
ಮುಂದಿನ ತಿಂಗಳಿನಿಂದ ಮತ್ತೆ ಪ್ರಾರಂಭವಾಗಲಿವೆ 400 ಕೋಟಿ ರೂಗಳ ಕಾಮಗಾರಿಗಳು
ಯಲಹಂಕ: ಯಲಹಂಕ ವಿಧಾನ ಸಭಾ ಕ್ಷೇತ್ರದ ಬಿ.ಬಿ.ಎಂ.ಪಿ ವಾರ್ಡ್ – 03 ಮತ್ತು ವಾರ್ಡ್ – 04 ರಲ್ಲಿ ಇಂದು 2021-22 ನೇ ಸಾಲಿನ ” ಶಾಸಕರು ಹಾಗೂ ಆಡಳಿತಗಾರರ ಬಿ.ಬಿ.ಎಂ.ಪಿ ಅನುದಾನಡದಿಯಲ್ಲಿ ಒಟ್ಟು ಅಂದಾಜು 10 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಅನಂತಪುರ ಗೇಟ್ ನಲ್ಲಿ ನೂತನ ಬಸ್ ನಿಲ್ದಾಣ , ಎನ್.ಇ.ಎಸ್ ವೃತ್ತದಲ್ಲಿ ಟವರ್ ಲೈಟಿಂಗ್, ಸುಸಜ್ಜಿತ ಸಾರ್ವಜನಿಕ ಶೌಚಾಲಯ, ಆರ್.ಓ ಪ್ಲಾಂಟ್ ಹಾಗೂ ಯಲಹಂಕ ಓಲ್ಡ್ ಟೌನ್ ನಲ್ಲಿ ನಿರಾಶ್ರಿತರ ತಂಗುದಾಣ ಉದ್ಘಾಟಿಸಲಾಯಿತು… ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಎರಡು ತಿಂಗಳ ಹಿಂದೆ ಜನಸ್ಪಂದನ ಕಾರ್ಯಕ್ರಮ ಮಾಡಿ ನಾಲ್ಕು ವಾರ್ಡಿನ ಹಿರಿಯರು ನಾಗರೀಕರು ಸಂಘ ಸಂಸ್ಥೆಗಳನ್ನು ಕರೆದು ಏನು ಕೆಲಸಗಳಾಗಬೇಕು ಎಂದು ಅವರ ಕಡೆಯಿಂದ ಪಟ್ಟಿಯನ್ನು ತೆಗೆದುಕೊಂಡು ಅದರಂತೆ ಇವತ್ತು ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿ ಅವರ ಅಮೃತ ಯೋಜನೆಯಡಿಯಲ್ಲಿ 175 ಕೋಟಿ ಅನುದಾನವನ್ನು ಕೊಟ್ಟಿದ್ದಾರೆ ನಮ್ಮ ನಾಗರಿಕರು ಹೇಳಿದಂತಹ ಎಲ್ಲಾ ಕೆಲಸಗಳು ಸೇರಿ ಟೆಂಡರ್ ಪ್ರೊಸೆಸಿಂಗ್ ಆಗುತ್ತಿದೆ ಮುಂದಿನ ತಿಂಗಳಿನಿಂದ ನಾಲ್ಕು ವಾರ್ಡಿಗೆ ನಮ್ಮ ಪ್ರಾಜೆಕ್ಟ್ ಪ್ರತ್ಯೇಕ ರಸ್ತೆಗೆ 35 ಕೋಟಿ ವಾರ್ಡ್ ವರ್ಕಿಂಗ್ ಗೆ 175 ಕೋಟಿ ಆಗಿರತಕಂತದು ಸ್ಟಾರ್ ಮಾಟರ್ ಡ್ರೈನೇಜ್ 106 ಕೋಟಿ ಟೆಂಡರ್ ಕೂಡ ನಡೆಯುತ್ತಿದೆ ಒಟ್ಟಾರೆ 400 ಕೋಟಿ ರೂಗಳ ಕಾಮಗಾರಿಗಳು ಮುಂದಿನ ತಿಂಗಳಿನಿಂದ ಮತ್ತೆ ಪ್ರಾರಂಭವಾಗಲಿವೆ ಎಂದು ತಿಳಿಸಿದರು..