
ಹೊಸ ಮನೆ ಖರೀದಿಸಿದ ರಣ್ವೀರ್-ದೀಪಿಕಾ; ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..?
ಬಾಲಿವುಡ್ನ ಸ್ಟಾರ್ ಜೋಡಿ ರಣ್ವೀರ್ ಮತ್ತು ದೀಪಿಕಾ ಪಡುಕೋಣೆ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಹೊಸ ಪ್ಲ್ಯಾಂಟ್ ಅನ್ನು ಖರೀದಿಸಿದೆ. 119 ಕೋಟಿಯ ದುಬಾರಿ ಮನೆಯನ್ನ ರಣ್ವೀರ್ ಸಿಂಗ್ ದಂಪತಿ ಖರೀದಿ ಮಾಡಿದ್ದಾರೆ.
ಜೋಡಿ ಹಕ್ಕಿಗಳಾಗಿ ಸಾಕಷ್ಟು ಹಿಟ್ ಚಿತ್ರಗಳನ್ನ ಕೊಟ್ಟಿರೋ ದೀಪಿಕಾ ಮತ್ತು ರಣ್ವೀರ್ ನಿಜಜೀವನದಲ್ಲೂ ಬೆಸ್ಟ್ ಜೋಡಿಯಾಗಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಿದ್ದಾರೆ. ಇದೀಗ ಮುಂಬೈನ ಐಷರಾಮಿ ಮನೆಯನ್ನ 119 ಕೋಟಿಗೆ ಖರೀದಿ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ಗೆ ನೆರೆಹೊರೆಯವರಾಗಿದ್ದು, ಇವರಿಬ್ಬರ ಮನೆಯ ಮಧ್ಯೆ ದೀಪಿಕಾ ದಂಪತಿ ಮನೆ ಖರೀದಿಸಿದ್ದಾರೆ.
ಯುಎಸ್ ಪ್ರವಾಸದಲ್ಲಿದ್ದ ಈ ಜೋಡಿ ಮುಂಬೈನಲ್ಲಿ ಇದೀಗ ಐಷರಾಮಿ ಮನೆ ಖರೀದಿಸಿರುವುದು ಬಿಟೌನ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಾಲಿವುಡ್ ಬಿಗ್ ಸ್ಟಾರ್ ಶಾರುಖ್ ಮತ್ತು ಸಲ್ಮಾನ್ ಮನೆಯ ಬಳಿ ದೀಪಿಕಾ ದಂಪತಿ ಮನೆ ಖರೀದಿಸಿರುವುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.