ವರದಿ: ಸುರೇಶ್ ಗುಡಿಬಂಡೆ
ಚಿಕ್ಕಬಳ್ಳಾಪುರ: ಹುಟ್ಟುತ್ತಾ ಹುಟ್ಟುತ್ತಾ ಅಣ್ಣ- ತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಅನ್ನೊ ಹಾಗೆ, ಇರೊ ಮನೆಯ ಬಾಡಿಗೆ ವಸೂಲಿ ಮಾಡೊ ವಿಚಾರದಲ್ಲಿ ಅಣ್ಣ ತಮ್ಮಂದಿರ ಮದ್ಯೆ ಉಂಟಾದ ಜಗಳ, ತಗಾದೆ, ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು, ತಂದೆ ಮಗನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೋಡಿ!!
ಮನೆ ಬಾಡಿಗೆ ಹಣದ ವಿಚಾರದಲ್ಲಿ ಅಣ್ಣ ತಮ್ಮಂದಿರು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದು…ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ
ನಡೆದಿದೆ. ಶ್ರೀರಾಮ ನಗರದಲ್ಲಿ ತಡರಾತ್ರಿ ಘಟನೆ ನಡೆದಿದ್ದು…೪೫ ವರ್ಷದ ಅಂಜಿನಪ್ಪ ಹಾಗೂ ಈತನ 18ವರ್ಷದ ಮಗ ವಿಷ್ಣು ಸಾವನ್ನಪ್ಪಿದ್ದಾನೆ. ಸೀನಪ್ಪ ಹಾಗೂ ಸರೋಜಮ್ಮ ಎಂಬುವವರಿಗೆ ಅಶ್ವತ್ಥನಾರಾಯಯಣ ಎಂಬ ಹಿರಿ ಮಗ ಹಾಗೂ ಅಂಜಿನಪ್ಪ ಎಂಬ ಕಿರಿ ಮಗ ಆಂಜಿನಪ್ಪ ಇದ್ದಾರೆ.
ಅಶ್ವತ್ಥನಾರಾಯಣ ಶ್ರೀರಾಮನಗರದಲ್ಲಿ ವಾಸವಾಗಿದ್ರೆ ತಮ್ಮ ಅಂಜಿನಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದ. ಇತ್ತ ಇವರ ತಂದೆ ತಾಯಿ ಚಿಂತಾಮಣಿ ನಗರದಲ್ಲೇ ವಾಸವಾಗಿದ್ರು. ತಂದೆ ಸೀನಪ್ಪ ಸಂಪಾದನೆ ಮಾಡಿ ಕಟ್ಟಿಸಿದ್ದ ಬಾಡಿಗೆ ಮನೆಗಳಿಂದ ಬರುತ್ತಿದ್ದ ಹಣವನ್ನ ಅಶ್ವತ್ಥನಾರಾಯಣ ಮಾತ್ರ ಪಡೆದುಕೊಳ್ಳುತ್ತಿದ್ದನಂತೆ. ಬಾಡಿಗೆ ಹಣ ಪಡೆಯುತ್ತಿದ್ದ ಅಶ್ವತ್ಥನಾರಾಯಣ ತಂದೆ ತಾಯಿಯನ್ನ ಸಹ ಚೆನ್ನಾಗಿ ನೋಡಿ ಕೊಳ್ಳುತ್ತಿರಲಿಲ್ಲವಂತೆ. ಇದೆ ವಿಚಾರವಾಗಿ ನಿನ್ನೆ ಮಾತಿಗೆ ಮಾತು ಬೆಳೆದು ಇಬ್ಬರ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ.
ಇನ್ನು ಚಿಂತಾಮಣಿ ನಗರ ಠಾಣೆ ಪೊಲೀಸರು, ಎರಡು ಕಡೆಯಿಂದ ದೂರು ಪಡೆದು ಪ್ರತ್ಯೇಕವಾಗಿ ಎರಡು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.