ಭಾರತೀಯ ಪರಂಪರೆ ಹಾಗೂ ಧರ್ಮ ಎಲ್ಲಾ ಧರ್ಮಗಳ ರಕ್ಷಕನಾಗಿ ನಿಂತಿದೆ: ಸಚಿವ ಆರಗ ಜ್ಞಾನೇಂದ್ರ

ಜಿಲ್ಲೆ

ಶಿವಮೊಗ್ಗ: ಭಾರತೀಯ ಧರ್ಮ, ಸಂಸ್ಕೃತಿ ಹಾಗೂ ಪರಂಪರೆ ಯಾವುದೇ ಅನ್ಯ ಧರ್ಮದ ವಿರುದ್ಧ ಇಲ್ಲ. ಅದನ್ನು ಬಲಪಡಿಸುವ ವ್ಯವಸ್ಥೆ ಹಾಗೂ ಸರ್ಕಾರಗಳು ಬರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಾದಿಸಿದ್ದಾರೆ.

ತೀರ್ಥಹಳ್ಳಿಯ ಯೋಗ ಸಮಿತಿ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇಶದ ಸಾಂಸ್ಕೃತಿಕ ಚೌಕಟ್ಟನ್ನು ಬಲಪಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಜಗತ್ತಿನಲ್ಲಿ ಭಾರತೀಯ ಪರಂಪರೆಗೆ ಇಂದು ದೊಡ್ಡ ಸ್ಥಾನ ಇದೆ. ಭಾರತೀಯ ಪರಂಪರೆ ಹಾಗೂ ಧರ್ಮ ಎಲ್ಲಾ ಧರ್ಮಗಳ ರಕ್ಷಕನಾಗಿ ನಿಂತಿದೆ. ವಿಶ್ವದ ಎಲ್ಲಾ ಧರ್ಮಗಳನ್ನು ಎತ್ತಿ ಹಿಡಿದಿರುವ ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ, ಸವಾಲಿನ ದಿನಗಳನ್ನು ಕಾಣುತ್ತಿದೆ ಎಂದಿದ್ದಾರೆ.

Leave a Reply

Your email address will not be published.