹಿಂಸೆ ನೀಡಿ ಕೊಲೆಗೈದು, ಮೃತದೇಹವನ್ನು ಮೂಟ್ಟೆ ಕಟ್ಟಿ ಬೆಳತೂರು-ಕೊಡಿಗೇಹಳ್ಳಿ ಮುಖ್ಯ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ಚರಂಡಿಯಲ್ಲಿ ಬಿಸಾಡಿದ್ದರು ಎಸ್ಕೇಪ್ ಆಗಿದ್ದರು.

ತನಿಖೆ ವೇಳೆ ಮೃತ ವ್ಯಕ್ತಿಯ ಹೆಸರು ಓಂನಾಥ್ ಸಿಂಗ್ ಎಂದು ತಿಳಿದು ಬಂದಿದೆ. ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕಾಡುಗುಡಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡ ರಚಿಸಿ ಮಂಗಳೂರಿನಲ್ಲಿ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆ ತರುವಲ್ಲಿ ಯಶ್ವಸಿಯಾಗಿದ್ದಾರೆ. ಮೃತ ವ್ಯಕ್ತಿ ಆರೋಪಿ ರುಬಿ ಪ್ರಜಾಪತಿಯೊಂದಿಗೆ ಅನೈತಿಕ ಸಂಬಂಧ ಹಾಗೂ ಹಣಕಾಸಿನ ವಿಚಾರವಾಗಿ ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.