Navyashree.. ಆಸ್ಪತ್ರೆ ಊಟ ಬೇಡ, ಚಿಕನ್ ಬಿರಿಯಾನಿ ಬೇಕು: ನವ್ಯಶ್ರೀ ಕಿರಿಕ್

ಜಿಲ್ಲೆ

ಬೆಳಗಾವಿ: ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀಗೆ ಆಸ್ಪತ್ರೆ ಊಟ ಬೇಡ್ವಂತೆ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದ್ದಾರೆ. ನಗರದ ಚೆನ್ನಮ್ಮ ವೃತ್ತದ ಸಮೀಪದಲ್ಲಿರುವ ಬೀಮ್ಸ್ ಆಸ್ಪತ್ರೆಯಲ್ಲಿರುವ ನವ್ಯಶ್ರೀ ಆರ್ ರಾವ್ ಸಿಬ್ಬಂದಿ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ.

ಚೆನ್ನಪಟ್ಟಣ ಮೂಲದ ನವ್ಯಶ್ರೀ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ ಅತ್ಯಾಚಾರ, ಗರ್ಭಪಾತ, ದೈಹಿಕ ಹಲ್ಲೆ ಸೇರಿ ಹತ್ತು ಸೆಕ್ಷನಡಿ ಕೇಸ್ ದಾಖಲಿಸಿದ್ದರು.ಇತ್ತ ಪ್ರಕರಣ ದಾಖಲಿಸಿಕೊಂಡ ಎಪಿಎಂಸಿ ಪೊಲೀಸರು ನವ್ಯಶ್ರೀ ಅವರನ್ನು ವೈದ್ಯಕೀಯ ತಪಾಸಣೆ ನಡೆಸಲು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ನವ್ಯಶ್ರೀ ಆಸ್ಪತ್ರೆ ಊಟ ಬೇಡ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು. ಬೆಳಗ್ಗೆ ಸ್ನಾನ ಮಾಡಲು ಬಿಸಿನೀರು ಬೇಕು ಎಂದು ಪಟ್ಟು ಹಿಡಿದಿದ್ದಲ್ಲದೇ, ನಾನು ಹೊರಗಡೆ ಹೋಗುವುದಾಗಿ ಆಸ್ಪತ್ರೆ ಸಿಬ್ಬಂದಿ ಜೊತೆಗೆ ನವ್ಯಶ್ರೀ ವಾಗ್ವಾದ ನಡೆಸಿದ್ದಾರೆ. ಬಳಿಕ ಪೊಲೀಸರು ಮಧ್ಯಸ್ಥಿಕೆ ವಹಿಸಿ ನವ್ಯಶ್ರೀ ಕಿರಿಕ್‍ಗೆ ಸ್ನಾನ ಬಿಸಿನೀರು, ಹೋಟೆಲ್‍ನಿಂದ ಪಲಾವ್ ತಂದುಕೊಟ್ಟಿದ್ದಾರೆ.

 

Leave a Reply

Your email address will not be published.