Home Latest ಆತನ ದೇಹಕ್ಕೆ ಆಗಿದ್ದ ಗಾಯವೇ ಆತನನ್ನು ಪ್ರಪಂಚದ ಶ್ರೇಷ್ಠ ಬೌಲರ್ ನ್ನಾಗಿ ರೂಪಿಸಿತ್ತು.. ಯಾರೀತ .?

ಆತನ ದೇಹಕ್ಕೆ ಆಗಿದ್ದ ಗಾಯವೇ ಆತನನ್ನು ಪ್ರಪಂಚದ ಶ್ರೇಷ್ಠ ಬೌಲರ್ ನ್ನಾಗಿ ರೂಪಿಸಿತ್ತು.. ಯಾರೀತ .?

295
0
SHARE

ಯುವಿಷ್ಕಾ ರವಿಕುಮಾರ್

ನೋ… ನೋ…. ನೋ… ನೋ.. ನೋ ಬಾಲ್ ….!!!!

ಸತತ ಏಳು ಬಾರಿ ನೋಬಾಲ್ ತೀರ್ಪು ನೀಡಿದಾಗ ಆತ ಕುಸಿದು ಬಿದ್ದ ಪ್ರಪಂಚದ ಕ್ರಿಕೆಟ್ ಇತಿಹಾಸದಲ್ಲಿ ಏಳು ಬಾರಿ ನೋ ಬಾಲ್ ಘೋಷಿಸಿದೊಡನೆ ಆತ ಕ್ರಿಕೆಟ್ ಇತಿಹಾಸದ ವಿವಾದಿತ ಬೌಲರ್ ಆಗಿ (  ಕು )ಪ್ರಸಿದ್ಧಿ ಪಡೆದ . ಎಂತಹ ವಿಪರ್ಯಾಸ!  ಶ್ರೀಲಂಕಾದ ಅತ್ಯದ್ಭುತ ಬೌಲರ್ ಒಬ್ಬ ಆಸ್ಟ್ರೇಲಿಯಾ ನೆಲದಲ್ಲಿ ಅಂಪೈರ್ ನೀಡಿದ ಸತತ ಏಳು ನೋ ಬಾಲ್ಗೆ  ಕ್ಷಣ ಮಾತ್ರದಲ್ಲಿ  ವಿಶ್ವದ ವಿವಾದಿತ ಬೌಲರ್ ಆಗಿ  ರೂಪಾಂತರಗೊಂಡ . ಅಂದಹಾಗೆ ಆತನ ಹೆಸರು ಮುತ್ತಯ್ಯ ಮುರುಳಿಧರ್ .

ಶ್ರೀಲಂಕಾ ಕಂಡ ಅತ್ಯದ್ಭುತ ಆಫ್ ಸ್ಪಿನ್ನರ್ . ವಿಶ್ವದ ಕೆಲವೇ ಕೆಲವು ಆಪ್ ಸ್ಪಿನ್ನರ್ ಗಳಲ್ಲಿ ಮುತ್ತಯ್ಯ ಮುರಳಿಧರನ್ ಹೆಸರು ಅಗ್ರ ಶ್ರೇಯಾಂಕ . 1995-96 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ  “ಥ್ರೋ”  ಆಪಾದನೆಗೆ ಳಗಾಗಿ ತನ್ನ ಕ್ರಿಕೆಟ್ ಜೀವನದ ಪತನದ ಹಾದಿಯಲ್ಲಿದ್ದಾಗ ತಂಡದ ಸದಸ್ಯರ ಒಕ್ಕೊರಲ ಬೆಂಬಲ ಹಾಗೂ ವಿಶ್ವ ಕ್ರಿಕೆಟ್ ಪಂಡಿತರ ಸಾರಾ ಸಾಟು ಬೆಂಬಲದಿಂದಾಗಿ ಮರಳಿ ಕ್ರಿಕೆಟ್  ಜೀವನಕ್ಕೆ ಬಂದ ಛಲಗಾರ .

ಶ್ರೀಲಂಕಾ ತಂಡದ ಏಕೈಕ ತಮಿಳು ಆಟಗಾರ. ಶ್ರೀಲಂಕಾದಲ್ಲಿ ತಮಿಳಿಗರು ಹಾಗೂ ಸಿಂಹಳಿಯರ ನಡುವೆ ಘರ್ಷಣೆ ಮೇಲಂತೆ ಯಲ್ಲಿದ್ದಾಗ ತಮಿಳರ ಪ್ರತಿನಿಧಿಯಾಗಿ ಶ್ರೀಲಂಕಾವನ್ನು ಪ್ರತಿನಿಧಿಸಿ ದೇಶಕ್ಕೆ ದೊಡ್ಡ ಹೆಸರು ತಂದುಕೊಟ್ಟ ಶ್ರೇಷ್ಠ ಆಟಗಾರ .

ಮುರುಳಿಯ ಕ್ರಿಕೆಟ್ ಜೀವನದ “ಸಾಹಸ ಗಾಥೆ” ಹೇಳಲು ಆರಂಭಿಸಿದರೆ ಅದೊಂದು ದೊಡ್ಡ ಇತಿಹಾಸ . ಏಪ್ರಿಲ್ 17.1972 ಶ್ರೀಲಂಕಾದ ಕ್ಯಾಂಡಿಯಲ್ಲಿ ಜನಿಸಿದ ಮುತ್ತಯ್ಯ ಮುರಳಿಧರನ್ . ಶ್ರೀಲಂಕಾದಲ್ಲಿ ತಮಿಳು ಹಾಗೂ ಸಿಂಹಳೀಯರ ನಡುವೆ ಕಂದಕ ನಿರ್ಮಾಣವಾಗಿದ್ದು ಇತಿಹಾಸ . ಬಡ ತಮಿಳು ಕುಟುಂಬದಲ್ಲಿ ಜನಿಸಿದ್ದ ಈತನಿಗೆ ಶ್ರೀಲಂಕಾದಲ್ಲಿನ ಜನಾಂಗ ಘರ್ಷಣೆಯ ಭೀತಿಯಿಂದ ಹೆಚ್ಚಿನ ಬೆಳವಣಿಗೆಗೆ ಆಸ್ಪದವಿರಲಿಲ್ಲ . ಶಾಲಾ ದಿನಗಳಲ್ಲೇ ವೆಂಡರ್ಸ್, ಅರ್ಜುನ್ ರಣತುಂಗ, ಡಯಾಸ್  ,ರ ಕ್ರಿಕೆಟ್ ಕೌಶಲ್ಯದಿಂದ ಆಕರ್ಷಿಸಲ್ಪಟ್ಟು ಕ್ರಿಕೆಟ್ ನತ್ತ  ಮುತ್ತಯ್ಯ ಮರಳಿಧರ್ ಆಸಕ್ತರಾದರು

 ಆರಂಭದಲ್ಲಿ ಬ್ಯಾಟ್ ಮನ್ ಆಗುವ ಕನಸು ಹೊತ್ತಿದ್ದ ಮುರಳಿಗೆ ಅದು ಒಲಿದಿದ್ದ ಬೌಲಿಂಗ್ ಕಡೆ ಗಮನ ಹರಿಸಿದ. ಸಹಜವಾಗಿ ಸ್ಪಿನ್ನರ್ ಗಳಿಂದ ತುಂಬಿರುವ ನಮ್ಮಲ್ಲಿ ಕ್ರಿಕೆಟ್ಟನ್ನು ಕೂಡ ಸ್ಪಿನ್ ಬೌಲಿಂಗ್ ಮಾಡುವಂತೆ ಪ್ರೇರೇಪಿಸಿತು . 1990 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟ ಮುತ್ತಯ್ಯ ಮುರಳಿಧರನ್ ಆರಂಭ ಕೂಡ ಅಷ್ಟೇನೂ ಚೆನ್ನಾಗಿ ಇರಲಿಲ್ಲ ಆತ ತಂಡದ ಕಾಯಂ ಸದಸ್ಯನ ಆಗಬೇಕಾದರೆ ಹಲವು ಶ್ರೀಲಂಕಾದ ಹಿರಿಯ ಆಟಗಾರರೊಂದಿಗೆ ಕಠಿಣ ಸ್ಪರ್ಧೆಯನ್ನೇ ಎದುರಿಸಬೇಕಾಯಿತು .ಮೊದಲೇ ಮಿಲನದ ಮುತ್ತಯ್ಯ ಮುರಳೀದರನ್ ಗೆ ಮೊದಲ ಬಾರಿ ತಂಡಕ್ಕೆ ಆಯ್ಕೆಯಾದಾಗ ಹಲವು ಜೀವ ಬೇದರಿಕೆ ಪತ್ರಗಳು ಹಾಗೂ ಫೋನ್ ಕರೆಗಳು ಬರಲಾರಂಭಿಸಿದ್ದವು ಈ ಕ್ಷುಲ್ಲಕ ಕಾರಣದಿಂದಾಗಿ ಆತ ದೇಶ ಬಿಡುವ ತಯಾರಿಯಲ್ಲಿದ್ದಾಗ ಆಗ ತಂಡದ ನಾಯಕತ್ವ ನೀಡುತ್ತಿದ್ದ “ಅರ್ಜುನ್ ರಣತುಂಗ” ಭರವಸೆ ಮತ್ತು ಆತ್ಮವಿಶ್ವಾಸವನ್ನು ತುಂಬಿ ಶ್ರೀಲಂಕಾ ತಂಡದಲ್ಲಿ ಆಡುವಂತೆ ಮಾಡಿದರು .

ಮುತ್ತಯ್ಯ ಮುರಳಿ ತಮ್ಮ ಟೆಸ್ಟ್ ಜೀವನದ ಮೊದಲ ಹತ್ತು ಟೆಸ್ಟ್ ಗಳನ್ನು ಸ್ವದೇಶದಲ್ಲೇ ಆಡಿ ಭರವಸೆಯನ್ನು ಮೂಡಿಸಿದರು ಪ್ರಥಮ ವಿದೇಶಿ ಸರಣಿ ಅವರಿಗೆ ಬಂದಿದ್ದು ಭಾರತದ ವಿರುದ್ಧ ಅಲ್ಲಿ ಕೂಡ ಭಾರತದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು .1995ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ವಿದೇಶಿ ಸರಣಿ ಗೆಲುವಿನಲ್ಲೂ ಕೂಡ ಮುತ್ತಯ್ಯ ಮುರಳೀದರನ್ ಪಾತ್ರ ದೊಡ್ಡದಿತ್ತು. 1995-96ರಲ್ಲಿ  ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ಪಾಕ್ ನೆಲದಲ್ಲೇ  ತಂಡವನ್ನು ಸದೆಬಡಿಯುವಲ್ಲಿ ಮುತ್ತಯ್ಯ ಮುರಳಿ ಯಶಸ್ವಿ ಬೌಲಿಂಗ್ ಸಹಕರಿಸುತ್ತದೆ.ಇಂತಹ ಆತ್ಮವಿಶ್ವಾಸದಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ಕೊಟ್ಟ ಶ್ರೀಲಂಕಾಕ್ಕೆ ದೊಡ್ಡ ಆಘಾತವೇ ಮುತ್ತಯ್ಯ ಮುರಳಿಧರನ್ ರೂಪದಲ್ಲಿ ಬಂದು ಒದಗಿತು .

ಅಬ್ಬಾ ,,,’!! ಅದೆಂಥ ,,,,”! ಆಘಾತ….! “ವಜ್ರಾಘಾತ” ನೆನೆಸಿಕೊಳ್ಳಲು ಕಲ್ಪನೆಯಲ್ಲೂ ಆಗದಂಥ ಆಘಾತ .ಅತಿ ಆತ್ಮವಿಶ್ವಾಸ ದಿಂದ  ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಮುತ್ತಯ್ಯ ಮುರಳೀಧರನ್ಗೆ ವಿಧಿಯಾಟ ಕಾಡಲಾರಂಭಿಸಿತು. ಅಂಪೈರ್         ” ಡೆರಿಲ್ ಹೇರ್ ” ಮುತ್ತಯ್ಯ ಮುರಳೀದರನ್ ಕ್ರಿಕೆಟ್ ಜೀವನದ ಮುಳುಗುವ  ತೀರ್ಪನ್ನು ನೀಡಿದರು .ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮುತ್ತಯ್ಯ ಮುರಳೀದರನ್ ಬೌಲಿಂಗ್ ಆಕ್ಷನ್ ಸರಿಯಿಲ್ಲ, ಹಾಗೂ ಚೆಂಡನ್ನು  ಥ್ರೋ ,ಮಾಡುತ್ತಾನೆ ಎಂದು ಆತ ಏಳು ಬಾರಿ ” ನೋಬಾಲ್” ತೀರ್ಪು ನೀಡಿದಾಗ ಮುತ್ತಯ್ಯ ಮುರಳಿ ಮೈದಾನದಲ್ಲೇ ಕುಸಿದು ಬಿದ್ದರು . ಅಬ್ಬಾ ಎಂಥ ವಿಪರ್ಯಾಸ ವಿಶ್ವದಲ್ಲಿ ಭರವಸೆ ಆಫ್ ಸ್ಪಿನ್ನರ್  ಒಬ್ಬ  ಥ್ರೋ ಬಾಲ್ ಆಪಾದನೆಗೆ ಒಳಗಾದಾಗ ಊಹಿಸಲೂ ಸಾಧ್ಯವಿಲ್ಲದಂತಹ ಆಘಾತ ಶ್ರೇಷ್ಠ ಬೌಲರ್ ಗೆ ಇದು   ಅವಮಾನ  ಆದರೂ ಎದುರಿಸಲೇಬೇಕಾದ ಆಪಾದನೆ .

ಧೃತಿಗೆಡಲಿಲ್ಲ ಆಪಾದನೆಯನ್ನು ದಿಟ್ಟವಾಗಿ ಎದುರಿಸಲು ಮುತ್ತಯ್ಯ ಮುರಳಿಧರನ್  ಸಜ್ಜಾದರು. ತನ್ನ ಬೌಲಿಂಗ್ ಶೈಲಿಯ ಬಗ್ಗೆ ತನಗೆ ಇದ್ದ ಅತೀವ ಆತ್ಮವಿಶ್ವಾಸ ಆತನನ್ನು ಆತನನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಿತು ಜೊತೆಗೆ ತಂಡದ ನಾಯಕ ಅರ್ಜುನ್ ರಣತುಂಗ ಹಾಗೂ ಶ್ರೀಲಂಕಾದ ಇತರ ಆಟಗಾರರು ಮುತ್ತಯ್ಯ ಮುರಳಿ ಬೆಂಬಲಕ್ಕೆ ನಿಂತರು

ಅಂತಾರಾಷ್ಟ್ರೀಯ ಕ್ರಿಕೆಟ್ ತನಿಖಾ ಸಂಸ್ಥೆಯ ಮುಂದೆ ಮುತ್ತಯ್ಯ ಮುರಳಿ ಬಂದು ನಿಂತರು ಐಸಿಸಿಯ ತಜ್ಞ ಮಂಡಳಿ ಮುತ್ತಯ್ಯ ಮುರಳೀದರನ್ ಬೌಲಿಂಗ್ ಶೈಲಿಯನ್ನು ಪರೀಕ್ಷಿಸಿತು .ಮುತ್ತಯ್ಯ ಮುರಳೀಧರನ್ಗೆ ಹುಟ್ಟಿನಿಂದಲೇ ದೇಹ ಗಾಯವಾಗಿರುವುದು ಪರೀಕ್ಷೆಯಲ್ಲಿ ತಿಳಿದು ಬಂತು ಆದ್ದರಿಂದಲೇ ಆತನ ಬೌಲಿಂಗ್ ಶೈಲಿ ವಿಚಿತ್ರವಾಗಿದೆ ಎಂಬ ನಿರ್ಣಯಕ್ಕೆ ತಜ್ಞ ಮಂಡಳಿಯವರು ಬಂದರು . ಪರೀಕ್ಷೆಯಲ್ಲಿ ಮುತ್ತಯ್ಯ ಮುರಳಿ ಪಾಸಾದ .ಪುನರ್ಜನ್ಮ ಮತ್ತೆ ಲಭಿಸಿತ್ತು .

ಮತ್ತೆ ಯಾವತ್ತೂ ನಿವೃತ್ತಿಯವರೆಗೆ ಮುತ್ತಯ್ಯ ಮುರಳೀದರನ್ ಆರ್ಭಟ ನಿಲ್ಲಲಿಲ್ಲ . ಆಪಾದನೆಯಿಂದ ಹೊರಬಂದ ನಂತರ ಮುತ್ತಯ್ಯ ಮುರಳೀದರನ್ ಇನ್ನಷ್ಟು ಪ್ರಕಾರವಾಗಿ ಬೌಲಿಂಗ್ ಅನ್ನು ಮಾಡತೊಡಗಿದರು ತನ್ನ ವಿಚಿತ್ರ ಸ್ಪಿನ್ನರ್ ನಿಂದಲೇ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳನ್ನು ಮುತ್ತಯ್ಯ ಮುರಳೀದರನ್  ಸಂಪಾದಿಸಿದರು .

ಅಂದ ಹಾಗೆ ಮುತ್ತಯ್ಯ ಮುರಳೀದರನ್ ತಮಿಳುನಾಡಿನ ಅಳಿಯ ಚೆನ್ನೈನ ಬ್ರಾಹ್ಮಣ ಹುಡುಗಿಯನ್ನು ಮದುವೆಯಾಗಿರುವ ಮುತ್ತಯ್ಯ,  ಭಾರತದ ಕ್ರಿಕೆಟ್  ತಂಡದ ಪಾಲಿಗೆ  ಕಾಸ್ಟ್ ಲಿಯಸ್ಟ್  ಅಳಿಮಯ್ಯ ಎಂದರೂ ತಪ್ಪಾಗಲಾರದು . ನಿವೃತ್ತಿಯಾಗುವವರೆಗೂ ತನ್ನ ಪ್ರಕಾರ ಬೌಲಿಂಗ್ನಿಂದ ಬಲಿಷ್ಠ ದಾಂಡಿಗರನ್ನು ನಿದ್ದೆಗೆಡಿಸಿದ್ದ ಬೌಲರ್ ಈ ಮುತ್ತಯ್ಯ ಮುರಳೀದರನ್

LEAVE A REPLY

Please enter your comment!
Please enter your name here