
VTU ಇತಿಹಾಸದಲ್ಲೇ ಹೊಸ ದಾಖಲೆ: 16 ಚಿನ್ನದ ಪದಕ ಪಡೆದ ರಾಯಚೂರು ವಿದ್ಯಾರ್ಥಿನಿ
ರಾಯಚೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ರಾಯಚೂರಿನ ವಿದ್ಯಾರ್ಥಿನಿ ಅತೀ ಹೆಚ್ಚು ಚಿನ್ನದ ಪದಕ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾಳೆ. ನಗರದ ಎಸ್.ಎಲ್.ಎನ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿನಿ ಬುಶ್ರಾ ಮತೀನ್ 16 ಚಿನ್ನದ ಪದಕ ಪಡೆಯುವ ಮೂಲಕ ಹೊಸ ದಾಖಲೆ ಮಾಡಿದ್ದಾಳೆ. ಅತೀ ಹೆಚ್ಚು ಅಂಕಪಡೆಯುವ ಮೂಲಕ ಮೊದಲ ರ್ಯಾಂಕ್ ಪಡೆದಿರುವುದಲ್ಲದೇ ವಿವಿಧ ವಿಭಾಗಗಳ 16 ಚಿನ್ನದ ಪಡೆದಿದ್ದಾಳೆ. ಇಂಜಿನಿಯ ರಿಂಗ್ನ ಎಲ್ಲಾ ಸೆಮಿಸ್ಟರ್ಗಳಲ್ಲೂ ವಿಟಿಯುನಲ್ಲೆ ಅತೀ ಹೆಚ್ಚು ಅಂಕ ಪಡೆದಿದ್ದಾಳೆ.
ಜೊತೆಗೆ ಓದಿನಲ್ಲಿ ಸದಾ ಮುಂದಿದ್ದು ಸಾಕಷ್ಟು ಪದಕಗಳನ್ನು ಪಡೆದಿದ್ದಾಳೆ. ಈಗ 16 ಚಿನ್ನದ ಪದಕಗಳ ಮೂಲಕ ಹೊಸ ದಾಖಲೆ ಮಾಡಿದ್ದಾಳೆ.ಮಾರ್ಚ್ 10 ಕ್ಕೆ ಬೆಳಗಾವಿಯ ವಿಟಿಯುನಲ್ಲಿ ನಡೆಯಲಿರುವ ವಿವಿಯ 21 ನೇ ಘಟಿಕೋತ್ಸವದಲ್ಲಿ ಬುಶ್ರಾ ಮತೀನ್ಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದೆ. ಯುಪಿಎಸ್ಸಿಗೆ ತಯಾರಿ ನಡೆಸಿರುವ ಬುಶ್ರಾ ಐಎಎಸ್ ಕನಸು ಹೊತ್ತಿದ್ದಾಳೆ. ಈ ಮಧ್ಯೆ “ಹಿಜಾಬೀಸ್ ರಾಕ್ಸ್” ಅಂತ ಕೆಲ ಕಿಡಿಗೇಡಿಗಳು ಟ್ರೋಲ್ ಮಾಡುತ್ತಿರುವುದು ವಿದ್ಯಾರ್ಥಿನಿ ಹಾಗೂ ಕುಟುಂಬಸ್ಥರಿಗೆ ಬೇಸರ ತಂದಿದೆ.