ರಷ್ಯಾದ ಉಕ್ರೇನ್ ಆಕ್ರಮಣದ ಕುರಿತು ತುರ್ತು ಮಾತುಕತೆ ನಡೆಸಲಿರುವ ನ್ಯಾಟೋ ವಿದೇಶಾಂಗ ಮಂತ್ರಿಗಳು

ಅಂತರಾಷ್ಟ್ರೀಯ

ಉಕ್ರೇನ್ :ನ್ಯಾಟೋ ವಿದೇಶಾಂಗ ಮಂತ್ರಿಗಳು ಶುಕ್ರವಾರ ಬ್ರಸೆಲ್ಸ್‌ ನಲ್ಲಿ ರಷ್ಯಾದ ಉಕ್ರೇನ್ ಆಕ್ರಮಣದ ಕುರಿತು ತುರ್ತು ಮಾತುಕತೆ ನಡೆಸಲಿದ್ದಾರೆ ಎಂದು ಒಕ್ಕೂಟವು ಹೇಳಿಕೆಯಲ್ಲಿ ತಿಳಿಸಿದೆ. ಪುಟಿನ್ ದಾಳಿಗೆ ಆದೇಶಿಸಿದ ನಂತರ NATO ಮಿತ್ರರಾಷ್ಟ್ರಗಳು ತಮ್ಮ ಪೂರ್ವ ಪ್ರದೇಶವನ್ನು ಬಲಪಡಿಸಲು ಧಾವಿಸಿವೆ. ಆದರೆ, NATO ಸದಸ್ಯತ್ವ ಹೊಂದಿಲ್ಲದ ದೇಶಗಳು ತಟಸ್ಥವಾಗಿ ಉಳಿದಿವೆ. ಜಾಗತಿಕ ಸೂಪರ್​ಪವರ್ ರಷ್ಯಾ ತನ್ನ ನೆರೆಯ ಉಕ್ರೇನ್ ವಿರುದ್ಧ ದಂಡೆತ್ತಿ ಹೋಗಿರುವುದು ವಿಶ್ವದೆಲ್ಲೆಡೆ ತಲ್ಲಣ ಹುಟ್ಟಿಸಿದೆ. ವಿದ್ಯಾಭ್ಯಾಸಕ್ಕೆಂದು ಉಕ್ರೇನ್​ಗೆ ತೆರಳಿರುವ ತನ್ನ ವಿದ್ಯಾರ್ಥಿಗಳನ್ನು ತರಾತುರಿಯಲ್ಲಿ ಹಿಂದಕ್ಕೆ ಕರೆಸಿಕೊಳ್ಳಲು

ಭಾರತವೂ ಸೇರಿದಂತೆ ವಿವಿಧ ದೇಶಗಳ ವಿದೇಶಾಂಗ ವ್ಯವಹಾರಗಳ ಇಲಾಖೆಯು ಕೊನೇ ಕ್ಷಣದ ಪ್ರಯತ್ನಗಳನ್ನು ಮುಂದುವರಿಸಿವೆ. ಉಕ್ರೇನ್​ನಲ್ಲಿ ರಷ್ಯನ್ ಪಡೆಗಳ ದಾಳಿಗೆ ಹಾವೇರಿಯ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದಾರೆ. ಸಂಘರ್ಷ ಆರಂಭವಾದ ನಂತರ ಉಕ್ರೇನ್​ನಲ್ಲಿ ಮೃತಪಟ್ಟ ಮೊದಲ ಭಾರತೀಯ ವಿದ್ಯಾರ್ಥಿ ಇವರು. ರಷ್ಯಾ ಬೆದರಿಕೆಗಳಿಗೆ ಸೊಪ್ಪು ಹಾಕದ ಉಕ್ರೇನ್ ತನ್ನಿಂದ ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಹೋರಾಟ ಮುಂದುವರಿಸಿದ್ದು, ತುರ್ತು ನೆರವಿಗಾಗಿ ವಿಶ್ವ ಸಮುದಾಯದ ಮೊರೆಯಿಟ್ಟಿದೆ.

Leave a Reply

Your email address will not be published.