ಅಂಧ ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ಟೂರ್ನಿ: ಕರ್ನಾಟಕ್ಕೆ 2ನೇ ಜಯ

ಕ್ರೀಡೆ

ಬೆಂಗಳೂರು: ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆತಿಥೇಯ ಕರ್ನಾಟಕ ತಂಡ ಸತತ 2ನೇ ಗೆಲುವು ಸಾಧಿಸಿದೆ. ಗುಜರಾತ್‌ ವಿರುದ್ಧ ರಾಜ್ಯ ತಂಡ 8 ವಿಕೆಟ್‌ ಜಯಗಳಿತು. ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ನಿಗದಿತ 15 ಓವರ್‌ ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 151 ರನ್‌ ಗಳಿಸಿತು. ರಾಜ್ಯ ತಂಡ 14.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ರಾಜ್ಯ ತಂಡಕ್ಕೆ ಕೇರಳ ಎದುರಾಗಲಿದೆ.

Leave a Reply

Your email address will not be published.