ಶಾಸಕ ನಂಜೇಗೌಡರಿಂದ ದಿನಸಿ ಕಿಟ್ ವಿತರಣೆ

ಶಾಸಕ ನಂಜೇಗೌಡರಿಂದ ದಿನಸಿ ಕಿಟ್ ವಿತರಣೆ

404
0

ಕೊರೊನೊ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು ಕಾರ್ಮಿಕರು, ನೌಕರರು ಹಾಗೂ ಪುರಸಭೆ ಪೌರಕಾರ್ಮಿಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು ಮಾಲೂರು ಶಾಸಕ ಕೈ.ವೈ. ನಂಜೇಗೌಡ, ಉಚಿತ ದಿನಸಿ ಕಿಟ್ ವಿತರಣೆ ಮಾಡಿದ್ರು.

ಕೋಲಾರ ಜಿಲ್ಲೆಯ ಮಾಲೂರಿನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಸಿ.ಎಲ್.ಪಿ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉದ್ಘಾಟನೆ ಮಾಡಿದರು. ಮಾಲೂರು ತಾಲ್ಲೂಕಿನಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗ್ತಿದ್ದು ಈ ನಿಟ್ಟಿನಲ್ಲಿ ಜನರ ಸೇವೆಗೆ ಮೂರು ಆ್ಯಂಬುಲೆನ್ಸ್ ಹಾಗೂ ಮಾಲೂರು ತಾಲ್ಲೂಕಿನ ಪ್ರತಿ ಹಳ್ಳಿಗಳಿಗೂ ಸ್ಯಾನಿಟೇಸೆರ್, ಸಿಂಪಡಿಸುವ ವಾಹನಕ್ಕೆ ಚಾಲನೆ ನೀಡಿದರು.

ಇನ್ನು ಮಾಲೂರು ತಾಲ್ಲೂಕಿನಲ್ಲಿ ಕೊರೊನೊ ಸೋಂಕು ಹೆಚ್ಚಾಗ್ತಿದ್ದು ನಿಯಂತ್ರಿಸುವ ಸಲುವಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿದ್ದು, ಒಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನ ಮಾಡಿದ್ದೇನೆ ಈ ಕುರಿತು ಮಾಲೂರು ತಾಲ್ಲೂಕು ಆಡಳಿ ಜೊತೆಯೂ ಸಭೆ ನಡೆಸಲಾಗಿದೆ, ವಾರದ ಎರಡು ದಿಗಳು ಮಾತ್ರ ಬೆಳಗ್ಗೆ 6 ರಿಂದ 10 ಗಂಟೆಯವರೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು.

ವೈಯುಕ್ತಿಕವಾಗಿ ಇಂದಿರಾ ಕ್ಯಾಂಟೀನ್ ತೆರೆದಿದ್ದು ಹಸಿದವರಿಗೆ ಅನ್ನ ನೀಡುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಾಗಿದೆ. ಜೊತೆಗೆ ೩೫ ಸಾವಿರ ಪೌರಕಾರ್ಮಿಕರು ಆಶಾ ಕಾರ್ಯಕರ್ತರಿಗೆ ಹಾಗೂ ಬಡ ಕುಟುಂಬಗಳಿಗೆ ದಿನಸಿ ಕಿಟ್, ತರಕಾರಿ ವಿತರಿಸುವ ಗುರಿಯನ್ನು ಹೊಂದಿದ್ದೇನೆ ತಾಲ್ಲೂಕಿನ ಜನತೆಯ ಜೊತೆ ಸದಾ ಸಂಪರ್ಕದಲ್ಲಿದ್ದು ಜನರ ಸಂಕಷ್ಟದ ಜೊತೆ ಇರ್ತೇನೆ ಎಂದರು.

VIAಶಾಸಕ ನಂಜೇಗೌಡರಿಂದ ದಿನಸಿ ಕಿಟ್ ವಿತರಣೆ
SOURCEಶಾಸಕ ನಂಜೇಗೌಡರಿಂದ ದಿನಸಿ ಕಿಟ್ ವಿತರಣೆ
Previous articleಸಾವಿನ ದಾರಿ ಹಿಡಿದ್ದವರಿಗೆ ಅಂತು ಸಿಕ್ಕಿತು ಮರುಜೀವ!
Next articleಯಶವಂತಪುರದಲ್ಲಿ ಜನಸಾಗರ; ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಜನ

LEAVE A REPLY

Please enter your comment!
Please enter your name here