ನರೇಶ್ ಒಂದೊಂದು ತಿಂಗಳು ಒಂದೊಂದು ಹುಡುಗಿಯರ ಜೊತೆ ನಾಟಕವಾಡುತ್ತಾನೆ: ರಮ್ಯಾ ರಘುಪತಿ

ಚಲನಚಿತ್ರ

ಮೈಸೂರು: ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನಗುತ್ತಾ ಹೋಗಿದ್ದೆ ಇಂದು ನನಗೆ ಸಿಕ್ಕ ಜಯ ಎಂದು ಪತಿ ನರೇಶ್ ವಿರುದ್ಧ ರಮ್ಯಾ ರಘುಪತಿ ವ್ಯಂಗ್ಯವಾಡಿದ್ದಾರೆ.

ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಪ್ರಕರಣ ನಿತ್ಯ ಒಂದಲ್ಲ ಒಂದು ತಿರುವು ಪಡೆದುಕೊಳ್ಳುತ್ತಿದ್ದೆ. ಈ ಮಧ್ಯೆ ಜಿದ್ದಿಗೆ ಬಿದ್ದವರಂತೆ ರಮ್ಯಾ, ಪವಿತ್ರ ಹಾಗೂ ನರೇಶ್ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್‍ವೊಂದರಲ್ಲಿ ಒಂದೇ ರೂಮ್‍ನಲ್ಲಿ ತಂಗಿದ್ದ ಪವಿತ್ರಾ ಲೋಕೇಶ್, ನರೇಶ್ ಮೇಲೆ ರಮ್ಯಾ ರಘುಪತಿ ಅವರು ಚಪ್ಪಲಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದರು.

ಘಟನೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಮ್ಯಾ ರಘುಪತಿ, ಬೆಸ್ಟ್ ಫ್ರೆಂಡ್ಸ್ ಅಂತ ಹೇಳಿ ರಾತ್ರಿ ಎಲ್ಲ ಒಂದೇ ರೂಮ್‍ನಲ್ಲಿದ್ದರು. ಅವರು ಮಾಡಿರುವ ತಪ್ಪನ್ನು ಹೇಗೆ ಮರೆಮಾಚಿಕೊಂಡು ಹೋಗಬೇಕು ಎಂದು ತಿಳಿಯದೇ ನಗುತ್ತಾ ಹೋದರು. ಮೀಸೆ ಜಾರಿ ನೆಲದ ಮೇಲೆ ಬಿದ್ದರೂ ನರೇಶ್ ನಗುತ್ತಾ ಹೋಗಿದ್ದೆ, ಇಂದು ನನಗೆ ಸಿಕ್ಕ ಜಯ ಎಂದಿದ್ದಾರೆ.

ಕಳೆದ ಹತ್ತು ವರ್ಷದಿಂದ ಇದೇ ಯಾತನೆ ಅನುಭವಿಸುತ್ತಿದ್ದೇನೆ. ಮದುವೆಯಾದ ಕೇವಲ ಒಂದು ವರ್ಷ ಚೆನ್ನಾಗಿದ್ದೆವು. ಆದರೆ ನಮ್ಮ ಸಂಸಾರದಲ್ಲಿ ಬಿರುಕು ಮೂಡಲು ಹೊರಗಿನ ವ್ಯಕ್ತಿಯೇ ಕಾರಣವಾಗಿದ್ದಾರೆ. ಒಂದೊಂದು ತಿಂಗಳು ಒಂದೊಂದು ಹುಡುಗಿಯರ ಜೊತೆಗೆ ನಾಟಕವಾಡುತ್ತಾನೆ. ನಮ್ಮ ಅತ್ತೆ ಇಲ್ಲದೇ ಇರುವ ಕಾರಣ ಈಗ ನನಗೆ ಡಿವೋರ್ಸ್ ನೋಟಿಸ್ ನೀಡಿದ್ದಾನೆ. ನಾನು ಹಿಂದೂ ಕುಟುಂಬದಲ್ಲಿ ಜನಿಸಿದ್ದು, ನನಗೆ ಈ ಡಿವೋರ್ಸ್ ಮೇಲೆ ನಂಬಿಕೆ ಇಲ್ಲ. ಒಂದು ಸರಿ ಮದುವೆಯಾದ ನಂತರ ಕಷ್ಟವಾದರೂ, ಸುಖವಾದರೂ ನಿಭಾಯಿಸಿಕೊಂಡು ಹೋಗುತ್ತೇನೆ. ನನ್ನ ಮಗನಿಗೂ ಡಿವೋರ್ಸ್ ನೀಡುವುದು ಇಷ್ಟವಿಲ್ಲ. ಇದರ ಪರಿಣಾಮವಾಗಿ ಪ್ರತಿ ದಿನ ನನ್ನ ಮಗ ಅಳುತ್ತಿದ್ದಾನೆ ಎಂದು ಅಸಮಾಧಾನ ಹೊರ ಹಾಕಿದರು.

ನನ್ನ ಮಗನನ್ನು ಕಸ್ಟಡಿಗೆ ಕೇಳಿದ್ದಾರೆ. ಕೇವಲ 10 ದಿನಕ್ಕೊಮ್ಮೆ ರೈಡ್‍ಗೆ ಕರೆದುಕೊಂಡು ಹೋಗಿ, ಪಿಜ್ಜಾ ಕೊಡಿಸಿಬಿಟ್ಟರೆ ತಂದೆಯಾಗುವುದಿಲ್ಲ. ಪ್ರತಿ ಕ್ಷಣ ಮಗನೊಂದಿಗೆ ನಿಂತು ಸರಿಯಾದ ದಾರಿಯಲ್ಲಿ ನಡೆಸುವವನೇ ನಿಜವಾದ ಅಪ್ಪ. ನಮ್ಮ ಅತ್ತೆ ಇದ್ದಿದ್ದರೆ ಇಂದು ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಎಷ್ಟೋ ನ್ಯಾಯ ಪಂಚಾಯಿತಿಯನ್ನು ಮಾಡಿ ನಮ್ಮ ಅತ್ತೆ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಆದರೆ ಈಗ ನಾನು ರಸ್ತೆಯಲ್ಲಿ ನಿಂತಿದ್ದೇನೆ ಎಂದು ಮಾಧ್ಯಮಗಳ ಮುದೆ ಅಳಲು ತೋಡಿಕೊಂಡರಿದ್ದಾರೆ.

Leave a Reply

Your email address will not be published.