ಕೊರೋನಾ ಪಾಸಿಟಿವ್ ಸೋಂಕಿತರು ಆತ್ಮವಿಶ್ವಾಸದಿಂದ ಗುಣಮುಖರಾಗಿ; ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಮನವಿ

ಕೊರೋನಾ ಪಾಸಿಟಿವ್ ಸೋಂಕಿತರು ಆತ್ಮವಿಶ್ವಾಸದಿಂದ ಗುಣಮುಖರಾಗಿ; ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಮನವಿ

321
0

ಕೊರೋನಾ ಯುದ್ಧವನ್ನು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗೆಲ್ಲಬೇಕು. ಕೊರೋನಾ ಪಾಸಿಟಿವ್ ಸೋಂಕಿತರು ಧೈರ್ಯಗೆಡದೇ ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ತೆರಳಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಮನವಿ ಮಾಡಿದರು.

ಅವರು ಇಂದು ತಾಲ್ಲೂಕು ಆಡಳಿತದೊಂದಿಗೆ ಕೆಆರ್ ಪೇಟೆ ತಾಲ್ಲೂಕಿನ ಶೆಟ್ಟನಾಯಕನಕೊಪ್ಪಲು ಗ್ರಾಮದಲ್ಲಿರುವ ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯಲ್ಲಿ ಸ್ಥಾಪಿಸಿರುವ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರೊಂದಿಗೆ ಸಂವಾದ ನಡೆಸಿ ಕೇಂದ್ರದಲ್ಲಿನ ಸಮಸ್ಯೆಗಳನ್ನು ಆಲಿಸಿದರು.

ಮಂಡ್ಯ ಜಿಲ್ಲೆಗೆ ಆಕ್ಸಿಜನ್ ಸಿಲಿಂಡರ್ ಗಳು, ರೆಮಿಡಿಸಿವರ್ ಇಂಜಕ್ಷನ್, ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಮತ್ತು ಔಷಧಗಳು ನಿಗಧಿತವಾಗಿ ಅಗತ್ಯ ಪ್ರಮಾಣದಲ್ಲಿ ಸರಬರಾಜಾಗಿವೆ. ಜಿಲ್ಲೆಯ ಎಲ್ಲಾ ಏಳೂ ತಾಲೂಕುಗಳಲ್ಲಿಯೂ ಸೋಂಕಿತರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯುತ್ತಿದೆ. ಕೆಲವರು ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಕೇವಲ ರಾಜಕೀಯ ಕಾರಣಕ್ಕಾಗಿ ಅಪಪ್ರಚಾರ ಮಾಡದೇ ಕೋವಿಡ್ 2ನೇ ಅಲೆಯ ಸಂಕಷ್ಟದ ಸಮಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಮೂಲಕ ಸಹಾಯ ಹಸ್ತವನ್ನು ಚಾಚಿ ಮಹಾಮಾರಿಯ ಹಾವಳಿಯನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಕೈಮುಗಿದು ಮನವಿ ಮಾಡಿದ ಸಚಿವ ನಾರಾಯಣಗೌಡ ಜಿಲ್ಲೆಯಲ್ಲಿ ಸೋಂಕಿತರಿಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತಿದೆ, ಕೋವಿಡ್ ನಿಯಂತ್ರಣ ಮಾಡಲು ತಾಲ್ಲೂಕು ಮತ್ತು ಜಿಲ್ಲಾಡಳಿತ ಹಗಲಿರುಳೆನ್ನದೇ ದಿನದ 24ಗಂಟೆಗಳ ಕಾಲವೂ ದುಡಿಯುತ್ತಿದ್ದಾರೆ. ಆದ್ದರಿಂದ ಸೋಂಕಿತರು ಎದೆಗುಂದದೇ ಧೈರ್ಯದಿಂದ ಚಿಕಿತ್ಸೆ ಪಡೆದುಕೊಂಡು ಶೀಘ್ರ ಗುಣಮುಖರಾಗಿ ಮನೆಗೆ ತೆರಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್,ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ, ವಸತಿಶಾಲೆಯ ಪ್ರಾಂಶುಪಾಲೆ ಪವಿತ್ರ, ಸಚಿವರ ಆಪ್ತಸಹಾಯಕರಾದ ದಯಾನಂದ, ಕಿಕ್ಕೇರಿ ಕುಮಾರ್, ಪ್ರಶಾಂತ್ ಮತ್ತು ಕೋವಿಡ್ ಹೆಲ್ತ್ ಕೇರ್ ಸೆಂಟರ್ ಸಿಬ್ಬಂಧಿಗಳು ವೈದ್ಯರು ಉಪಸ್ಥಿತರಿದ್ದರು.

VIAಕೊರೋನಾ ಪಾಸಿಟಿವ್ ಸೋಂಕಿತರು ಆತ್ಮವಿಶ್ವಾಸದಿಂದ ಗುಣಮುಖರಾಗಿ; ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಮನವಿ
SOURCEಕೊರೋನಾ ಪಾಸಿಟಿವ್ ಸೋಂಕಿತರು ಆತ್ಮವಿಶ್ವಾಸದಿಂದ ಗುಣಮುಖರಾಗಿ; ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಮನವಿ
Previous articleಭುಗಿಲೆದ್ದ ಚಂಡಮಾರುತ; ಸಮುದ್ರದ ಅಬ್ಬರಕ್ಕೆ ತೀರದಲ್ಲಿದ್ದ ರುದ್ರಭೂಮಿ ನೀರುಪಾಲು
Next articleಕೊರೋನಾ ನಿಯಂತ್ರಣದ ಕುರಿತು ಅಶ್ವಥ್ ನಾರಾಯಣ್ ಹೇಳಿದ್ದೇನು ಗೊತ್ತೇ?

LEAVE A REPLY

Please enter your comment!
Please enter your name here